ಗೋಪಾಲಗೌಡ ಬಡಾವಣೆಯ ಡಿವಿಜಿ ಪಾರ್ಕ್ ಮುಂಭಾಗ ಕಾಣಿಕೊಂಡ ಕರಡಿಯನ್ನು ನಾಯಿಗಳು ಓಡಿಸಿಕೊಂಡು ಬಂದಿದ್ದರಿಂದ ಕರಡಿ ಆತಂಕಗೊಂಡಿತ್ತು. ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವಾಕಿಂಗ್ ಮಾಡುತ್ತಿದ್ದ ತುಕಾರಾಂ ಶೆಟ್ಟಿ ಎಂಬವರ ಮೇಲೆ ಕರಡಿ ದಾಳಿ ನಡೆಸಿ, ಅವರ ಹೊಟ್ಟೆ ಭಾಗಕ್ಕೆ ಪರಚಿದೆ. ಅದೃಷ್ಟವಶಾತ್, ಅವರ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.
ಶಿವಮೊಗ್ಗ(ಫೆ.29): ನಗರದ ಗೋಪಾಲಗೌಡ ಬಡಾವಣೆಯಲ್ಲಿ ಬೆಳಗ್ಗೆ ಕಾಣಿಸಿಕೊಂಡಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ಗೋಪಾಲಗೌಡ ಬಡಾವಣೆಯ ಡಿವಿಜಿ ಪಾರ್ಕ್ ಮುಂಭಾಗ ಕಾಣಿಕೊಂಡ ಕರಡಿಯನ್ನು ನಾಯಿಗಳು ಓಡಿಸಿಕೊಂಡು ಬಂದಿದ್ದರಿಂದ ಕರಡಿ ಆತಂಕಗೊಂಡಿತ್ತು. ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವಾಕಿಂಗ್ ಮಾಡುತ್ತಿದ್ದ ತುಕಾರಾಂ ಶೆಟ್ಟಿ ಎಂಬವರ ಮೇಲೆ ಕರಡಿ ದಾಳಿ ನಡೆಸಿ, ಅವರ ಹೊಟ್ಟೆ ಭಾಗಕ್ಕೆ ಪರಚಿದೆ. ಅದೃಷ್ಟವಶಾತ್, ಅವರ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.
undefined
ಭಾರತ ಹುಣ್ಣಿಮೆ: ರೇಣುಕಾಂಬೆ ದರ್ಶನಕ್ಕೆ ಭಕ್ತರ ದಂಡು..!
ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ದರು. ಕರಡಿ ಇರುವ ಜಾಗದ ಸಮೀಪಕ್ಕೆ ಜನರು ತೆರಳದಂತೆ ನಿರ್ಬಂಧ ವಿಧಿಸಿದರು. ನಿವೇಶನದ ಸುತ್ತಲು ಬಲೆ ಹಾಕಿ, ಕರಡಿ ತಪ್ಪಿಸಿಕೊಳ್ಳದಂತೆ ನೋಡಿಕೊಂಡರು. ಬಳಿಕ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ಮದ್ದು ನೀಡಿ, ಕರಡಿಯನ್ನು ಸೆರೆಹಿಡಿದಿದ್ದಾರೆ.