ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

By Kannadaprabha News  |  First Published Apr 26, 2021, 7:58 AM IST

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಹಾಸಿಗೆ ಕಾಯ್ದಿರಿಸುವುದು, ಪಾಲಿಕೆ ಆ್ಯಂಬುಲೆನ್ಸ್‌ ಸೇವೆ| ಕೋವಿಡ್‌ನ ಈ ದುರಿತ ಕಾಲದಲ್ಲಿ ತಕ್ಷಣ ಸಹಾಯ ದೊರಕಲಿ ಎಂಬ ಸದುದ್ದೇಶದಿಂದ ಸಂಬಂಧಪಟ್ಟವರ ವಿವರಗಳನ್ನು ನೀಡುತ್ತಿರುವ ‘ಕನ್ನಡಪ್ರಭ’| 


ಬೆಂಗಳೂರು(ಏ.26): ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಎಂಟು ವಲಯಗಳಲ್ಲಿ ದಿನದ 24 ತಾಸು ಕಾರ್ಯ ನಿರ್ವಹಿಸುವ ವಿವಿಧ ಸಹಾಯವಾಣಿ ಆರಂಭಿಸಲಾಗಿದೆ.

ಸಾರ್ವಜನಿಕರು ಈ ಸಹಾಯವಾಣಿಗಳಿಗೆ ಕರೆ ಮಾಡಿ ಕೊರೋನಾ ಸಂಬಂಧ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವುದು, ಪ್ರವೇಶ, ಕೋವಿಡ್‌ ಆರೈಕೆ ಕೇಂದ್ರದಲ್ಲಿ ಹಾಸಿಗೆ ಕಾಯ್ದಿರಿಸುವುದು, ಪಾಲಿಕೆ ಆ್ಯಂಬುಲೆನ್ಸ್‌ ಸೌಲಭ್ಯ, ಹೋಂ ಐಸೊಲೇಷನ್‌ ಸಂಬಂಧ ಮಾಹಿತಿ ಪಡೆಯಬಹುದಾಗಿದೆ. ಕೋವಿಡ್‌ನ ಈ ದುರಿತ ಕಾಲದಲ್ಲಿ ತಕ್ಷಣ ಸಹಾಯ ದೊರಕಲಿ ಎಂಬ ಸದುದ್ದೇಶದಿಂದ ‘ಕನ್ನಡಪ್ರಭ’ ಸಂಬಂಧಪಟ್ಟವರ ವಿವರಗಳನ್ನು ನೀಡುತ್ತಿದೆ.

Tap to resize

Latest Videos

ಪೂರ್ವ ವಲಯ- 74110 38024/ 98864 96295), ಪಶ್ಚಿಮ ವಲಯ- 080 68248454, ದಕ್ಷಿಣ ವಲಯ- 84318 16718, ಮಹದೇವಪುರ ವಲಯ- 080 23010101/23010102, ಬೊಮ್ಮನಹಳ್ಳಿ ವಲಯ- 88846 66670, ಯಲಹಂಕ ವಲಯ- 94806 85964, ರಾಜರಾಜೇಶ್ವರಿ ನಗರ ವಲಯ- 080 28601050 ಹಾಗೂ ದಾಸರಹಳ್ಳಿ ವಲಯ- 080 29590057/29635904/5906 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಕೋವಿಡ್‌ ಶವ ಉಚಿತ ಸಾಗಾಣಿಕೆಗೆ ಸಹಾಯವಾಣಿ

ಉಚಿತವಾಗಿ ಶವ ಸಾಗಿಸಲು ಸಂಪರ್ಕಿಸಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನಿಂದ ಮೃತರಾದವರ ಶವವನ್ನು ಮನೆ- ಆಸ್ಪತ್ರೆಯಿಂದ ಚಿತಾಗಾರಕ್ಕೆ ಉಚಿತವಾಗಿ ಸಾಗಿಸಲು ಅನುವಾಗುವಂತೆ ಸಹಾಯವಾಣಿ 080 22493202 ಹಾಗೂ 080 22493203 ಆರಂಭಿಸಲಾಗಿದೆ. ಜೊತೆಗೆ ಮೊಬೈಲ್‌ ಹಾಗೂ ವಾಟ್ಸಾಪ್‌ ಸಂಖ್ಯೆ 87921 62736 ಸಂಪರ್ಕಿಸಬಹುದಾಗಿದೆ. ಸದರಿ ಸಹಾಯವಾಣಿಯು ನಿತ್ಯ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಕಾರ್ಯ ನಿರ್ವಹಿಸಲಿದೆ. ಈ ಸಹಾಯವಾಣಿಗೆ ಕರೆ ಮಾಡಿ ಶವ ಸಾಗಣೆ ವಾಹನಗಳ ಸೇವೆ ಬಳಸಿಕೊಳ್ಳಬಹುದಾಗಿದೆ.

