ಈರುಳ್ಳಿ ಮಾರಾಟಗಾರರಿಗೆ ಕೊರೋನಾ ಸೋಂಕು ದೃಢ: ಗ್ರಾಮಸ್ಥರಲ್ಲಿ ಆತಂಕ

Suvarna News   | Asianet News
Published : Apr 10, 2020, 09:01 AM IST
ಈರುಳ್ಳಿ ಮಾರಾಟಗಾರರಿಗೆ ಕೊರೋನಾ ಸೋಂಕು ದೃಢ: ಗ್ರಾಮಸ್ಥರಲ್ಲಿ ಆತಂಕ

ಸಾರಾಂಶ

ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ನಾಲ್ವರಿಗೆ ಕೊರೊನಾ ಸೋಂಕು ದೃಢ| ಆತಂಕದಲ್ಲಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಜನ| ಸೋಂಕಿತರು ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆಯಲ್ಲಿ ಭಾಗಿಯಾಗಿದ್ದರು|

ಬೆಳಗಾವಿ(ಏ.10): ಜಿಲ್ಲೆಯಲ್ಲಿ 10 ಜನರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ. 10 ಜನರ ಪೈಕಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ನಾಲ್ವರಿಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಬೆಳಗಾವಿ ಹಿರೇಬಾಗೇವಾಡಿ ಗ್ರಾಮದ ಜನ ಆತಂಕದಲ್ಲಿದ್ದಾರೆ. 

ಕೇಸ್ ನಂಬರ್128 ಸೇರಿ ಆತನ ತಂದೆ,‌ ತಾಯಿ‌ ಹಾಗೂ ಸಹೋದರನಿಗೆ ಸೋಂಕು ದೃಢಪಟ್ಟಿದೆ. ಪೇಷಂಟ್ ನಂಬರ್ 128 ದೆಹಲಿ ನಿಜಾಮುದ್ದೀನ್ ಮಸೀದಿ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಉತ್ತರ ಪ್ರದೇಶದ ಚೇಕಡಾ ಗ್ರಾಮದಲ್ಲಿ ಧಾರ್ಮಿಕ ಪ್ರಚಾರದಲ್ಲಿ ಭಾಗವಹಸಿದ್ದರು. ಬಳಿಕ ಮಾರ್ಚ್ 22 ರಂದು ಬೆಳಗಾವಿಯ ಹಿರೇಬಾಗೇವಾಡಿಗೆ ಆಗಮಿಸಿದ್ದರು.

ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ದೃಢ: ಕುಡಚಿಯಲ್ಲಿ ಹೈಅಲರ್ಟ್

ಸೋಂಕಿತ ತಂದೆ ಮಕ್ಕಳು ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ಸೋಂಕಿತರು ಪಾರಿಶ್ವಾಡ, ಹಿರೇಬಾಗೇವಾಡಿ, ಬಡಾಲ್ ಅಂಕಲಗಿ ಸಂತೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ಮೂರು ಗ್ರಾಮಗಳ ಸಂತೆಗೆ 10ಕ್ಕೂ ಹೆಚ್ಚು ಗ್ರಾಮಗಳ ಜನರು ಭಾಗಿಯಾಗಿದ್ದರು. ಸೋಂಕಿತರ ಸಂಪರ್ಕಕ್ಕೆ ಬಂದವರಿಗಾಗಿ ಜಿಲ್ಲಾಡಳಿತದಿಂದ ಶೋಧ ಕಾರ್ಯ ಆರಂಭವಾಗಿದೆ. 
 

PREV
click me!

Recommended Stories

ಬೆಳಗಾವಿಯಲ್ಲಿ ಅಪ್ರಾಪ್ತೆಯ ಅತ್ಯಾ*ಚಾರವೆಸಗಿದಾತನಿಗೆ 30 ವರ್ಷ ಜೈಲು, ಮಂಡ್ಯದಲ್ಲಿ ಚಿಂದಿ ಆಯುತ್ತಿದ್ದ ಅತ್ಯಾ*ಚಾರಿಗಳಿಗೆ ಜೀವಾವಧಿ ಪ್ರಕಟ
Lakkundi Excavation: ಬಯೋಮೆಟ್ರಿಕ್ ಹಾಜರಾತಿಗೆ ಹೈರಾಣಾದ ಕಾರ್ಮಿಕರು, ಬೆನ್ನಲ್ಲೇ ಹಣತೆ ಆಕಾರದ ಲೋಹದ ತುಂಡು ಪತ್ತೆ