ಬಿಡಿಎ ಸೈಟ್‌ ಇ-ಹರಾಜು ಪ್ರಕ್ರಿಯೆ ಆರಂಭ, ನಿಮ್ಮ ಮನೆಯ ಕನಸು ನನಸಾಗಲಿ!

By Suvarna NewsFirst Published Jul 19, 2020, 8:10 PM IST
Highlights

ನೀವು ಖರೀದಿಸಿಲು ಯೋಜಿಸಿದ ಯಾವುದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೈಟ್ ಅನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದಾದ ಸಮಯ ಬಂದಿದೆ.  ನಿಮ್ಮ ನೆಚ್ಚಿನ ಕನಸಿನ ಸೈಟ್ ವೀಕ್ಷಿಸಲು ಮತ್ತು ಖರೀದಿಸಲು ತ್ವರೆ ಮಾಡಿ.

ಬೆಂಗಳೂರು, (ಜುಲೈ.19): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವತಿಯಿಂದ  308 ನಿವೇಶನಗಳ ಇ-ಹರಾಜು ಪ್ರಕ್ರಿಯೆ ನಾಳೆ ಬೆಳಗ್ಗೆ ಅಂದ್ರೆ ಸೋಮವಾರ (ಜುಲೈ 20)11 ಗಂಟೆಯಿಂದ ಪ್ರಾರಂಭವಾಗಲಿದೆ.

 ಒಟ್ಟು 5 ಹಂತದಲ್ಲಿ ಇ-ಹರಾಜು ಪ್ರಕ್ರಿಯೆ ನಡೆಯಲಿದ್ದು,  ಇದೇ ಮೊದಲ ಬಾರಿಗೆ 308 ಸೈಟ್‌ಗಳಿಗೆ ಇ-ಮ್ಯಾಪಿಂಗ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಸೈಟ್ ಎಲ್ಲಿದೆ? ಎನ್ನುವುದನ್ನ ಖರೀದಿದಾರರು ಇದ್ದಲಿಯೇ ತಿಳಿದುಕೊಳ್ಳಬಹುದು.

ಬೆಂಗಳೂರಿನ ಅಂಜನಾಪುರ, ಸರ್.ಎಂ. ವಿಶೇಶ್ವರಯ್ಯ ಮತ್ತು ಬನಶಂಕರಿ ಒಳಗೊಂಡಂತೆ ಹಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಬಿಡಿಎ ಸೈಟ್‌ಗಳು ಲಭ್ಯ ಇದ್ದು, ಬ್ರೋಕರ್‌ಗಳ ಕಾಟವಿಲ್ಲದೇ  ನೇರವಾಗಿ ಇ-ಹರಾಜಿನಲ್ಲಿ ಭಾಗವಹಿಸಿ.

ಕೊರೋನಾ ಮಧ್ಯೆಯೇ ಬಿಡಿಎದಿಂದ 2 ನೇ ಬಿಡ್ಡಿಂಗ್; ಸೈಟ್‌ ಮಾರಾಟಕ್ಕೆ ಇ- ಮ್ಯಾಪಿಂಗ್..! 

ಪ್ರಸ್ತುತ ಕೊರೋನಾ ಲಾಕ್‌ಡೌನ್ ಕಾರಣದಿಂದಾಗಿ, ಖರೀದಿದಾರರು ಯಾವುದೇ ಆಸ್ತಿಯನ್ನು ಖರೀದಿಸುವ ಮೊದಲು ಈ ಸೈಟ್‌ಗಳನ್ನು ಸ್ಥಳಕ್ಕೆ ತೆರಳಿ ನೋಡುವುದು ಕಠಿಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಯೋ-ಟ್ಯಾಗ್ ಮಾಡಲಾದ ಸೈಟ್ ಪಟ್ಟಿಯನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು,  ವಿಶ್ವದ ಯಾವುದೇ ಭಾಗದಿಂದ ಜನರು ಈ ಮಾಹಿತಿಯನ್ನು ತಾವು ಕುಳಿತಲ್ಲೇ ಪಡೆದುಕೊಳ್ಳುವಷ್ಟು ಬಿಡಿಎ ತಂತ್ರ ಉಪಯೋಗಿಸಿದೆ.

