ಹಾವೇರಿ ಮುಸ್ಲಿಂ ಯುವಕನಿಂದ ಕಿಡ್ನ್ಯಾಪ್ ಆಗಿದ್ದ ಹಿಂದೂ ಯುವತಿ ಗೋವಾದಲ್ಲಿ ಪತ್ತೆ!

By Sathish Kumar KH  |  First Published Jan 17, 2024, 3:36 PM IST

ಹಾವೇರಿಯ ಹಾನಗಲ್‌ ಪಟ್ಟಣದಿಂದ ಕಿಡ್ನ್ಯಾಪ್ ಮಾಡಲಾಗಿದ್ದ ಹಿಂದೂ ಯುವತಿಯು ಗೋವಾದಲ್ಲಿ ಮುಸ್ಲಿಂ ಯುವಕನೊಂದಿಗೆ ಪತ್ತೆಯಾಗಿದ್ದಾಳೆ.


ಹಾವೇರಿ (ಜ.17): ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಗ್ಯಾಂಗ್‌ರೇಪ್‌ ಆರೋಪ ಪ್ರಕರಣಕ್ಕೆ ಸಾಕ್ಷಿಯಾಗಿರುವ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಹಿಂದೂ ಯುವತಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಮುಸ್ಲಿಂ ಯುವಕನೊಬ್ಬ ಕಿಡ್ನಾಪ್‌ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇನ್ನು ಪೊಲೀಸರ ತೀವ್ರ ಕಾರ್ಯಾಚರಣೆಯಿಂದ ಮುಸ್ಲಿಂ ಯುವಕ ಅಪ್ತಾಬ್ ಮತ್ತು ಹಿಂದೂ ಯುವತಿ ರೇಣುಕಾ ಗೋವಾದ ಮಡಗಾಂವ್‌ನಲ್ಲಿ ಪತ್ತೆಯಾಗಿದ್ದಾರೆ.

ಹಾನಗಲ್ ಪಟ್ಟಣದ ಹಿಂದೂ ಯುವತಿ ಕಿಡ್ನ್ಯಾಪ್‌ ಪ್ರಕರಣ ಈಗ ಸುಖಾಂತ್ಯದತ್ತ ಸಾಗಿದೆ. ನಾಪತ್ತೆಯಾಗಿದ್ದ ಹಿಂದೂ ಯುವತಿ ರೇಣುಕಾ ಕಲಾಲ್‌ ಗೋವಾದಲ್ಲಿ ಪತ್ತೆಯಾಗಿದ್ದಾಳೆ. ನಾಪತ್ತೆಯಾಗಿದ್ದ ಯುವತಿಯನ್ನ ಪತ್ತೆ ಹಾವೇರಿ ಜಿಲ್ಲಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾಲೇಜಿಗೆ ಹೋಗಿದ್ದ ಮಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಯುವತಿ ತಂದೆ ಹಾನಗಲ್ ಪೋಲೀಸ್  ಠಾಣೆಯಲ್ಲಿ  ಕಿಡ್ನ್ಯಾಪ್‌ ಪ್ರಕರಣ ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಕ್ಕೆ ಇಳಿದ ಪೊಲೀಸರಿಗೆ ಗೋವಾದ ಮಡಗಾಂವ್ ನಲ್ಲಿ ಯುವತಿ ರೇಣುಕಾ ಕಲಾಲ್ ಪತ್ತೆಯಾಗಿದ್ದಾಳೆ.

Tap to resize

Latest Videos

undefined

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲ್ಲೇ ದಾಖಲಾಯ್ತು ಕಿಡ್ನಾಪ್ ಕೇಸ್! ಕಾಲೇಜಿಗೆ ಹೋಗಿದ್ದ ಹಿಂದು ಯುವತಿಯ ಕಿಡ್ನಾಪ್!

