ಚಿಕ್ಕಮಗಳೂರು: ಕಂಪನಿ ಡೋರ್‌ ಕ್ಲೋಸ್‌, ಕಾರ್ಮಿಕರ ಬದುಕಿನ ಬಾಗಿಲು ಬಂದ್‌..!

Published : Aug 02, 2023, 10:00 PM IST
ಚಿಕ್ಕಮಗಳೂರು: ಕಂಪನಿ ಡೋರ್‌ ಕ್ಲೋಸ್‌, ಕಾರ್ಮಿಕರ ಬದುಕಿನ ಬಾಗಿಲು ಬಂದ್‌..!

ಸಾರಾಂಶ

ಕುದುರೆಮುಖ ಲೇಬರ್ ಕಾಲೋನಿ ಜನರ ನಿತ್ಯ ನರಕದ ನೋವಿನ ಕಥೆಯನ್ನ ಕೇಳುವ ಕಿವಿಗಳೇ ಇಲ್ಲ. ಕುದುರೆಮುಖ ಪ್ರದೇಶ ರಾಷ್ಟ್ರೀಯ ಉದ್ಯಾನವನವಾದ ಮೇಲೆ ಕಂಪನಿಗೆ ಬೀಗಬಿತ್ತು. ಕೂಲಿ ಕಾರ್ಮಿಕರು  ಕೆಲಸ ಕಳ್ಕೊಂಡ್ರು. ಆದ್ರೆ, ಆಗ ಕೊಟ್ಟಿದ್ದ ಮನೆಯಲ್ಲೇ ಇದು ಕೂಡ 60 ಕುಟುಂಬಗಳು ವಾಸವಿದೆ. ಇವರಿಗೆ ಇರೋಕೆ ಮುರುಕಲು ಸೂರು ಬಿಟ್ರೆ ಬೇರೇನೂ ಇಲ್ಲ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.02):  ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕುದುರೆಮುಖ. ಒಂದು ಕಾಲದಲ್ಲಿ ಭೂಲೋಕದ ಸ್ವರ್ಗ. ಕುದುರೆಮುಖ ಐರನ್ ಕಂಪನಿ ಕಾಲದಲ್ಲಿ ಅಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರು ಕುಬೇರರಾಗದ್ರು. ಆದ್ರೆ, ಕಂಪನಿಗೆ ಬೀಗ ಬಿದ್ದ ಮೇಲೆ ಅವರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಯಾವಾಗ ಕಂಪೆನಿ ಕ್ಲೋಸ್ ಅಯ್ತೋ ಹಲವರು ಕೆಲಸ ಕಳಕೊಂಡರು. ಕಂಪನಿ ಬಾಗಿಲು ಮುಚ್ಚಿದ ಮೇಲೆ ಕೂಲಿ ಕಾರ್ಮಿಕರ ಬದುಕಿನ ಬಾಗಿಲು ಬಂದ್ ಆಯಿತು. 

60 ಕುಟುಂಬಗಳ ನೋವು ಕೇಳುವ ಕಿವಿಗಳೇ ಇಲ್ಲ 

ಕುದುರೆಮುಖ ಲೇಬರ್ ಕಾಲೋನಿ ಜನರ ನಿತ್ಯ ನರಕದ ನೋವಿನ ಕಥೆಯನ್ನ ಕೇಳುವ ಕಿವಿಗಳೇ ಇಲ್ಲ. ಕುದುರೆಮುಖ ಪ್ರದೇಶ ರಾಷ್ಟ್ರೀಯ ಉದ್ಯಾನವನವಾದ ಮೇಲೆ ಕಂಪನಿಗೆ ಬೀಗಬಿತ್ತು. ಕೂಲಿ ಕಾರ್ಮಿಕರು  ಕೆಲಸ ಕಳ್ಕೊಂಡ್ರು. ಆದ್ರೆ, ಆಗ ಕೊಟ್ಟಿದ್ದ ಮನೆಯಲ್ಲೇ ಇದು ಕೂಡ 60 ಕುಟುಂಬಗಳು ವಾಸವಿದೆ. ಇವರಿಗೆ ಇರೋಕೆ ಮುರುಕಲು ಸೂರು ಬಿಟ್ರೆ ಬೇರೇನೂ ಇಲ್ಲ. ಇಲ್ಲಿ ಸುಮಾರು 60 ಕುಟುಂಬಗಳಿವೆ. ಕೆಲ ಮನೆಗಳ ಗೋಡೆಗಳು ನೆಲಕಂಡಿದ್ರೆ, ಮತ್ತಲವು ಯಾವಾಗ್ ಬೀಳುತ್ತೋ ಗೊತ್ತಿಲ್ಲ. ಇವರಿಗಾಗಿ ಪರ್ಯಾಯ ಜಾಗ 12 ವರ್ಷದ ಹಿಂದೆ ಕಳಸದಲ್ಲಿ ಗುರುತಿಸಲಾಗಿದೆ. ಆರಂಭದಲ್ಲಿ 10 ಎಕರೆ ಇದ್ದ ಜಾಗವೀಗ ಐದು ಎಕರೆ ಉಳಿದಿದೆ. ಹಲವು ಬಾರಿ ಮನವಿ ಮಾಡಿದ್ರು 12 ವರ್ಷದಿಂದ ಪರ್ಯಾಯ ಜಾಗ ನೀಡ್ತಿಲ್ಲ ಅಂತ ಸ್ಥಳಿಯರಾದ ಕಲಾವತಿ  ಆರೋಪಿಸಿದ್ದಾರೆ. 

