ಪಾಕಿಸ್ತಾನ ಜಿಂದಾಬಾದ್ ಎಂದು ದೇಶ ದ್ರೋಹಿ ಘೋಷಣೆ ಹಾಕುತ್ತಿದ್ದಾರೆ. ಇದು ಕಾಂಗ್ರೆಸ್‌ನ ಕುಮ್ಮಕ್ಕು. ಕಾಂಗ್ರೆಸ್ ಪ್ರೇರಣೆ ನೀತಿಯಿಂದ ಇಂತಹ ಘಟನೆ ನಡೆದಿದೆ. ಇದಕ್ಕೆ ಕಾಂಗ್ರೆಸ್ ನವರು ಉತ್ತರ ಕೊಡಬೇಕು ಎಂದ ಪ್ರಮೋದ ಮುತಾಲಿಕ್
ಬೆಳಗಾವಿ(ಫೆ.29): ರಾಜ್ಯ ಸಭಾ ಚುನಾವಣೆಯಲ್ಲಿ ವಿಧಾನ ಸಭಾ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಎಂದು ಪ್ರಮೋದ ಮುತಾಲಿಕ್ ಹೇಳಿದರು.
ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಮಾತನಾಡಿದ ಪ್ರಮೋದ ಮುತಾಲಿಕ್ ಅವರು, ರಾಜ್ಯ ಸಭಾ ಚುನಾವಣೆಯಲ್ಲಿ ನಾಸೀರ ಹುಸೇನ್ ಗೆದ್ದಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ತುಷ್ಟಿಕರಣದ ನೀತಿಯ ಪರಿಣಾಮದಿಂದಲೇ ಈ ರೀತಿ ಮುಸ್ಲಿಂ ಕಿಡಿಗೇಡಿಗಳು ಪಾಕಿಸ್ತಾನ ಪರ ಘೋಷಣೆ ಹಾಕುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ದೇಶ ದ್ರೋಹಿ ಘೋಷಣೆ ಹಾಕುತ್ತಿದ್ದಾರೆ. ಇದು ಕಾಂಗ್ರೆಸ್‌ನ ಕುಮ್ಮಕ್ಕು. ಕಾಂಗ್ರೆಸ್ ಪ್ರೇರಣೆ ನೀತಿಯಿಂದ ಇಂತಹ ಘಟನೆ ನಡೆದಿದೆ. ಇದಕ್ಕೆ ಕಾಂಗ್ರೆಸ್ ನವರು ಉತ್ತರ ಕೊಡಬೇಕು ಎಂದರು.
ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಭಾರತದಲ್ಲಿ ಹುಟ್ಟಿ ಭಾರತದ ಅಣ್ಣಾತಿಂದುಪಾಕಿಸ್ತಾನ ಘೋಷಣೆ ಕುಗಿದವರಿಗೆ ಗುಂಡು ಹಾಕಬೇಕು. ಅರೆಸ್ಟ್ ಮಾಡಿದರೆ ಸಾಲುವುದಿಲ್ಲ. ಅರೆಸ್ಟ್ ಮಾಡಿದರೆ ಹೊರಬರುತ್ತಾರೆ. ಇಮೀಡಿಯಟ್ ಗುಂಡು ಹಾಕಬೇಕು. ದೇಶ ದ್ರೋಹಿ ಕ್ಯಾನ್ಸರ್‌ವೈರಸ್ ಇದು ಎಂದು ಹೇಳಿದರು.
ಮಾಧ್ಯಮದವರು ಮೇಲೆ ಅಸಭ್ಯವಾಗಿ ವರ್ತನೆ ಮಾಡಿದ ನಾಸೀರ್ ಹುಸೇನ್ ಮೇಲೆ ಕಂಪ್ಲೆಟ್ ಮಾಡಬೇಕು. ಎಫ್‌ಐಆರ್‌ಹಾಕಬೇಕು ಅವರೆ ಈ ಘಟನೆಗೆ ಕಾರಣಿಕರ್ತರು ಎಂದರು.