ಇನ್ನು ಹಿಂದೂ ಯುವತಿಯೊಂದಿಗೆ ಕಿಡ್ನಾಪ್‌ ಆರೋಪಿಯಾದ ಅಫ್ತಾಬ್‌ ಕೂಡ ಸಿಕ್ಕಿಬಿದ್ದಿದ್ದಾನೆ. ಇನ್ನು ಪೊಲೀಸರನ್ನು ಕಂಡಾಕ್ಷಣ ಯುವತಿಯನ್ನು ಬಿಟ್ಟು ಓಡಲು ಯತ್ನಿಸಿದ ಅಫ್ತಾಬ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಯುವತಿ ತಂದೆಯೂ ಕೂಡ ಹಾನಗಲ್ ಪಟ್ಟಣದ ನಿವಾಸಿ ಅಫ್ತಾಬ್ ಎಂಬ ಯುವಕ ಕಿಡ್ನಾಪ್ ಮಾಡಿದ್ದಾನೆಂದು ಆರೋಪಿಸಿ ದೂರು ನೀಡಿದ್ದರು.  ಜನವರಿ 11 ರಂದು ಯುವತಿ ಕಾಲೇಜಿಗೆ ತೆರಳಿದ್ದಾಗ ಘಟನೆ ನಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈಗ ಯುವತಿ ಪೊಲೀಸರಿಗೆ ಸಿಕ್ಕಿದ್ದು ಸುಖಾಂತ್ಯವಾಗುವ ಲಕ್ಷಣ ಕಂಡುಬರುತ್ತಿವೆ.

ಲಾಡ್ಜ್‌ನಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಜೊತೆ ಸಿಕ್ಕಿಬಿದ್ದ ಹಿಂದೂ ವ್ಯಕ್ತಿ: ರಾಜ್ಯದಲ್ಲಿ ಬೆಚ್ಚಿಬೀಳಿಸುವ ನೈತಿಕ ಪೊಲೀಸ್‌ ಗಿರಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್‌ನ ಖಾಸಗಿ ಹೋಟೆಲ್‌ಗೆ ನುಗ್ಗಿ ಇಬ್ಬರನ್ನು ಯವಕರ ಗುಂಪು ಥಳಿಸಿದೆ. ಲಾಡ್ಜ್‌ನಲ್ಲಿ ವಿವಾಹಿತ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿಸಲಾಗಿದೆ. ಮುಸ್ಲಿಂ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಕಾರಣಕ್ಕೆ ಅನ್ಯಕೋಮಿನ ಯುವಕರ ಗುಂಪಿನಿಂದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. 'ಬುರ್ಖಾ ಹಾಕಿಕೊಂಡು ಬಂದು ಇಲ್ಲಿ ಮಲಗಿದ್ದೀಯಾ?ಎಂದು ಮಹಿಳೆಗೆ ಯುವಕರು ಥಳಿಸಿದ್ದಾರೆ. ನಿನಗೆ ನಮ್‌ ಹುಡುಗೀನೇ ಬೇಕಾ ಎಂದು ಆ ವ್ಯಕ್ತಿಗೂ ಬಾರಿಸಿದ್ದಾರೆ.

ಹಾವೇರಿ ಗ್ಯಾಂಗ್‌ರೇಪ್ ಸಂತ್ರಸ್ತೆಗೆ ಜೀವ ಭಯವಿದ್ದರೂ, ಒಂಟಿಯಾಗಿ ಮನೆಗೆ ಬಿಟ್ಟು ಹೋದ ಪೊಲೀಸರು

ಇಬ್ಬರ ಮೇಲೂ ಹಲ್ಲೆ ನಡೆಸಿರುವ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಎದೆನಡುಗಿಸುವಂಥ ನೈತಿಕ ಪೊಲೀಸ್‌ಗಿರಿಯ ವಿಡಿಯೋ ಇದಾಗಿದೆ. ಅಲ್ಲದೆ ವಿಡಿಯೋನಲ್ಲಿಯೇ ಥಳಿಸುತ್ತಿರುವ ಯುವಕರು ಗುಂಪು, ವಿಡಿಯೋ ಮಾಡಬೇಡಿ ಎಂದು ಹೇಳಿದೆ. ಒಂದು ವಿಡಿಯೋದಲ್ಲಿ ಇಬ್ಬರ ಮೇಲೆ ಲಾಡ್ಜ್‌ನಲ್ಲಿಯೇ ಹಲ್ಲೆ ಮಾಡಲಾಗಿದ್ದರೆ, ಇನ್ನೊಂದು ವಿಡಿಯೋದಲ್ಲಿ ಇಬ್ಬರನ್ನೂ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.

click me!