1912 ಸಹಾಯವಾಣಿ

ಕೊರೋನಾ ಸೋಂಕು ಸಂಬಂಧ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಬೆಸ್ಕಾಂನ ಸಹಾಯವಾಣಿ 1912 ಆರಂಭಿಸಲಾಗಿದೆ. ಕೊರೋನಾ ಸೋಂಕಿತರಿಗೆ ಹಾಸಿಗೆ ಹಂಚಿಕೆ, ಆಸ್ಪತ್ರೆಗೆ ಸಂಬಂಧಿಸಿದ ಬಿಲ್ಲಿಂಗ್‌ ಸಮಸ್ಯೆಗಳು ಹಾಗೂ ಸಾಮಾನ್ಯ ಮಾಹಿತಿಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ. ಸೋಂಕಿತರಿಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಕರೆಗಳನ್ನು 104 ಸಹಾಯವಾಣಿಗೆ ವರ್ಗಾಯಿಸಲಾಗುತ್ತದೆ. ಸಾರಿ, ಐಎಲ್‌ಐ ಲಕ್ಷಣದ ಸೋಂಕಿತರಿಗೆ ತುರ್ತು ಸೇವೆ ಅಗತ್ಯವಿದ್ದಲ್ಲಿ ಆ ಕರೆಗಳನ್ನು 108 ಸಹಾಯವಾಣಿಗೆ ವರ್ಗಾಯಿಸಲಾಗುತ್ತದೆ. ಈ ಸಹಾಯವಾಣಿ ವೈದ್ಯರ ತಂಡವು ಹಾಸಿಗೆ ಹಂಚಿಕೆ ಮತ್ತು ಆ್ಯಂಬುಲೆನ್ಸ್‌ಗಳನ್ನು ಒದಗಿಸಲಿದೆ. ಒಂದು ವೇಳೆ 1912 ಸಹಾಯವಾಣಿ ಲಭ್ಯವಾಗದಿದ್ದಲ್ಲಿ ವಾಟ್ಸಾಪ್‌ ಮೂಲಕ (94480812450) ಅಗತ್ಯ ಮಾಹಿತಿ ಪಡೆಯಬಹುದಾಗಿದೆ.

ಐಪಿಎಸ್‌ ಅಧಿಕಾರಿಗಳ ನೇಮಕ

ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಪಾಲಿಕೆಯ 8 ವಲಯಗಳಿಗೆ ಐಪಿಎಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಪೂರ್ವ ವಲಯಕ್ಕೆ ಎಸ್‌.ಡಿ.ಶರಣಪ್ಪ(94808 01201), ಪಶ್ಚಿಮ ವಲಯ ಎಂ.ಎನ್‌.ಅನುಚೇತ್‌(94808 01101), ದಕ್ಷಿಣ ವಲಯ ಹರೀಶ್‌ ಪಾಂಡೆ(94808 01501), ಮಹದೇವಪುರ ವಲಯ ಡಿ.ದೇವರಾಜು (94808 01084), ಯಲಹಂಕ ವಲಯ ಸಿ.ಕೆ.ಬಾಬಾ (94808 01064), ಬೊಮ್ಮನಹಳ್ಳಿ ವಲಯ ಶ್ರೀನಾಥ್‌ ಎಂ.ಜೋಷಿ(94808 01601), ಆರ್‌.ಆರ್‌.ನಗರ ಸಂಜೀವ್‌ ಎಂ.ಪಾಟೀಲ್‌(94808 01020), ದಾಸರಹಳ್ಳಿ ವಲಯ ಧರ್ಮೇಂದ್ರಕುಮಾರ್‌(94808 01301) ಅವರನ್ನು ಸಂಪರ್ಕಿಸಬಹುದು.

ಎರಡನೇ ಡೋಸ್ ವ್ಯಾಕ್ಸೀನ್ ಮಿಸ್ ಮಾಡಿದ್ರೆ ಏನಾಗುತ್ತೆ ?

