ವರ್ಷಾರಂಭ: ರೈತನಿಂದ ಬಂಪರ್ ಬೆಲೆಗೆ ಕುರಿ ಮಾರಾಟ

By Kannadaprabha News  |  First Published Jan 2, 2024, 9:45 AM IST

ಹೊಸ ವರ್ಷದ ಹಿನ್ನೆಲೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೇಕೆಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಹೊಸ ವರ್ಷದ ಮಾರಾಟಕ್ಕಾಗಿ ಹಲವು ರೈತರು ಮೇಕೆ ಹಾಗೂ ಕುರಿಗಳನ್ನು ಸಾಕುತ್ತಾರೆ, ಹೊಸ ವರ್ಷದ ವಿಶೇಷಕ್ಕಾಗಿ ಮಾರಾಟ ಮಾಡುತ್ತಾರೆ. ಪ್ರಸ್ತುತ ಹೊಸ ವರ್ಷದ ಹಿನ್ನೆಲೆ ಅಮ್ಮನಘಟ್ಟದ ರೈತ 50,000 ಕ್ಕೆ ಒಂದರಂತೆ ಎರಡು ಮೇಕೆಗಳನ್ನು ಮಾರಿ ಒಂದೇ ದಿನದಲ್ಲಿ ಲಕ್ಷ ರು. ಬಂಪರ್ ಹೊಡೆದಿದ್ದಾನೆ.


ಗುಬ್ಬಿ: ಹೊಸ ವರ್ಷದ ಹಿನ್ನೆಲೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೇಕೆಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಹೊಸ ವರ್ಷದ ಮಾರಾಟಕ್ಕಾಗಿ ಹಲವು ರೈತರು ಮೇಕೆ ಹಾಗೂ ಕುರಿಗಳನ್ನು ಸಾಕುತ್ತಾರೆ, ಹೊಸ ವರ್ಷದ ವಿಶೇಷಕ್ಕಾಗಿ ಮಾರಾಟ ಮಾಡುತ್ತಾರೆ. ಪ್ರಸ್ತುತ ಹೊಸ ವರ್ಷದ ಹಿನ್ನೆಲೆ ಅಮ್ಮನಘಟ್ಟದ ರೈತ 50,000 ಕ್ಕೆ ಒಂದರಂತೆ ಎರಡು ಮೇಕೆಗಳನ್ನು ಮಾರಿ ಒಂದೇ ದಿನದಲ್ಲಿ ಲಕ್ಷ ರು. ಬಂಪರ್ ಹೊಡೆದಿದ್ದಾನೆ.

ಹೊಸ ವರ್ಷದ ಮೊದಲ ದಿನದಿಂದ ಪ್ರಮುಖ 5 ಬದಲಾವಣೆ

Tap to resize

Latest Videos

undefined

ನವದೆಹಲಿ (ಜನವರಿ 1, 2024): 2024ರ ಜನವರಿ 1 ರಿಂದ ದೇಶದ ಆರ್ಥಿಕ ಹಾಗೂ ಇತರ ವಲಯಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ. ಈ 5 ಬದಲಾವಣೆಗಳು ಯಾವುವು ಎಂಬ ವಿವರ ಇಲ್ಲಿದೆ.

1. ಸಣ್ಣ ಉಳಿತಾಯ, ಸುಕನ್ಯಾ ಸಮೃದ್ಧಿಗೆ ಹೆಚ್ಚಿನ ಬಡ್ಡಿ

ಹೆಣ್ಣು ಮಕ್ಕಳ ಹೆಸರಲ್ಲಿ ಆರಂಭಿಸಬಹುದಾದ ಜನಪ್ರಿಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ (ಎಸ್‌ಎಸ್ಎಎಸ್) ಬಡ್ಡಿದರವನ್ನು ಈ ತ್ರೈಮಾಸಿಕದ ಅವಧಿಗೆ ಶೇ 0.20ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ಈ ಯೋಜನೆಯ ಬಡ್ಡಿ ದರ ಶೇ. 8.20ಕ್ಕೆ ಏರಿದೆ. ಇನ್ನು 3 ವರ್ಷಗಳ ಅವಧಿಯ ಅಂಚೆ ಕಚೇರಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಕೂಡಾ ಶೇ. 0.1 ರಷ್ಟು ಹೆಚ್ಚಿಸಿ 7.10ಕ್ಕೆ ಏರಿಸಲಾಗಿದೆ.

ಇದನ್ನು ಓದಿ: ಹೊಸ ವರ್ಷದಲ್ಲಿ ಹೂಡಿಕೆ ಪ್ರಾರಂಭಿಸುವ ಉದ್ಯೋಗಸ್ಥ ಮಹಿಳೆಯರಿಗೆ ಈ 5 ಯೋಜನೆಗಳು ಬೆಸ್ಟ್

2. ಕಾರುಗಳು ಇನ್ನು ದುಬಾರಿ

ಆಡಿ, ಮಾರುತಿ ಮತ್ತು ಮರ್ಸಿಡಿಸ್ ಬೆಂಜ್‌ನಂತಹ ಕೆಲವು ಕಂಪನಿಗಳು ಹೆಚ್ಚಿನ ಉತ್ಪಾದನೆ ವೆಚ್ಚದ ಕಾರಣಕ್ಕೆ ಜನವರಿಯಲ್ಲಿ ತಮ್ಮ ವಾಹನಗಳ ಬೆಲೆ ಏರಿಕೆಯಾಗಲಿವೆ ಎಂದು ಘೋಷಿಸಿವೆ. ಹೀಗಾಗಿ ಕಾರುಗಳು 2024ರಿಂದ ಶೇ. 2 ರಿಂದ 3 ರಷ್ಟು ಹೆಚ್ಚಾಗಲಿದೆ. ಅದಾಗ್ಯೂ ಕೆಲ ಮಾದರಿ ಕಾರುಗಳ ಬೆಲೆ ಇನ್ನೂ ಹೆಚ್ಚಾಗಲಿದೆ ಎನ್ನಲಾಗಿದೆ.