ಕುಳಿತಲ್ಲೇ ಸೈಟ್ ವೀಕ್ಷಣೆ

ಹೌದು...ಸೈಟ್ ಖರೀದಿಗೆ ಯೋಚಿಸುವವರು ಇದ್ದಲ್ಲಿಯೇ ಕುಳಿತು ಸೈಟಿನ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಪ್ರಾಧಿಕಾರದ ವೆಬ್‌ಸೈಟ್‌ನ ಹರಾಜು ಕೊಂಡಿಯಲ್ಲಿ ಅಳವಡಿಸಿರುವ ಇ-ಹರಾಜು ಸೈಟ್‌ ಜಿಯೋಟ್ಯಾಗ್ ಮಾಡಿದ ನಕ್ಷೆಯ ಮೇಲೆ ಸಾರ್ವಜನಿಕರು ತಾವು ಖರೀದಿಸಲು ಇಚ್ಛಿಸಿರುವ ನಿವೇಶನ ಸಂಖ್ಯೆಯ ಮೇಲೆ ಬಟನ್ ಅನ್ನು ಕ್ಲಿಕ್ ಮಾಡಿದರೆ, ಗೂಗಲ್ ಮ್ಯಾಪ್ ಮುಖಾಂತರ ಕುಳಿತಲ್ಲಿಯೇ ನೇರವಾಗಿ ನಿವೇಶನಗಳನ್ನು ವೀಕ್ಷಿಸಬಹುದು. ಈ ವೇಳೆ ಬಡಾವಣೆಯ ಹೆಸರುಗಳನ್ನೊಳಗೊಂಡಂತೆ ನಿವೇಶನದ ಖಚಿತ ಅಳತೆ ಹಾಗೂ ನಿವೇಶನದ ಪರಿಸರವು ಸಹ ನಾಗರಿಕರಿಗೆ ಲಭಿಸಲಿದೆ.

 ಮೊದಲ ಹಂತ
1 ರಿಂದ 75 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 06/08/2020 ರಂದು ಸಂಜೆ 6 ಕ್ಕೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 05/08/2020 ಸಂಜೆ 4 ಗಂಟೆ.

 2ನೇ ಹಂತ
76 ರಿಂದ 127ನೇ ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 07/08/2020 ರಂದು ಸಂಜೆ 6 ಕ್ಕೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 06/08/2020 ಸಂಜೆ 4 ಗಂಟೆ.

3ನೇ ಹಂತ
128 ರಿಂದ 191 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 08/08/2020 ರಂದು ಸಂಜೆ 6 ಕ್ಕೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 07/08/2020 ಸಂಜೆ 4 ಗಂಟೆ.

4ನೇ ಹಂತ
192 ರಿಂದ 254 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 11/08/2020 ರಂದು ಸಂಜೆ 6 ಕ್ಕೆ ಮುಕ್ತಾಯವಾಗಲಿದೆ.ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 10/08/2020 ಸಂಜೆ 4 ಗಂಟೆ.

5ನೇ ಹಂತ
255 ರಿಂದ 308 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 12/08/2020 ರಂದು ಸಂಜೆ 6 ಕ್ಕೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 11/08/2020 ಸಂಜೆ 4 ಗಂಟೆ.

ಹೆಚ್ಚಿನ ಮಾಹಿತಿಗಾಗಿ
* ಬಿಡಿಎ ಸೈಟ್‌ಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ದೂರವಾಣಿ ಸಂಖ್ಯೆ 080-23368435/23368036 ಸಂಪರ್ಕಿಸಬಹುದು.
* ಇ\ಇ-ಹಾರಾಜು ವೆಬ್‌ಸೈಟ್‌ನ ಮುಖಾಂತರ ನೇರವಾಗಿ ಭಾಗವಹಿಸಲು ಇಚ್ಛಿಸುವವರು  eproc.karnataka.gov.in ಸಂಪರ್ಕಿಸಿ.
* ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.bdabangalore.org .
* ಸೈಟಿನ ಇ-ಹರಾಜು ಮಾಹಿತಿಗಾಗಿ http://bdabengaluru.org/englishe-auction

click me!