ಚಿತಾಗಾರಗಳ ನೋಡೆಲ್‌ ಅಧಿಕಾರಿಗಳ ಸಂಪರ್ಕ

ನಗರದಲ್ಲಿ ಕೊರೋನಾ ಸೋಂಕಿತರ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ವಿದ್ಯುತ್‌ ಚಿತಾಗಾರಗಳಲ್ಲಿ ಸೋಂಕಿತರ ಶವಸಂಸ್ಕಾರ ಪ್ರಕ್ರಿಯೆ ನಿಗಾವಹಿಸಲು ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.
ಮೇಡಿ ಯಲಹಂಕ ವಲಯದ ಮೇಡಿ ಅಗ್ರಹಾರ ಚಿತಾಗಾರಕ್ಕೆ 1ನೇ ಪಾಳಿಗೆ ಕೆ.ಎನ್‌.ನಂದೀಶ್‌ (93437 49635) ಹಾಗೂ 2ನೇ ಪಾಳಿಗೆ ಕೃಷ್ಣಲಾಲ್‌ (96205 70508), ಹೆಬ್ಬಾಳದ ಚಿತಾಗಾರಕ್ಕೆ ನವೀನ್‌ ಕುಮಾರ್‌ (99807 66977) ಮತ್ತು ನಾರಾಯಣಸ್ವಾಮಿ(94497 64744), ಬೊಮ್ಮನಹಳ್ಳಿ ವಲಯದ ಕೂಡ್ಲು ಚಿತಾಗಾರಕ್ಕೆ ರವಿಕುಮಾರ್‌ (98457 23479) ಮತ್ತು ವಸಂತಕುಮಾರ್‌ (90087 46150), ಮಹದೇವಪುರ ವಲಯದ ಪಣತೂರು ಚಿತಾಗಾರಕ್ಕೆ ಮುನಿರೆಡ್ಡಿ (94806 84748) ಮತ್ತು ಬಿ.ಎನ್‌.ಪ್ರದೀಪ್‌ (99168 73120).

ಪೂರ್ವ ವಲಯದ ಕಲ್ಲಹಳ್ಳಿ ಚಿತಾಗಾರಕ್ಕೆ ನಿರಂಜನ್‌(90368 88707) ಮತ್ತು ಲಕ್ಷ್ಮಣಪ್ಪ(96634 21895), ಪಶ್ಚಿಮ ವಲಯದ ಹರಿಶ್ಚಂದ್ರಘಾಟ್‌ ಚಿತಾಗಾರಕ್ಕೆ ವೆಂಕಟೇಶ್‌(94806 83659) ಮತ್ತು ಕೇಶವಮೂರ್ತಿ (99456 97425), ಮೈಸೂರು ರಸ್ತೆಯ ಚಿತಾಗಾರಕ್ಕೆ ಜಿ.ಕೆ.ವಿಶ್ವನಾಥ್‌ (99000 95559) ಮತ್ತು ವೀರೇಶ್‌(73491 00123), ರಾಜರಾಜೇಶ್ವರಿ ನಗರ ವಲಯದ ಕೆಂಗೇರಿ ಚಿತಾಗಾರಕ್ಕೆ ಶಿವಪ್ರಸಾದ್‌(97390 94360) ಮತ್ತು ರಾಘವೇಂದ್ರ(94835 35499), ಸುಮ್ಮನಹಳ್ಳಿ ಚಿತಾಗಾರಕ್ಕೆ ಮೋಹನ್‌(94486 30428) ಮತ್ತು ಸುರೇಶ್‌(94482 89846), ಪೀಣ್ಯ ಚಿತಾಗಾರಕ್ಕೆ ದಿನೇಶ್‌ (94487 19897) ಮತ್ತು ಜಯಶಂಕರ್‌(97434 90207).
ದಕ್ಷಿಣ ವಲಯದ ಬನಶಂಕರಿ ಚಿತಾಗಾರಕ್ಕೆ ಕಲ್ಲೇಶಪ್ಪ(80952 55311) ಮತ್ತು ಶ್ರೀನಿವಾಸ(90350 87060), ವಿಲ್ಸನ್‌ ಗಾರ್ಡನ್‌ ಚಿತಾಗಾರಕ್ಕೆ ಚೇತನ್‌(98808 00788) ಮತ್ತು ಅನಿಲ್‌ ಕುಮಾರ್‌(98809 83448) ಅವರನ್ನು ಸಂಪರ್ಕಿಸಬಹುದು.
 

click me!