3. ವಹಿವಾಟಿಲ್ಲದ ಯುಪಿಐ ನಿಷ್ಕ್ರಿಯ

ಗೂಗಲ್‌ ಪೇ, ಫೋನ್‌ ಪೇ ಅಥವಾ ಪೇಟಿಎಂಗಳಂತಹ ಯುಪಿಐ app ಹೊಂದಿ, ಒಂದುವೇಳೆ ಅವುಗಳನ್ನು ಒಂದು ವರ್ಷದಿಂದ ಬಳಸದೇ ಇದ್ದರೆ ಅಂತಹ ಯುಪಿಐ ಐಡಿಗಳನ್ನು 2024ರ ಜನವರಿ 1 ರಿಂದ ನಿಷ್ಕ್ರಿಯಗೊಳಿಸಲಾಗುತ್ತದೆ. ವಂಚನೆಗಳನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಅದಾಗ್ಯೂ ಮತ್ತೆ ಯುಪಿಐ ಐಡಿ ಮರು ನೋಂದಣಿ ಮಾಡಿಕೊಳ್ಳಬಹುದು. ಇನ್ನು ಬ್ಯಾಂಕ್‌ ಲಾಕರ್‌ ಇರುವವರು ಮರು ಒಪ್ಪಂದ ಮಾಡಿಕೊಳ್ಳದಿದ್ದರೆ ಲಾಕರ್ ಲಾಕ್‌ ಆಗುತ್ತದೆ.

ಸುಕನ್ಯಾ ಸಮೃದ್ಧಿ, 3 ವರ್ಷದ ಠೇವಣಿಗೆ ಬಡ್ಡಿ ದರ ಏರಿಸಿದ ಕೇಂದ್ರ ಸರ್ಕಾರ!

4. ಸರಳ ಭಾಷೆಯಲ್ಲಿನ್ನು ವಿಮಾ ಪಾಲಿಸಿ ದಾಖಲೆಗಳು:

ಇನ್ನು ಮುಂದೆ ಆರೋಗ್ಯ ವಿಮಾ ಪಾಲಿಸಿ ದಾಖಲೆಗಳು ಗ್ರಾಹಕರಿಗೆ ಅರ್ಥವಾಗುವ ಸರಳ ಭಾಷೆಯಲ್ಲೇ ಇರುತ್ತವೆ. ಜನವರಿ 1, 2024 ರಿಂದ ಜಾರಿಗೆ ಬರುವಂತೆ ಸರಳ ಭಾಷೆಯಲ್ಲಿ ಆರೋಗ್ಯ ವಿಮಾ ಪಾಲಿಸಿದಾರರಿಗೆ ಗ್ರಾಹಕ ಮಾಹಿತಿ ಹಾಳೆಗಳನ್ನು (ಸಿಐಎಸ್‌) ಬಿಡುಗಡೆಗೆ ವಿಮಾ ನಿಯಂತ್ರಕ ಐಆರ್‌ಡಿಎಐ ವಿಮಾದಾರರಿಗೆ ತಿಳಿಸಿದೆ. ಸಿಐಎಸ್‌ಗಳು ಜಟಿಲವಾದ ಕಾನೂನಾತ್ಮಕ ಭಾಷೆ ಹೊಂದಿರುವುದರಿಂದ ಅದು ಪಾಲಿಸಿದಾರರಿಗೆ ಅರ್ಥವಾಗುವುದಿಲ್ಲ.

5. ಇ-ವೆರಿಫಿಕೇಶನ್‌ನಿಂದಲೇ ಸಿಮ್‌ ಕಾರ್ಡ್

ಇನ್ನು ಸಿಮ್‌ ಕಾರ್ಡ್ ಪಡೆಯಲು ಗ್ರಾಹಕರು ತಮ್ಮ ದಾಖಲಾತಿಗಳನ್ನು ಹಾರ್ಡ್ ಕಾಪಿ ಅಥವಾ ಜೆರಾಕ್ಸ್‌ ಪ್ರತಿಗಳನ್ನು ಹಸ್ತಾಂತರಿಸುವ ಯಾವುದೇ ಅಗತ್ಯವಿಲ್ಲ. ಇ- ವೆರಿಫಿಕೇಶನ್‌ ಅಥವಾ ಇನ್ನು ಮುಂದೆ ಆನ್‌ಲೈನ್‌ನಲ್ಲೇ ದಾಖಲೆ ಸಲ್ಲಿಸುವ ಮೂಲಕವೇ ಸಿಮ್‌ ಕಾರ್ಡ್ ಪಡೆಯಬಹುದು.

click me!