* ಯಾದಗಿರಿ ನಗರದ ಹೊರಭಾಗದ ಮುದ್ನಾಳ್ ಕ್ರಾಸ್‌ನಲ್ಲಿ ನಡೆದ ಘಟನೆ
* ಮುಂಬೈನಿಂದ ಟ್ರೈನ್‌ಗೆ ಬಂದು ಆಟೋದಲ್ಲಿ ಊರಿಗೆ ತೆರಳುತ್ತಿದ್ದಾಗ ಸಂಭವಿಸಿದ ದುರ್ಘಟನೆ
* ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಯಾದಗಿರಿ(ನ.13): ಲಾರಿಯೊಂದು(Truck) ಆಟೋಗೆ(Auto) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 2 ತಿಂಗಳ ಮಗು ಸೇರಿ ಮೂವರು ಮೃತಪಟ್ಟ ಘಟನೆ ಯಾದಗಿರಿಯಲ್ಲಿ(Yadgir) ನಿನ್ನೆ(ಶುಕ್ರವಾರ) ತಡರಾತ್ರಿ ಯಾದಗಿರಿ ನಗರದ ಹೊರಭಾಗದ ಮುದ್ನಾಳ್ ಕ್ರಾಸ್‌ನಲ್ಲಿ ನಡೆದಿದೆ. ಲಕ್ಷ್ಮಣ್(26), ಜಯರಾಂ(45) ಹಾಗೂ ಕೃಷ್ಣಾ(2 ತಿಂಗಳು) ಸಾವನ್ನಪ್ಪಿದ್ದವರು ಎಂದು ಗುರುತಿಸಲಾಗಿದೆ.
ದುರ್ಘಟನೆಯಲ್ಲಿ ಆರು ಜನರಿಗೆ ಗಂಭೀರವಾದ ಗಾಯಗಳಾಗಿದ್ದು(Injured) ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ(Treatment) ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಮೃತರು9Death) ಮುಂಬೈನಿಂದ(Mumbai) ಟ್ರೈನ್‌ಗೆ ಬಂದು ಆಟೋದಲ್ಲಿ ಊರಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಕಲಬುರಗಿಯಿಂದ(Kalaburagi) ಯಾದಗಿರಿ ಕಡೆಗೆ ತೆರಳುತ್ತಿದ್ದ ಲಾರಿ ಆಟೋಗೆ ಡಿಕ್ಕಿ(Collision) ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 2 ತಿಂಗಳ ಹಸುಗೂಸು ಕೂಡ ಮೃತಪಟ್ಟಿದೆ.
undefined
ಮೃತರು ಯಾದಗಿರಿ ಜಿಲ್ಲೆಯ ಶಹಾಪುರ(Shahapur) ಹತ್ತಿರದ ಹೊತಪೇಟ ತಾಂಡಾ, ಕಂಚಗಾರಹಳ್ಳಿ ತಾಂಡಾದ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಯಾದಗಿರಿ ಸಂಚಾರ ಪೋಲಿಸರ(Police) ಭೇಟಿ ನೀಡಿ ಪ್ರಕರಣ(Case) ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ; ಬೈಕ್‌ಗೆ ಗುದ್ದಿದ ಕಾರು, ಪಾದಚಾರಿಗೆ ಗುದ್ದಿದ ಬೈಕ್.. ತುಳಿದು ವೃದ್ಧನ ಹತ್ಯೆ!
ಲಾರಿ ಹಾಯ್ದು ವ್ಯಕ್ತಿ ಸಾವು
ಹುಬ್ಬಳ್ಳಿ(Hubballi): ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಶುಕ್ರವಾರ ಲಾರಿ ಹಾಯ್ದ ಪರಿಣಾಮ, ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹೊಸೂರು ಗಾಳಿ ದುರ್ಗಮ್ಮ ದೇವಸ್ಥಾನದ(Temle) ಬಳಿ ನಡೆದಿದೆ. ಬಳ್ಳಾರಿ(Ballari) ಜಿಲ್ಲೆ ಹರಪನಹಳ್ಳಿ(Harapanahalli) ತಾಲೂಕಿನ ಕಡತಿ ಗ್ರಾಮದ ನಿವಾಸಿ ಮಹೇಶ ಚನ್ನಬಸಪ್ಪ ಮಲ್ಲಾಪುರ (35) ಮೃತಪಟ್ಟವ. ಕಲಘಟಗಿಯ(Kalaghatagi) ಲಾರಿ ಚಾಲಕ ನಿಂಗಪ್ಪ ರಾಮನಿಯನ್ನು ವಶಕ್ಕೆ ಪಡೆದಿರುವ ಉತ್ತರ ಸಂಚಾರ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಂಕನಾಡಿ: ಕಾರಿನಲ್ಲಿ ಮೃತದೇಹ ಪತ್ತೆ
ಮಂಗಳೂರು(Mangaluru) ನಗರದ ಕಂಕನಾಡಿ ಬೈಪಾಸ್ ರಸ್ತೆ ಬಳಿ ನಿಲ್ಲಿಸಿದ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ(Deadbody) ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಮಣ್ಣಗುಡ್ಡೆಯಲ್ಲಿ ವಾಸವಿದ್ದ ಪ್ರಶಾಂತ್ ಕೊಟ್ಟಾರಿ (44) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿಯಿಂದಲೇ ಕಾರನ್ನು(Car) ಅದೇ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಮಧ್ಯಾಹ್ನದ ತನಕ ಅಲ್ಲೇ ನಿಂತಿದ್ದರಿಂದ ಸ್ಥಳೀಯರಿಗೆ ಅನುಮಾನ ಬಂದು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು ಕುಳಿತ ಭಂಗಿಯಲ್ಲಿ ಕೆಳಗೆ ಬಿದ್ದಿರುವುದು ಗಮನಕ್ಕೆ ಬಂದಿದೆ.
