ಕೊರೋನಾ ತಗುಲಿದೆಯೆಂದು ನೀರೂ ಕೊಡದ ಗ್ರಾಮಸ್ಥರು!

By Kannadaprabha NewsFirst Published Apr 10, 2020, 7:47 AM IST
Highlights

ಕೊಂಗಂಡಿ ಗ್ರಾಮಸ್ಥರಿಗೆ ಪ್ರವೇಶ ನಿಷೇಧಿಸಿ ಡಂಗೂರ ಸಾರಿದ ಅಕ್ಕಪಕ್ಕದ ಗ್ರಾಮಗಳು| ಕಾಮಾಲೆಯಿಂದ ಸತ್ತ ಬಾಲಕಿಗೆ ಕೊರೋನಾ ತಗುಲಿತ್ತು ಎಂದು ನಂಬಿದ್ದ ಜನರು|

ಆನಂದ್ ಎಂ. ಸೌದಿ
ಯಾದಗಿರಿ(ಏ.10):
ಕೊರೋನಾ ತಗುಲಿ ಈ ಗ್ರಾಮದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ ಎಂದು ತಪ್ಪು ತಿಳಿದು, ಆ ಗ್ರಾಮಸ್ಥರಿಗೆ ಸರ್ಕಾರಿ ಶುದ್ಧ ಕುಡಿವ ನೀರಿನ ಘಟಕದಿಂದ ನೀರು ಕೊಡಲು ಸಹ ಹಿಂದೇಟು ಹಾಕಿದ್ದರು.

ಅಲ್ಲದೆ, ಬಾಲಕಿಯ ಪೋಷಕರನ್ನು ನಮ್ಮೂರಲ್ಲಿ ಕರೆದುಕೊಳ್ಳುವುದು ಬೇಡ ಎಂದು ಅಕ್ಕಪಕ್ಕದ ಕೆಲವು ಗ್ರಾಮಗಳಲ್ಲಿ ಡಂಗೂರ ಸಾರಿ, ಎರಡು ದಿನಗಳ ಕಾಲ ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ

ಏನಿದು ಘಟನೆ?:

ಕೊಂಗಂಡಿ ಗ್ರಾಮದ 4 ವರ್ಷದ ಬಾಲಕಿ ಹಂಸಲೇಖಾ ಮಂಗಳವಾರ ಸಾವನ್ನಪ್ಪಿದ್ದಳು. ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಬಾಲಕಿ ಕುಟುಂಬ ಏ.1ರಂದು ಗ್ರಾಮಕ್ಕೆ ವಾಪಸ್ಸಾಗಿತ್ತು. ಎರಡು ದಿನಗಳ ನಂತರ ಜ್ವರ ಕಾಣಿಸಿಕೊಂಡಾಗ ಸ್ಥಳೀಯ ಆರ್.ಎಂ.ಪಿ. ಬಳಿ ತೋರಿಸಲಾಗಿತ್ತಾದರೂ, ಕೈಮೀರಿದಾಗ ಮಂಗಳವಾರ ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಳು. ಬಾಲಕಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿ, ವಿಶ್ವ ಆರೋಗ್ಯ ಸಂಸ್ಥೆಯ ನಿಮಯಗಳನುಸಾರ ಶವಸಂಸ್ಕಾರ ಮಾಡಲಾಗಿತ್ತು.

ಬಹಿಷ್ಕಾರ, ನೀರಿಗಾಗಿ ಪರದಾಟ:

ಈ ನಂತರ, ಇಡೀ ಗ್ರಾಮದಲ್ಲಿ ಸೂತಕದ ವಾತಾವರಣವಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ವದಂತಿಗಳು ಹಬ್ಬಿದವು. ಎಲ್ಲರೂ ಭಯಭೀತರಾದರು. ಇಡೀ ಗ್ರಾಮಕ್ಕೇ ಗರಬಡಿದಂತಾಗಿತ್ತು. ಕೊಂಗಂಡಿ ಜನರನ್ನು ತಮ್ಮೂರೊಳಗೆ ಬಿಡಬೇಡಿ ಎಂದು ಅಕ್ಕಪಕ್ಕದ ಗ್ರಾಮಗಳಾದ ಯಮನೂರು ಹಾಗೂ ಶಾರದಹಳ್ಳಿಗಳಲ್ಲಿ ಡಂಗೂರ ಸಾರಲಾಗಿದೆ. ಜೊತೆಗೆ ಶುದ್ಧ ಕುಡಿವ ನೀರಿನ ಘಟಕದಲ್ಲೂ ನೀಡಲು ನಿರಾಕರಿಸಿದ್ದಾರೆ.  
 

click me!