ಆತ್ಮಹತ್ಯೆಗೆ ಯತ್ನಿಸಿದವನ ಜೀವ ಉಳಿಸಿದ Udupi ಪೊಲೀಸರು

By Suvarna News  |  First Published Jun 3, 2022, 2:49 PM IST

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಖಾಸಗಿ ಲಾಡ್ಜ್ ನೊಳಗೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ, ಸಕಾಲದಲ್ಲಿ ಸ್ಥಳದಲ್ಲಿ ಹಾಜರಾದ ಪೊಲೀಸರು ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.


ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಜೂ.3): ಮಿಂಚಿನ ಕಾರ್ಯಾಚರಣೆ ನಡೆಸಿರುವ ಉಡುಪಿ (Udupi) ನಗರ ಪೊಲೀಸರು ವ್ಯಕ್ತಿಯೊಬ್ಬನ ಅಮೂಲ್ಯ ಜೀವ ಉಳಿಸಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಖಾಸಗಿ ಲಾಡ್ಜ್ ನೊಳಗೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ, ಸಕಾಲದಲ್ಲಿ ಸ್ಥಳದಲ್ಲಿ ಹಾಜರಾದ ಪೊಲೀಸರು ಆತ್ಮಹತ್ಯೆಗೆ (Suicide) ಮುಂದಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

Latest Videos

undefined

ಹಿಂದೆಲ್ಲ ಸಿನಿಮಾಗಳಲ್ಲಿ ತಡವಾಗಿ ಬರುವ ಪೊಲೀಸರ (Police) ದೃಶ್ಯ ಅಪಹಾಸ್ಯಕ್ಕೆ ಈಡಾಗುತ್ತಿತ್ತು. ಆದರೆ ನಿಜಕ್ಕೂ ಹಾಗಾಗಲ್ಲ ಅನ್ನೋದನ್ನ ಉಡುಪಿ ನಗರ ಪೊಲೀಸರು ಸಾಬೀತು ಮಾಡಿದ್ದಾರೆ. 

ಉಡುಪಿ ನಿವಾಸಿ ರೋಹನ್ ಕೌಟುಂಬಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಉದ್ದೇಶ ಇಟ್ಟುಕೊಂಡು ಖಾಸಗಿ ಲಾಡ್ಜಿನಲ್ಲಿ ರೂಂ ಮಾಡಿದ್ದ. ಬ್ಯಾಗ್ ಮತ್ತು ಅದರೊಳಗೆ ಸಾಕಷ್ಟು ಡ್ರಿಂಕ್ಸ್ ತೆಗೆದುಕೊಂಡು ಬಂದು ಮದ್ಯಪಾನ ಮಾಡಿದ್ದ. ಬಳಿಕ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೈ ಕೊಯ್ದುಕೊಂಡ ನಂತರ ಅದೇನಾಯ್ತೋ ಏನೋ ದೂರದ ಮಂಗಳೂರಿನಲ್ಲಿರುವ ತನ್ನ ಸ್ನೇಹಿತ ಆದಿತ್ಯ ಎಂಬವರಿಗೆ ಕರೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿ ತಿಳಿಸಿದ್ದ.‌ 

IIT DELHIಯ ಕೈಲಾಶ್ ಗುಪ್ತಾಗೆ ವಿಶ್ವದ ಅತ್ಯುತ್ತಮ ಕೋಡರ್ ಪ್ರಶಸ್ತಿ

ಆತಂಕಗೊಂಡ ಸ್ನೇಹಿತ ಮಂಗಳೂರಿನ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದರು. ಮಂಗಳೂರು ಪೊಲೀಸ್ ಕಂಟ್ರೋಲ್ ರೂಮ್ ನಿಂದ ಉಡುಪಿ ಪೊಲೀಸರಿಗೆ ಮಾಹಿತಿ ಬಂದು ಉಡುಪಿ ನಗರ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿರುವ ವಿಷಯ ತಿಳಿಯುತ್ತೆ.

ಉಡುಪಿ ನಗರ ಠಾಣೆಯ ಇನ್ ಸ್ಪೆಕ್ಟರ್ ಪ್ರಮೋದ್ ಕುಮಾರ್ ತಕ್ಷಣ ಕಾರ್ಯಪ್ರವೃತ್ತರಾಗಿ ಇತರ ಪೊಲೀಸ್ ಸಿಬ್ಬಂದಿಗಳ ಜೊತೆ , ರೋಹನ್ ತಂಗಿದ್ದ ಖಾಸಗಿ ಲಾಡ್ಜಿಗೆ ತೆರಳಿದ್ದಾರೆ. ಲಾಡ್ಜ್ ರೂಮ್ ಬಾಗಿಲು ತೆಗೆದು ನೋಡಿದಾಗ ರೋಹನ್ ಕೈನ ನರ ಕೊಯ್ದುಕೊಂಡು ರಕ್ತ ನಡುವೆ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ. 

Textbook Revision Row: 70 ಜನರು ಕೂಗಿದ್ರೆ ಜನಾಕ್ರೋಶವಲ್ಲ: ಸಿ.ಟಿ.ರವಿ

ಮಕ್ಕಳನ್ನು ನೋಡಲು ಬಿಡದ ಪತ್ನಿ: ಕಳೆದ ಹಲವಾರು ವರ್ಷಗಳಿಂದ ರೋಹನ್ ಕೌಟುಂಬಿಕ ಕಲಹದಿಂದ ನೊಂದಿದ್ದ. 2 ವರ್ಷಗಳ ಹಿಂದೆ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗೆ ತನ್ನ ಕೌಟುಂಬಿಕ ಸಮಸ್ಯೆ ಬಗ್ಗೆ ದೂರಿಕೊಂಡಿದ್ದ. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.‌ ತನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂಬ ನೋವನ್ನು ಈ ವೇಳೆ ಪೊಲೀಸರೊಂದಿಗೆ ಹಂಚಿಕೊಂಡಿದ್ದಾನೆ. ಸಾಕಷ್ಟು ಸಾಂತ್ವನ ಹೇಳಿದ ಪೊಲೀಸರು ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ.

ಸಕಾಲದಲ್ಲಿ ತಲುಪಿದ ಪೊಲೀಸರು ಉಳಿದ ಜೀವ: ಮಂಗಳೂರು ಪೊಲೀಸ್ ಮಾಹಿತಿ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಪ್ರಮೋದ್ ಕುಮಾರ್ ನೆತೃತ್ವದ ಉಡುಪಿ ನಗರ ಪೊಲೀಸರ ತಂಡ ಕೊನೆಗೊಂದು ಅಮೂಲ್ಯ ಗಳಿಸುವಲ್ಲಿ ಯಶಸ್ವಿಯಾಗಿದೆ.

Chikkamagaluru; ಸೋರುತ್ತಿರುವ ಶಾಲೆ, ಒದ್ದೆ ಪುಸ್ತಕವನ್ನು ಬಿಸಿಲಲ್ಲಿ ಒಣಗಿಸುವ ಮಕ್ಕಳು!

 ಸಕಾಲದಲ್ಲಿ ಲಾಡ್ಜಿಗೆ ತಲುಪಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಉಡುಪಿ ನಗರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಮತ್ತು ತಂಡದ ಸಮಯ ಹಾಗೂ ಕರ್ತವ್ಯ ಪ್ರಜ್ಞೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ

click me!