BDA Land Scam: ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಜಾಗ 4.21 ಕೋಟಿಗೆ ಮಾರಿದರು..!

Kannadaprabha News   | Asianet News
Published : Feb 03, 2022, 04:55 AM IST
BDA Land Scam: ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಜಾಗ 4.21 ಕೋಟಿಗೆ ಮಾರಿದರು..!

ಸಾರಾಂಶ

*  ಬಿಬಿಎಂಪಿ ಮಾಜಿ ಸದಸ್ಯ ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ *  ಬಿಡಿಎ ಭೂ ಹಗರಣ ಸಂಬಂಧ 19 ಎಫ್‌ಐಆರ್‌ ದಾಖಲು *  ಮತ್ತಿಬ್ಬರನ್ನ ಬಂಧಿಸಿದ ಪೊಲೀಸರು   

ಬೆಂಗಳೂರು(ಫೆ.03):  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ(Bengaluru Development Authority) ಭೂ ಹಗರಣ ಬಗೆದಷ್ಟು ಹೊರ ಬರುತ್ತಿದ್ದು, ನಕಲಿ ದಾಖಲೆ(Fake Records) ಸೃಷ್ಟಿಸಿ ಬಿಡಿಎ(BDA) ಸ್ವಾಧೀನಪಡಿಸಿಕೊಂಡಿದ್ದ 4.21 ಕೋಟಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿದ ಆರೋಪದ ಮೇರೆಗೆ ಜೆಡಿಎಸ್‌ ಮುಖಂಡ ಸೇರಿದಂತೆ ಏಳು ಮಂದಿ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಡಿಎಸ್‌(JDS) ಪಕ್ಷದ ಮಾಜಿ ಬಿಬಿಎಂಪಿ(BBMP) ಸದಸ್ಯ ಹನುಮಂತೇಗೌಡ, ಭೂ ಮಾಲಿಕರಾದ ನಾಗರತ್ನಮ್ಮ, ಶಶೀಂದ್ರ ನಾಗರಾಜ್‌, ವಾಣಿ ಶಶೀಂಧ್ರ, ರವೀಂದ್ರ ಶಶೀಂಧ್ರ, ಮುನಿರಾಜು ಹಾಗೂ ದಿವಾಕರ್‌ ಮೇಲೆ ಆರೋಪ ಬಂದಿದ್ದು, ಬಿಡಿಎ ವಿಚಕ್ಷಣ ದಳ ಇನ್‌ಸ್ಪೆಕ್ಟರ್‌ ಎಚ್‌.ಇಂದ್ರಾಮಣಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌(FIR) ದಾಖಲಾಗಿದೆ.

BDA Scam: ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ ಮೌಲ್ಯದ ನಿವೇಶನ ನೋಂದಣಿ

ಕೆಂಗೇರಿ ಉಪ ನಗರದ ಸಮೀಪದ ಕೊಮ್ಮಘಟ್ಟ ಗ್ರಾಮದಲ್ಲಿ ಈ ಭೂ ಅಕ್ರಮ(Land Scam) ನಡೆದಿದೆ. ಇದುವರೆಗೆ ಬಿಡಿಎ ಭೂ ಹಗರಣ ಸಂಬಂಧ 19 ಎಫ್‌ಐಆರ್‌ ದಾಖಲಾಗಿದ್ದು, ಎಂಟು ಮಂದಿ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪೇಗೌಡ ಬಡಾವಣೆ ನಿರ್ಮಾಣ ಸಲುವಾಗಿ ಕೆಂಗೇರಿ ಉಪನಗರ ಸಮೀಪದ ಕೊಮ್ಮಘಟ್ಟ ಗ್ರಾಮದ ಸರ್ವೇ ನಂಬರ್‌ 78ರಲ್ಲಿ 9 ಎಕರೆ 27 ಗುಂಟೆ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ ಆರೋಪಿ ನಾಗರತ್ನ ಅವರಿಗೆ 2 ಎಕರೆ 34 ಗುಂಟೆ ಸೇರಿದೆ. 2 ಎಕರೆ 29 ಗುಂಟೆಯನ್ನು ಬಿಡಿಎ ವಶಪಡಿಸಿಕೊಂಡು ಅಧಿಸೂಚನೆ ಹೊರಡಿಸಿತ್ತು. ಇನ್ನುಳಿದ 5 ಗುಂಟೆಯನ್ನು ಸ್ವಾಧೀನದಿಂದ ಹೊರಗಿಡಲಾಗಿತ್ತು. ಆದರೆ ಭೂ ಮಾಲಿಕರಾದ ನಾಗರತ್ನಮ್ಮ ಮತ್ತು ಇತರರು, ತಮ್ಮ ಭೂಮಿ ಬಿಡಿಎ ಸ್ವಾಧೀನಕ್ಕೆ ಒಳಪಟ್ಟಿಲ್ಲ ಎಂದು ಪ್ರಾಧಿಕಾರದ ಹೆಸರಿನಲ್ಲಿ ನಕಲಿ ಹಿಂಬರಹ ಸೃಷ್ಟಿಮಾಡಿ ಮತ್ತು ನಕ್ಷೆಯನ್ನು ತಯಾರಿಸಿದ್ದರು. ಈ ನಕಲಿ ದಾಖಲೆ ಬಳಸಿ ಕೆ.ಎಂ.ಉದಯಕುಮಾರ್‌ ಎಂಬುವರಿಗೆ .4.21 ಕೋಟಿಗೆ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಟ್ಟಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇತ್ತೀಚೆಗೆ ಕೆಂಪೇಗೌಡ ಬಡಾವಣೆ ಭೂ ಸ್ವಾಧೀನ ಸಂಬಂಧ ಬಿಡಿಎ ವಿಶೇಷ ಕಾರ್ಯನಿರತ ಪಡೆ ಮತ್ತು ಜಾಗೃತ ದಳದ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.