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಜಲಪಾತಗಳ ಬಳಿ ಪೊಲೀಸರ ನಿಯೋಜನೆ

ಮೂಲಭೂತ ಸೌಕರ್ಯಗಳಂತು ಇಲ್ಲವೇ ಇಲ್ಲ

ಇನ್ನು ಪರ್ಯಾಯ ಜಾಗ ಸಿಕ್ಕಿಲ್ಲ ಅನ್ನೋ ನೋವು ಬಂದೆಡೆಯಾದ್ರೆ ನಿತ್ಯದ ಬದುಕಿಗೆ ಇವ್ರದ್ದು ಹೋರಾಟದ ಬದುಕು. ಪಾಳು ಬಿದ್ದಿರೋ ಮನೆಗಳು ಬಿಟ್ರೆ ಬಿಟ್ರೆ ಮೂಲಭೂತ ಸೌಕರ್ಯಗಳಂತು ಇಲ್ಲವೇ ಇಲ್ಲ. ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರೋ ಲೇಬರ್ ಕಾಲೋನಿಗೆ ವೋಟ್ ಹಾಕೋಕೆ ಸಿಗೋದು ಕೂಡ ಎಂ.ಎಲ್.ಎ. ಎಂ.ಪಿ. ಎಲೆಕ್ಷನ್ ಮಾತ್ರ. ಯಾಕಂದ್ರೆ, ಈ ಜಾಗ ಸೇರೋದು ಅಲ್ಲಿಂದ ನೂರು ಕಿ.ಮೀ. ದೂರದ ಮೂಡಿಗೆರೆ ಪುರಸಭೆ ವ್ಯಾಪ್ತಿಗೆ. ಹಾಗಾಗಿ, ಇವ್ರು ಮತ ಹಾಕೋದು ಕೂಡ ತೀರಾ ಕಡಿಮೆ. ಐದು ವರ್ಷಕ್ಕೊಮ್ಮೆ ಬರೋ ಜನಪ್ರತಿನಿಧಿಗಳು ಭರವಸೆ ನೀಡಿ ಹೋಗ್ತಾರೆ, ಮತ್ತೆ ಬರೋದು ಮುಂದಿನ ಚುನಾವಣೆಗೆ ಅಂತ ಇಲ್ಲಿನ ಜನ ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಒಟ್ಟಾರೆ, ನಾಲ್ಕೈದು ದಶಕಗಳಿಂದ ಕುದುರೆಮುಖ ಲೇಬರ್ ಕಾಲೋನಿಯಲ್ಲಿ ಲೇಬರ್ ಜನ ಬದುಕುತ್ತಿದ್ದಾರೆ. ನಂಬಿದ ಕಂಪನಿಯೂ ಕ್ಲೋಸ್ ಆಯ್ತು. ಕಾಡಿನ ನಡುವೆಯ ಜೀವನ ಗತಿಯಾಯ್ತ. ಸರ್ಕಾರ ಇವರ ಪಾಲಿಗೆ ಇದ್ದು ಇಲ್ಲದಂತಾಯ್ತು. ರಾಜಕಾರಣಿಗಳು ಮತ ಕೇಳೋಕೆ ಬರುವ ನೆಂಟರಾದರ. ಸ್ಥಳಾಂತರಕ್ಕೆ ಜಾಗ ನೋಡಿದ ಅಧಿಕಾರಿಗಳು ಜಾಗವೇ ಒತ್ತುವರಿಯಾದ್ರು ಮೂಕಪ್ರೇಕ್ಷಕರಂತಿದ್ದಾರೆ. ಇಲ್ಲಿನ ಜನರನ್ನ ದೇವರೇ ಕಾಪಾಡಬೇಕು.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು