ಆಕಸ್ಮಿಕ ಬೆಂಕಿ ತಗುಲಿ ತೆಂಗಿನ ನಾರಿನ ಕಾರ್ಖಾನೆ ಸುಟ್ಟು ಹೋದ ಪರಿಣಾಮ, ಸುಮಾರು 70 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹಳ್ಳದ ಹೊಸಳ್ಳಿಯ ಮನೋಜ್ ಕುಮಾರ್ ಎಂಬುವವರಿಗೆ ಸೇರಿದ ಶ್ರೀ ಆಂಜನೇಯಸ್ವಾಮಿ ನಾರಿನ ಕಾರ್ಖಾನೆಗೆ ಸೋಮವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ.
ತುರುವೇಕೆರೆ: ಆಕಸ್ಮಿಕ ಬೆಂಕಿ ತಗುಲಿ ತೆಂಗಿನ ನಾರಿನ ಕಾರ್ಖಾನೆ ಸುಟ್ಟು ಹೋದ ಪರಿಣಾಮ, ಸುಮಾರು 70 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹಳ್ಳದ ಹೊಸಳ್ಳಿಯ ಮನೋಜ್ ಕುಮಾರ್ ಎಂಬುವವರಿಗೆ ಸೇರಿದ ಶ್ರೀ ಆಂಜನೇಯಸ್ವಾಮಿ ನಾರಿನ ಕಾರ್ಖಾನೆಗೆ ಸೋಮವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೃಹತ್ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ.
ಸುಮಾರು ಒಂದುವರೆ ಎಕರೆ ಜಮೀನಿನಲ್ಲಿ ನಾರಿನ ಫ್ಯಾಕ್ಟರಿಯನ್ನು ಪ್ರಾರಂಭಿಸಲಾಗಿತ್ತು. ಸೋಮವಾರ ಎಂದಿನಂತೆಯು ಚಾಲನೆಯಲ್ಲಿ ಇದ್ದ ಸಂಧರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿದ್ದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಸಹ ಪ್ರಯೋಜನವಾಗಲಿಲ್ಲ.
ಅಂತಿಮವಾಗಿ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಮಾಡಿದರು. ಆದರೂ ಸುಮಾರು 70 ಲಕ್ಷ ರೂ ಬೆಲೆಬಾಳುವ ನಾರು ಮತ್ತು ಯಂತ್ರಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾದವು. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಾಗರಾಜ್, ನವೀನ್, ಶಿವಕುಮಾರ್, ಗಂಗಾಧರಯ್ಯ ಮತ್ತು ರಾಹುಲ್ ಭಾಗವಹಿಸಿದ್ದರು.