B.S.Yadiyurappa: ತಂದೆ ಹೇಳಿದ್ದಂತೆ ಸಿಎಂ ಆದೆ: ಬಿಎಸ್‌ವೈ

By Kannadaprabha NewsFirst Published Nov 24, 2022, 1:37 AM IST
Highlights
  • ತಂದೆ ಹೇಳಿದ್ದಂತೆ ಸಿಎಂ ಆದೆ: ಬಿಎಸ್‌ವೈ
  • ಸಣ್ಣಪುಟ್ಟದ್ದಕ್ಕೆ ಬಡಿದಾಡಬೇಡ, ಒಳ್ಳೆ ಅವಕಾಶ ಸಿಗುತ್ತವೆ ಅಂತ ಅಪ್ಪ ಹೇಳಿದ್ದರು
  •  4 ಬಾರಿ ಸಿಎಂ ಸೌಭಾಗ್ಯ ಸಿಕ್ಕಿತು
  • ಹುಟ್ಟೂರು ಬೂಕನಕೆರೆಯಲ್ಲಿ ವಿಶೇಷ ಪೂಜೆ

ಕೆ.ಆರ್‌.ಪೇಟೆ (ನ.24) : ನನ್ನ ತಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ. ನಾಲ್ಕು ಬಾರಿ ಮುಖ್ಯಮಂತ್ರಿ ಆಗುವ ಸೌಭಾಗ್ಯ ಸಿಕ್ಕಿದೆ. ಜೀವನದಲ್ಲಿ ತೃಪ್ತಿ ಇದೆ. ಇನ್ಯಾವುದೇ ಅಪೇಕ್ಷೆಗಳು ನನ್ನ ಮುಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಹುಟ್ಟೂರು ಬೂಕನಕೆರೆಯಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ವರ್ಷಕ್ಕೊಮ್ಮೆ ಗ್ರಾಮದಲ್ಲಿ ವಿಶೇಷ ಪೂಜಾ ಕೈಂಕರ್ಯ ಇರುತ್ತದೆ. ನಾನು ಕೂಡ ಕುಟುಂಬಸ್ಥರೊಂದಿಗೆ ಬಂದು ಪೂಜೆ ಸಲ್ಲಿಸುತ್ತೇನೆ. ಇದು ಅನೇಕ ವರ್ಷಗಳ ಪದ್ಧತಿ, ಅದರಂತೆ ಈಗಲೂ ಬಂದಿದ್ದೇನೆ ಎಂದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಏನೂ ಮಾಡುವ ಸ್ಥಿತಿಯಲ್ಲಿಲ್ಲ, ಬಣಕಾರ ಬಂಡಾಯಕ್ಕೆ ಬಿಜೆಪಿ ಥಂಡಾ!

ಹುಟ್ಟೂರಿಗೆ ಬಂದಾಗಲೆಲ್ಲ ನನಗೆ ಸಂತೋಷ, ತೃಪ್ತಿ, ನೆಮ್ಮದಿ ಸಿಕ್ಕಿದೆ. ನಾನು ಹುಟ್ಟಿಬೆಳೆದದ್ದು ಬೂಕನಕೆರೆಯಲ್ಲಿ. ಚಿಕ್ಕ ವಯಸ್ಸಿನಲ್ಲೇ ತಾಯಿ ಕಳೆದುಕೊಂಡೆ. ತಂದೆ ನಮ್ಮನ್ನೆಲ್ಲ ಸಾಕಿದರು. ಬೂಕನಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮಂಡ್ಯಕ್ಕೆ ತೆರಳಿದೆ. ಮಂಡ್ಯದಲ್ಲಿ ಹೈಸ್ಕೂಲ… ಮುಗಿಸಿ ಬೆಂಗಳೂರಿಗೆ ಹೋದೆವು. ನನ್ನ ಇಡೀ ಜೀವನದಲ್ಲಿ ಬೂಕನಕೆರೆಯನ್ನು ಎಂದಿಗೂ ಮರೆಯಲಾಗಲ್ಲ. ಈ ಮಣ್ಣಿನ ಗುಣದಿಂದ ಈ ದೊಡ್ಡಮಟ್ಟದ ಸ್ಥಾನಕ್ಕೆ ತಲುಪಿದ್ದೇನೆ. ನಮ್ಮ ತಂದೆಯವರು ಸಣ್ಣಪುಟ್ಟಕ್ಕೆ ಬಡಿದಾಡಬೇಡ. ಮುಂದೆ ಒಳ್ಳೆಯ ಅವಕಾಶಗಳು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದರು. ಅವರು ಹೇಳಿದ ಭವಿಷ್ಯ ನಿಜವಾಗಿದೆ. ನಾಲ್ಕು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಆಗುವ ಸೌಭಾಗ್ಯ ಸಿಕ್ಕಿದೆ ಎಂದು ಹೇಳಿದರು.

ಜೀವನದಲ್ಲಿ ಇದೀಗ ತೃಪ್ತಿ ಇದೆ. ಅಂದಿನ ಕಾಲದ ಹಬ್ಬ, ಹರಿದಿನÜಗಳು ಈಗ ಇಲ್ಲ. ಆಗ ಜಾತ್ರೆಗೆ ಮನೆ ಮಂದಿಯೆಲ್ಲಾ ಹೋಗುತ್ತಿದ್ದೆವು. ನಾನು, ನಮ್ಮಣ್ಣ ತೆಂಡೆಕೆರೆ ಸಂತೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದೆವು. ಅದ್ಯಾವುದನ್ನೂ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿ. ಆ ಗುರಿ ಮುಟ್ಟುವ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಸೋಲಿನ ಭಯದಿಂದ ಆರೋಪ ಮಾಡುತ್ತಿದೆ: ಯಡಿಯೂರಪ್ಪ ಕಿಡಿ

ವಿಜಯೇಂದ್ರ ಸ್ಪರ್ಧೆ ಬಗ್ಗೆ ಪಕ್ಷದ ನಿರ್ಧಾರಕ್ಕೆ ಬದ್ಧ: ಯಡಿಯೂರಪ್ಪ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರಗೆ ಶಿಕಾರಿಪುರದಿಂದ ಸ್ಪರ್ಧಿಸುವಂತೆ ಹೇಳಿದ್ದೇನೆ. ಆದರೆ, ಪುತ್ರನ ಸ್ಪರ್ಧೆ ಬಗ್ಗೆ ಪಕ್ಷದ ಹೈಕಮಾಂಡ್‌ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದು ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

click me!