ಖಾಸಗಿ ಕಂಪನಿ ಒಂದರಲ್ಲಿ ಅಕೌಂಟೆಂಚ್ ಆಗಿದ್ದ ಪ್ರಶಾಂತ್ ಅನಾರೋಗ್ಯದಿಂದ ಗುರುವಾರ ಬೆಳಗ್ಗೆ ವೈದ್ಯರ ಬಳಿ ತಪಾಸಣೆಗೆ ಹೋಗುವುದಾಗಿ ಪತ್ನಿಯಲ್ಲಿ ತಿಳಿಸಿ ತೆರಳಿದ್ದರು. ಸಂಜೆಯಾದರೂ ಮನೆಗೆ ಬಾರದ ಕಾರಣ ಮತ್ತು ಮೊಬೈಲ್ ರಿಸೀವ್ ಮಾಡದೇ ಇದ್ದುದರಿಂದ ಬರ್ಕೆ ಠಾಣೆಯಲ್ಲಿ ನಾಪತ್ತೆ(Missing) ಪ್ರಕರಣ ದಾಖಲಾಗಿತ್ತು. ಆದರೆ ಶುಕ್ರವಾರ ತನ್ನ ಕಾರಿನಲ್ಲೇ ಶವವಾಗಿ ಕಂಡು ಬಂದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಹೃದಯಾಘಾತದಿಂದ(Heart Attack) ಸಾವು ಸಂಭವಿಸಿದೆಯೇ ಎಂಬುದು ಮರಣೋತ್ತರ(Post Mortem) ಪರೀಕ್ಷೆ ವರದಿ ಬಳಿಕ ಗೊತ್ತಾಗಲಿದೆ. ಕಾರಿನಲ್ಲಿ ಎಸಿ ಹಾಕಿ, ಗ್ಲಾಸ್ ಬಂದ್ ಮಾಡಿ ಮಲಗಿದ್ದ ಬಳಿಕ ಕಾರು ರಾತ್ರಿ ವೇಳೆ ಆಫ್ ಆಗಿದ್ದರೂ ಉಸಿರುಗಟ್ಟಿ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
ಆಗುಂಬೆ ಘಾಟ್‌ನಲ್ಲಿ ಪ್ರಪಾತಕ್ಕೆ ಬಿದ್ದ ಲಾರಿ, 4 ಸಾವು, ಹಲವರಿಗೆ ಗಾಯ
ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್ ಡಿಕ್ಕಿ: ಇಬ್ಬರ ಸಾವು
ಹೊಸಕೋಟೆ: ಮೇಲ್ಸೇತುವೆ(Flyover) ಮೇಲೆ ಕಾರಿನ ಮುಂದೆ ಸೆಲ್ಫಿ(Selfie) ತೆಗೆದುಕೊಳ್ಳುವ ವೇಳೆ ಹಾಲಿನ ಕ್ಯಾಂಟರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟು(Death), ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾವರೆಕೆರೆ ಮೇಲ್ಸೇತುವೆ ಮೇಲೆ ನಡೆದಿದೆ.
ದಿನೇಶ್(25), ವಿನಯ್(25) ಮೃತರು. ಉಳಿದಂತೆ ಜನಾರ್ದನ್ ಹಾಗೂ ಜಾಸ್ಮಿನ್ ಗಂಭೀರ ಗಾಯಗೊಂಡಿದ್ದು ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಬೆಂಗಳೂರಿನ (Bengaluru) ವೈಟ್‌ಪೀಲ್ಡ್ ನವರಾದ ಯುವಕರು ಕಾರ್ಯನಿಮಿತ್ತ ನಿನ್ನೆ ತಡರಾತ್ರಿ 1 ಗಂಟೆ ಸಮಯದಲ್ಲಿ ಕೋಲಾರಕ್ಕೆ(Kolar) ತೆರಳುತ್ತಿದ್ದರು. ಈ ವೇಳೆ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ 75ರ ತಾವರೆಕೆರೆ ಗ್ರಾಮದ ಮೇಲ್ಸೇತುವೆ ಕಾರನ್ನು ನಿಲ್ಲಿಸಿ ಸೆಲ್ಪಿ ತೆಗೆದುಕೊಳ್ಳಲು ಮುಂದಾದಾಗ ಹಿಂಬದಿಯಿಂದ ಬಂದಂತಹ ಹಾಲಿನ ಕ್ಯಾಂಟರ್ ವಾಹನ ಡಿಕ್ಕಿ(Accident) ಹೊಡೆದಿದೆ.