ಹೊಸಪೇಟೆ: ಹಂಪಿಯ ಬಡವಿಲಿಂಗ ದೇಗುಲ ಅರ್ಚಕ ಕೃಷ್ಣಭಟ್‌ ಲಿಂಗೈಕ್ಕ

By Kannadaprabha News  |  First Published Apr 26, 2021, 7:48 AM IST

1979ರಲ್ಲಿ ಹಂಪಿಗೆ ಆಗಮಿಸಿ ಸತ್ಯನಾರಾಯಣ ದೇಗುಲದ ಪೂಜೆ ಮಾಡುತ್ತಿದ್ದ ಕೆ.ಎನ್‌.ಕೃಷ್ಣ ಭಟ್‌| ಪ್ರತಿನಿತ್ಯ ಮೂರು ಮೀಟರ್‌ ಎತ್ತರವಿರುವ ಬಡವಿಲಿಂಗದ ಪಾಣಿಪೀಠವನ್ನೇರಿ ಕೃಷ್ಣ ಭಟ್‌ ಅವರು ಪೂಜೆ ಸಲ್ಲಿಸುತ್ತಿದ್ದ ಕೃಷ್ಣ ಭಟ್‌| ಮೃತರ ಅಂತ್ಯಕ್ರಿಯೆ ಭಾನುವಾರ ಹಂಪಿಯಲ್ಲಿ ನೆರವೇರಿದೆ| 


ಹೊಸಪೇಟೆ(ಏ.26): ಹಂಪಿಯ ಬಡವಿಲಿಂಗ ದೇಗುಲದ ಅರ್ಚಕರಾದ ಕಾಸರವಳ್ಳಿ ಕೃಷ್ಣ ಭಟ್‌ (87) ಭಾನುವಾರ ಬೆಳಗ್ಗೆ ಶಿವೈಕ್ಯರಾದರು. 

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯವರಾದ ಕೆ.ಎನ್‌.ಕೃಷ್ಣ ಭಟ್‌ ಅವರು 1979ರಲ್ಲಿ ಹಂಪಿಗೆ ಆಗಮಿಸಿ ಸತ್ಯನಾರಾಯಣ ದೇಗುಲದ ಪೂಜೆ ಮಾಡುತ್ತಿದ್ದರು. ಬಳಿಕ ಶ್ರೀವಿರೂಪಾಕ್ಷೇಶ್ವರ ದೇಗುಲದಲ್ಲೂ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. 1986ರಲ್ಲಿ ಆನೆಗೊಂದಿ ರಾಜವಂಶಸ್ಥ ರಾಜಾ ಅಚ್ಯುತರಾಯರು ತಮಿಳುನಾಡಿನ ಕಂಚಿಶ್ರೀಗಳ ಸೂಚನೆ ಮೇರೆಗೆ ಬಡವಿಲಿಂಗಕ್ಕೆ ನಿತ್ಯ ಪೂಜೆ ಸಲ್ಲಿಸಲು ಕೃಷ್ಣಭಟ್‌ ಅವರನ್ನು ನಿಯೋಜಿಸಿದರು. ಭಟ್ಟರಿಗೆ ಮಾಸಿಕ 300 ಮಾಸಾಶನ ಆಗಲೇ ನೀಡಿದ್ದರು.

Latest Videos

undefined

ಕೊರೋನಾ ಸೋಂಕಿನಿಂದ ಸಂಗೀತ ಗಾಯಕ, ಪದ್ಮಭೂಷಣ್ ರಾಜನ್ ಮಿಶ್ರಾ ನಿಧನ!

ಅದಿನಿಂದ 2020ರ ವರೆಗೂ ಪ್ರತಿನಿತ್ಯ ಮೂರು ಮೀಟರ್‌ ಎತ್ತರವಿರುವ ಬಡವಿಲಿಂಗದ ಪಾಣಿಪೀಠವನ್ನೇರಿ ಕೃಷ್ಣ ಭಟ್‌ ಅವರು ಪೂಜೆ ಸಲ್ಲಿಸುತ್ತಿದ್ದರು. ವಯೋವೃದ್ಧರಾಗಿದ್ದರಿಂದ ಪೂಜೆಯನ್ನು ತಮ್ಮ ಪುತ್ರ ರಾಘವಗೆ ವಹಿಸಿದ್ದರು. ಮೃತರ ಅಂತ್ಯಕ್ರಿಯೆ ಭಾನುವಾರ ಹಂಪಿಯಲ್ಲಿ ನೆರವೇರಿದೆ. ಸಚಿವರಾದ ಶ್ರೀರಾಮುಲು, ಆನಂದ್‌ ಸಿಂಗ್‌, ಡಿಸಿಎಂ ಅಶ್ವತ್ಥ್‌ನಾರಾಯಣ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಡವಿಲಿಂಗ ದೇಗುಲದಲ್ಲಿ ನಿತ್ಯವೂ ಪೂಜೆ ಮಾಡುತ್ತಿದ್ದ ಕೃಷ್ಣ ಭಟ್‌ ಅವರ ಸೇವೆಯನ್ನು ಕಂಡು ಹಲವು ಪ್ರವಾಸಿಗರು ಅವರನ್ನು ಮಾತಿಗೆಳೆದು ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದರು. ಇವರು ಜಾಲತಾಣಿಗರ ಮೆಚ್ಚಿನ ಅರ್ಚಕರು ಆಗಿದ್ದರು.
 

click me!