ಉಡಾನ್‌ 3ನೇ ಸುತ್ತಿನ ಬಿಡ್ಡಿಂಗ್‌ನಲ್ಲಿ ಬೆಳಗಾವಿ ವಿಮಾನ ನಿಲ್ದಾಣ: ಈರಣ್ಣ ಕಡಾಡಿ

By Kannadaprabha News  |  First Published Aug 2, 2023, 11:30 PM IST

ಪ್ರಸ್ತುತ ಬೆಳಗಾವಿ ವಿಮಾನ ನಿಲ್ದಾಣದಿಂದ ಹೈದರಾಬಾದ್‌, ಅಹಮದಾಬಾದ್‌, ಮುಂಬೈ, ತಿರುಪತಿ, ನಾಗ್ಪುರ, ಇಂದೋರ್‌, ಸೂರತ್‌, ಜೋಧ್‌ಪುರ, ಜೈಪುರ ಹಾಗೂ ಬೆಂಗಳೂರಿಗೆ ವಿಮಾನ ಸಂಚಾರ ಕಾರ್ಯಾಚರಣೆಯಲ್ಲಿದೆ.  


ಮೂಡಲಗಿ(ಆ.02):  ಪ್ರಾದೇಶಿಕ ಸಂಪರ್ಕ ಯೋಜನೆಗಳ (ಉಡಾನ್‌) ಅಡಿಯಲ್ಲಿ ಕಡಿಮೆ ಸೇವೆಯಿರುವ ವಿಮಾನ ನಿಲ್ದಾಣಗಳನ್ನು ಪ್ರಮುಖ ವಿಮಾನ ನಿಲ್ದಾಣಗಳಿಗೆ ವಿಮಾನಗಳ ಮೂಲಕ ಸಂಪರ್ಕಿಸಲು ಯೋಜಿಸಲಾಗಿದೆ. ಉಡಾನ್‌ ಯೋಜನೆಯಡಿ ನಡೆದ 3ನೇ ಸುತ್ತಿನ ಬಿಡ್ಡಿಂಗ್‌ನಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಗುರುತಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವರಾದ ಡಾ. ವಿಜಯ್‌ ಕುಮಾರ್‌ ಸಿಂಗ್‌ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯಸಭೆಯ ಮುಂಗಾರು ಅಧಿವೇಶನದಲ್ಲಿ ಬೆಳಗಾವಿ ವಿಮಾನಗಳ ಸಂಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಾದೇಶಿಕ ವಾಯು ಸಂಪರ್ಕವನ್ನು ಉತ್ತೇಜಿಸಲು ಮತ್ತು ಜನಸಾಮಾನ್ಯರಿಗೆ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯವು 21-10-2016 ರಂದು ಪ್ರಾದೇಶಿಕ ಸಂಪರ್ಕ ಯೋಜನೆ (ಉಡಾನ) ಅನ್ನು ಪ್ರಾರಂಭಿಸಿದೆ. 

Tap to resize

Latest Videos

ಕನ್ನಡ ಭಾಷೆಗೂ ತಮಿಳು ಮಾದರಿಯಲ್ಲಿ ಸ್ವಾಯತ್ತ ಸ್ಥಾನಮಾನ ಕೊಡಿ: ಸಂಸತ್ತಿನಲ್ಲಿ ಈರಣ್ಣ ಕಡಾಡಿ ಆಗ್ರಹ

ಪ್ರಸ್ತುತ ಬೆಳಗಾವಿ ವಿಮಾನ ನಿಲ್ದಾಣದಿಂದ ಹೈದರಾಬಾದ್‌, ಅಹಮದಾಬಾದ್‌, ಮುಂಬೈ, ತಿರುಪತಿ, ನಾಗ್ಪುರ, ಇಂದೋರ್‌, ಸೂರತ್‌, ಜೋಧ್‌ಪುರ, ಜೈಪುರ ಹಾಗೂ ಬೆಂಗಳೂರಿಗೆ ವಿಮಾನ ಸಂಚಾರ ಕಾರ್ಯಾಚರಣೆಯಲ್ಲಿ ಇದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದರು.

click me!