ಚಾಮರಾಜನಗರ: 2 ತಿಂಗಳಿಂದ ಸೇವೆ ನಿಲ್ಲಿಸಿದ ಆ್ಯಂಬುಲೆನ್ಸ್, ರೋಗಿಗಳ ಪರದಾಟ..!

By Girish Goudar  |  First Published Aug 2, 2023, 9:30 PM IST

ಆರೋಗ್ಯ ಇಲಾಖೆಯ 27 ವಾಹನಗಳ ಪೈಕಿ 24 ವಾಹನಗಳ ಸಂಚಾರ ಬಂದ್, ವಾಹನಗಳಿಲ್ಲದೆ ಗುಡ್ಡಗಾಡು ಪ್ರದೇಶಗಳಿಗೆ ವೈದ್ಯಕೀಯ ಸಿಬ್ಬಂದಿ ಹೋಗಲಾಗದ ಸ್ಥಿತಿ. ಬುಡಕಟ್ಟು ಜನರಿಗೆ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆ ಲಭಿಸದೆ ಪ್ರಾಣ ಹೋಗುವ ಪರಿಸ್ಥಿತಿ ನಿರ್ಮಾಣ. 


ವರದಿ- ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಆ.02):  ಅದು ಶೇಕಡಾ 50 ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಹಾಗು ಗುಡ್ಡಗಾಡಿನಿಂದ ಕೂಡಿದ ಜಿಲ್ಲೆ. ಆದರೆ ಕಳೆದ ಎರಡು ತಿಂಗಳಿಂದ ಅರಣ್ಯದಂಚಿನ, ಅರಣ್ಯ ದೊಳಗಿನ ಹಾಗು ಗುಡ್ಡಗಾಡು ಪ್ರದೇಶದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಲಭಿಸುತ್ತಿಲ್ಲ, ಇಲ್ಲಿನ ಜನ ಆರೋಗ್ಯ ಹದಗೆಟ್ಟರೆ ಡೋಲಿ ಕಟ್ಟಿ ಆಸ್ಪತ್ರೆಗೆ ಹೊತ್ತೊಯ್ಯುಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಕಳೆದ ಎರಡು ತಿಂಗಳಿಂದ ಆರೋಗ್ಯ ಇಲಾಖೆಗೆ ಸೇರಿದ 3 ಅಂಬ್ಯುಲೆನ್ಸ್, 24 ವಾಹನಗಳು ಧೂಳಿಡಿಯುತ್ತಿವೆ. ಸಾರಿಗೆ ಸೌಲಭ್ಯ ಇಲ್ಲದಿದ್ದಕ್ಕೆ ಕಾರಣವೇನು? ವಾಹನಗಳು ಯಾಕೆ ಧೂಳಿಡಿಯುತ್ತಿವೆ ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

Tap to resize

Latest Videos

undefined

ಸರ್ಕಾರದ ನಿಯಮದಂತೆ 15 ವರ್ಷಗಳಾದ ವಾಹನಗಳ ಆರ್. ಸಿ. ನವೀಕರಣ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿ ಚಾಮರಾಜನಗರ ಜ ಜಿಲ್ಲೆಯಲ್ಲಿ 3 ಆ್ಯಂಬುಲೆನ್ಸ್ ಸೇರಿ ಆರೋಗ್ಯ ಇಲಾಖೆಯ 24 ವಾಹನಗಳ ಆರ್. ಸಿ.ಅವಧಿ ಮುಕ್ತಾಯಗೊಂಡಿದ್ದು ನವೀಕರಣ ಮಾಡಿಲ್ಲ. ಹೀಗಾಗಿ ಎರಡು ತಿಂಗಳಿಂದ ಆರೋಗ್ಯ ಇಲಾಖೆ ವಾಹನಗಳ  ಸಂಚಾರ ಬಂದ್ ಆಗಿದೆ. ವಾಹನಗಳಿಲ್ಲದೆ ಗುಡ್ಡಗಾಡು ಪ್ರದೇಶಗಳಿಗೆ ವೈದ್ಯಕೀಯ ಸಿಬ್ಬಂದಿ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ ಚಾಮರಾಜನಗರ ಜಿಲ್ಲೆ ಮೊದಲೇ ಹೆಚ್ಚು ಅರಣ್ಯ ಹಾಗುಗುಡ್ಡ ಗಾಡು ಪ್ರದೇಶಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು ಬುಡಕಟ್ಟು ಜನರಿಗೆ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆ ಲಭಿಸದೆ ಪ್ರಾಣ ಹೋಗುವ ಪರಿಸ್ಥಿತಿ ಏರ್ಪಟ್ಟಿದೆ. ಅರಣ್ಯದಂಚಿನ ಹಾಗೂ ಅರಣ್ಯದೊಳಗಿನ ಆದಿವಾಸಿಗಳು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದು ಆರೋಗ್ಯ ಹದಗೆಟ್ಟವರನ್ನು, ಹೆರಿಗೆ ನೋವು ಕಾಣಿಸಿಕೊಂಡವರನ್ನು ಡೋಲಿ ಕಟ್ಟಿ ಹೊತ್ತುಕೊಂಡು ಬರಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಜಿಲ್ಲೆಗೆ ನೀಡಿದ್ದ ಮೂರು ಸಂಚಾರಿ ಗಿರಿಜನ ಆರೋಗ್ಯ ಘಟಕ ವಾಹನಗಳ ಸೇವೆಯನ್ನು ಸಹ ಸರ್ಕಾರ  ಹಿಂತೆಗೆದುಕೊಂಡಿದ್ದು ಬುಡಕಟ್ಟು ಸೋಲಿಗರು ವೈದ್ಯಕೀಯ ಸೇವೆಗೆ ಪರದಾಡುವಂತಾಗಿದೆ.

