ನಾಗಾಲ್ಯಾಂಡ್‌ ಗಡಿಯಲ್ಲಿ ಅಪಘಾತ: ಬೆಳಗಾವಿ ಯೋಧ ಬಲಿ

Kannadaprabha News   | Asianet News
Published : Jul 12, 2021, 07:57 AM IST
ನಾಗಾಲ್ಯಾಂಡ್‌ ಗಡಿಯಲ್ಲಿ ಅಪಘಾತ: ಬೆಳಗಾವಿ ಯೋಧ ಬಲಿ

ಸಾರಾಂಶ

* ಗಡಿಯಲ್ಲಿ ಗಸ್ತು ತಿರುಗುವ ವೇಳೆ ಅಪಘಾತಕ್ಕೀಡಾದ ವಾಹನ * ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ * ಗೋಕಾಕ್‌ ತಾಲೂಕಿನ ಕೊಣ್ಣೂರ ಪಟ್ಟಣದ ಮಂಜುನಾಥ ಅಪ್ಪಣ್ಣ ಗೌಡಣ್ಣವರ ಮೃತ ಯೋಧ

ಬೆಳಗಾವಿ(ಜು.12): ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಯೋಧನೋರ್ವ ನಾಗಾಲ್ಯಾಂಡ್‌ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಅಪಘಾತ ಸಂಭವಿಸಿ ಹುತಾತ್ಮನಾಗಿದ್ದಾರೆ. 

ಗೋಕಾಕ್‌ ತಾಲೂಕಿನ ಕೊಣ್ಣೂರ ಪಟ್ಟಣದ ಮಂಜುನಾಥ ಅಪ್ಪಣ್ಣ ಗೌಡಣ್ಣವರ (38) ಮೃತ ಯೋಧ. ನಾಗಾಲ್ಯಾಂಡ್‌ ಗಡಿಯಲ್ಲಿ ಗಸ್ತು ತಿರುಗುವ ವೇಳೆ ಅವರ ವಾಹನ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ವಿಜಯಪುರ: ಮಣ್ಣಲ್ಲಿ ಮಣ್ಣಾದ ಭಾರತಾಂಬೆಯ ಹೆಮ್ಮೆಯ ಸುಪುತ್ರ ಕಾಶೀರಾಯ..!

ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ, ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ನಲ್ಲಿ ನೇಮಕಗೊಂಡು ಸದ್ಯ ನಾಗಾಲ್ಯಾಂಡ್‌ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾರತೀಯ ಸೇನೆಯಲ್ಲಿ ಚಾಲಕನಾಗಿದ್ದು, ತಮ್ಮ ಕರ್ತವ್ಯಕ್ಕೆ ತೆರಳುವಾಗ ಅರಣ್ಯದಲ್ಲಿ ವಾಹನ ಅಪಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಯೋಧನ ಪಾರ್ಥಿವ ಶರೀರ ಜುಲೈ 12ರಂದು ಸಂಜೆ 6ರ ಸುಮಾರಿಗೆ ಗೋವಾ ಮಾರ್ಗವಾಗಿ ಸ್ವಗ್ರಾಮಕ್ಕೆ ಬರಲಿದೆ.
 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