ತಂದೆಯ ಸಾವಿನ ದುಃಖದ ನಡುವೆಯೂ ಪರೀಕ್ಷೆ ಬರೆದ ವಿದ್ಯಾರ್ಥಿ| ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿ ನಡೆದ ಘಟನೆ| ಹೃದಯಾಘಾತದಿಂದ ಸಾವನ್ನಪ್ಪಿದ್ದ ವಿದ್ಯಾರ್ಥಿ ನಂದೀಶ ಪಟ್ಟಣಶೆಟ್ಟಿಯ ತಂದೆ ನಾಗರಾಜ ಪಟ್ಟಣಶೆಟ್ಟಿ|
ಹಾವೇರಿ(ಜು.03): ತಂದೆಯ ಸಾವಿನ ದುಃಖದ ನಡುವೆಯೂ ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಘಟನೆ ತಾಲೂಕಿನ ಗುತ್ತಲ ಪಟ್ಟಣದಲ್ಲಿ ಇಂದು(ಶುಕ್ರವಾರ) ನಡೆದಿದೆ.
ಗುತ್ತಲದ ಡಿಡಿಎಂ ಪ್ರೌಢಶಾಲೆಯ ವಿದ್ಯಾರ್ಥಿ ನಂದೀಶ ಪಟ್ಟಣಶೆಟ್ಟಿಯ ತಂದೆ ನಾಗರಾಜ ಪಟ್ಟಣಶೆಟ್ಟಿ ನಿನ್ನೆ(ಗುರುವಾರ) ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದರು.
ಸೋಂಕಿತೆ ಜೊತೆ ಪರೀಕ್ಷೆ ಬರೆದವರಿಗೆ ಕೊರೋನಾ ಟೆಸ್ಟ್: ವಿದ್ಯಾರ್ಥಿಗಳಲ್ಲಿ ಆತಂಕ
ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಯ ಮನವೊಲಿಸಿ ಪೋಷಕರು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಕಳುಹಿಸಿದ್ದರು. ಪರೀಕ್ಷೆ ಮುಗಿದ ಬಳಿಕವೇ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.