ಚೀನಾ ಗಡಿಯಲ್ಲಿ ಬೆಳಗಾವಿ ಮೂಲದ ಯೋಧ ಹುತಾತ್ಮ

Suvarna News   | Asianet News
Published : Jul 03, 2020, 12:20 PM ISTUpdated : Jul 03, 2020, 01:29 PM IST
ಚೀನಾ ಗಡಿಯಲ್ಲಿ ಬೆಳಗಾವಿ ಮೂಲದ ಯೋಧ ಹುತಾತ್ಮ

ಸಾರಾಂಶ

ಚೀನಾ ಗಡಿಯಲ್ಲಿ ಕರ್ತವ್ಯನಿರತ ಯೋಧ ಹುತಾತ್ಮ| ಯೋಧನ ಸಾವು ಹೇಗಾಯಿತು ಎಂಬುವುದರ ಕುರಿತು ಇನ್ನೂ ನಿಖರವಾದ ಮಾಹಿತಿ ದೊರೆತಿಲ್ಲ|  ಮುಂಬೈ ಮೂಲಕ ವಿಮಾನದ ಮೂಲಕ ಬೆಳಗಾವಿಗೆ ಪಾರ್ಥೀವ ಶರೀರ ಆಗಮನ| 

ಬೆಳಗಾವಿ(ಜು.03): ಚೀನಾ ಗಡಿಯಲ್ಲಿ ಕರ್ತವ್ಯನಿರತ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಿಲ್ಲೆಯ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮದ 35 ವರ್ಷದ ಸುನೀಲ ಸದಾಶಿವ ಖಿಲಾರೆ ಎಂಬುವರೇ ಹುತಾತ್ಮರಾದ ಯೋಧರಾಗಿದ್ದಾರೆ.

ಯೋಧನ ಸಾವು ಹೇಗಾಯಿತು ಎಂಬುವುದರ ಕುರಿತು ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಹುತಾತ್ಮ ಯೋಧನ ಪಾರ್ಥೀವ ಶರೀರ ಇಂದು(ಶುಕ್ರವಾರ) ಮುಂಬೈ ಮೂಲಕ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಬೆಳಗಾವಿ: ಹೋಂ ಕ್ವಾರಂಟೈನ್‌ ಉಲ್ಲಂಘನೆ, 573 ಮಂದಿಯ ವಿರುದ್ಧ ಕೇಸ್‌

ಇಂದು ಸಂಜೆಯೇ ಮೃತ ಯೋಧನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಹುತಾತ್ಮ ಯೋಧ ಸುನೀಲ ಸದಾಶಿವ ಖಿಲಾರೆ ಅವರು ಇತ್ತೀಚಿಗೆ ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಂಗಸೂಳಿ ಗ್ರಾಮದಲ್ಲಿದ್ದರು. ಮೇ 25 ರಂದು ಕರ್ತವ್ಯಕ್ಕೆ ತೆರಳಿದ್ದರು.
 

PREV
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