ಜೆಡಿಎಸ್‌ ಮುಖಂಡ ಹನುಮಂತೇಗೌಡ ಹಾಗೂ ಇತರೆ ಆರೋಪಿಗಳು, ಬಿಡಿಎಗೆ 4 ಗುಂಟೆ ಮಾತ್ರ ಭೂಸ್ವಾಧೀನಕ್ಕೆ ಒಳಪಟ್ಟಿದೆ. ಉಳಿದ 2 ಎಕರೆ 30 ಗುಂಟೆ ಸ್ವಾಧೀನವಾಗಿಲ್ಲ ಎಂದು ನಂಬಿಸಿ ಮೂಲ ಖಾತೆದಾರರಾದ ನಾಗರತ್ನ ಅವರ ತಂದೆ ನಾಗಜೋಯಿಸ್‌ಗೆ ಮುಂಗಡವಾಗಿ 1 ಲಕ್ಷ ನೀಡಿ ದಾಖಲೆಗಳನ್ನು ಪಡೆದಿದ್ದರು. ಆನಂತರ ಉದಯ ಅವರಿಗೆ ನಕಲಿ ದಾಖಲೆಗಳನ್ನು ತೋರಿಸಿ ಮಾರಾಟ ಮಾಡಿರುವುದು ಗೊತ್ತಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಿಬ್ಬರ ಬಂಧನ

ಭೂ ಹಗರಣ ಸಂಬಂಧ ಬಿಡಿಎ ನೌಕರ ಸೇರಿದಂತೆ ಇಬ್ಬರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇಸ್‌ ವರ್ಕರ್‌ ವಿಜಯಮ್ಮ ಹಾಗೂ ಶಿವರಾಜ್‌ ಬಂಧಿತರಾಗಿದ್ದು(Arrest), ಬಿಡಿಎ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಲು ಈ ಇಬ್ಬರು ನೆರವಾಗಿದ್ದರು ಎಂದು ಪೊಲೀಸರು(Police) ತಿಳಿಸಿದ್ದಾರೆ.

BDA Website: ಸರ್ವೆ ನಂಬರ್ ಹಾಕಿದ್ರೆ ಒಂದೇ ಕ್ಲಿಕ್‌ನಲ್ಲಿ ಸೈಟ್‌ನ ಸಮಗ್ರ ಮಾಹಿತಿ!

ಕಾರ್ನರ್‌ ಸೈಟ್‌ಗಾಗಿ ಎಂತೆಂಥಾ ಗೋಲ್‌ ಮಾಲ್‌.. ನಿಪುಣರೇ ಬೆಚ್ಚಬೇಕು!

ಬೆಂಗಳೂರು: ಬಿಡಿಎ ಅಕ್ರಮ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಮೂರು ಎಫ್ ಐ ಆರ್ (FIR) ದಾಖಲಾಗಿದ್ದ ಘಟನೆ ಕಳೆದ ವರ್ಷ ಜು.17 ರಂದು ನಡೆದಿತ್ತು.   

ಬಿಡಿಎ ಮೂವರು ವಿಜಿಲೆನ್ಸ್ ಇನ್ಸ್ ಪೆಕ್ಟರ್ ಗಳಿಂದ ಶೇಷಾದ್ರಿಪುರಂ ಠಾಣೆಯಲ್ಲಿ(Bengaluru Police)  ದೂರು ದಾಖಲಾಗಿದೆ. ಕಾರ್ನರ್ ಸೈಟ್ ಆಕ್ಷನ್ ನಲ್ಲಿ ನಡೆದ ಗೋಲ್ ಮಾಲ್ ಬೆಳಕಿಗೆ ಬಂದಿದೆ. ವಿಜಿಲೆನ್ಸ್ ಇನ್ಸ್ ಪೆಕ್ಟರ್ ಗಳಾದ ಶ್ರೀನಿವಾಸ ವಿ.ಟಿ, ಲಕ್ಷ್ಮಯ್ಯ, ಇಂದ್ರಮಣಿಯಿಂದ ದೂರು ದಾಖಲಾಗಿದೆ. ಆರೋಪಿಗಳಾದ ಮಂಜುನಾಯ್ಕ್, ರಮೇಶ್ ಬಾಬು, ಶ್ರೀನಿವಾಸ್ ಮೇಲೆ  ಎಫ್ ಐಆರ್ ದಾಖಲಾಗಿದೆ. ಉಳಿದಂತೆ ಬಿಡಿಎ ಸಿಬ್ಬಂದಿ ಹಾಗೂ ಬ್ರೋಕರ್ ಗಳ ಹೆಸರನ್ನೂ ಕೂಡ ಆರೋಪಿಗಳ ಪಟ್ಟಿಯಲ್ಲಿ ದಾಖಲಿಸಲಾಗಿದೆ.
 

PREV
Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್