ಚಾಮರಾಜನಗರ: ಹುಲ್ಲು ಬೆಳೆಯಲು ಅಗ್ರಿಮೆಂಟ್, ಕೈ ಕೊಟ್ಟ ಸಂಸ್ಥೆ, ಕಂಗಾಲಾದ ರೈತ..!

ಬುಡಕಟ್ಟು ಆದಿವಾಸಿ ಜನರ ಆರೋಗ್ಯದ ಜೊತೆಗೆ ಆರೋಗ್ಯ ಇಲಾಖೆ ಚಲ್ಲಾಟವಾಡುತ್ತಿದೆ. ಇನ್ನೂ ಈ ಕುರಿತು ಆರೋಗ್ಯ ಅಧಿಕಾರಿಗಳನ್ನು ಕೇಳಿದ್ರೆ ಅವರ ಉತ್ತರವೇ ಬೇರೆ. ನಾಲ್ಕು ಅಂಬ್ಯುಲೆನ್ಸ್, ಮೂರು ಸಂಚಾರಿ ವಾಹನ ಹಾಗೂ ಪ್ರೊಗ್ರಾಂ ಅಧಿಕಾರಿಗಳು ಬಳಸುವ ವಾಹನಗಳ ಆರ್.ಸಿ. ಮುಕ್ತಾಯವಾಗಿದೆ. ಆದ್ರಿಂದ ಯಾವುದೇ ವಾಹನಗಳನ್ನು ಚಲಾಯಿಸ್ತಿಲ್ಲ. ಹೊರ ಗುತ್ತಿಗೆ ಮೂಲಕ ವಾಹನಗಳನ್ನು ಪಡೆದುಕೊಳ್ಳಲೂ ಪ್ಲಾನ್ ಮಾಡಿಕೊಂಡಿದ್ದೇವೆ. ಈಗಾಗ್ಲೇ ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಹಾರಿಕೆ ಉತ್ತರ ಕೊಡ್ತಾರೆ ಚಾಮರಾಜನಗರ ಡಿಎಚ್ಓ ವಿಶ್ವೇಶ್ವರಯ್ಯ. 

ಒಟ್ನಲ್ಲಿ  ವಾಹನಗಳ ಆರ್‌ಸಿ  ಕ್ಯಾನ್ಸಲ್ ಆಗುವ  ಬಗ್ಗೆ ಅಧಿಕಾರಿಗಳಿಗೆ ಗೊತ್ತಿರಲಿಲ್ವ?. ಗುಡ್ಡಗಾಡು, ಬುಡಕಟ್ಟು ಜನರ ಆರೋಗ್ಯ ಹದಗೆಟ್ರೆ ಅನಾಹುತ ನಡೆದ್ರೆ ಯಾರೂ ಹೊಣೆ ಅನ್ನೋ ಪ್ರಶ್ನೆ ಉದ್ಬವವಾಗುತ್ತೆ. ಏನಾದ್ರೂ ಅನಾಹುತ ಸಂಭವಿಸುವ ಮುನ್ನವೇ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಂಡು ಆರೋಗ್ಯ ಸೇವೆಗೆ ವಾಹನ ಒದಗಿಸಲಿ ಅನ್ನೊದೇ ಜನರ ಆಶಯ...

click me!