ಟ್ಯಾಕ್ಸ್‌ ಕಟ್ಟದ ಮಂತ್ರಿಮಾಲ್‌ಗೆ ಬೀಗ..!

Kannadaprabha News   | Asianet News
Published : Oct 01, 2021, 08:53 AM ISTUpdated : Oct 01, 2021, 09:02 AM IST
ಟ್ಯಾಕ್ಸ್‌ ಕಟ್ಟದ ಮಂತ್ರಿಮಾಲ್‌ಗೆ ಬೀಗ..!

ಸಾರಾಂಶ

*  6 ವರ್ಷಗಳಿಂದ 39.49 ಕೋಟಿ ಬಾಕಿ *  ಬೀಗ ಜಡಿಯುತ್ತಿದ್ದಂತೆ .5 ಕೋಟಿ ಪಾವತಿ *  ಅ.31ರೊಳಗೆ ಬಾಕಿ ಪಾವತಿಸುವುದಾಗಿ ಮನವಿ  

ಬೆಂಗಳೂರು(ಅ.01):  ಕಳೆದ ಆರು ವರ್ಷಗಳಿಂದ ಆಸ್ತಿ ತೆರಿಗೆ ಕಟ್ಟದೆ 39.49 ಕೋಟಿ ರು. ಬಾಕಿ ಉಳಿಸಿಕೊಂಡಿದ್ದ ನಗರದ ಮಲ್ಲೇಶ್ವರದಲ್ಲಿರುವ ‘ಮಂತ್ರಿಮಾಲ್‌’ಗೆ(Mantri Mall) ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದು ಬಿಸಿ ಮುಟ್ಟಿಸಿದ ನಂತರ ಮಾಲ್‌ ಆಡಳಿತ ಮಂಡಳಿ ಸ್ವಲ್ಪ ಪ್ರಮಾಣದ ತೆರಿಗೆ ಕಟ್ಟಿದೆ.

ಗುರುವಾರ ಬೆಳಗ್ಗೆ 10ರಿಂದ 11 ಗಂಟೆವರೆಗೆ ಮಂತ್ರಿಮಾಲ್‌ಗೆ ಬಿಬಿಎಂಪಿ(BBMP) ಸಿಬ್ಬಂದಿ ಬೀಗ ಹಾಕಿದ್ದರು. ಇದರ ಬೆನ್ನಲ್ಲೇ ‘ಮಂತ್ರಿಮಾಲ್‌’ ಆಡಳಿತ ಮಂಡಳಿ ಡಿಡಿ ಮೂಲಕ 5 ಕೋಟಿ ರು.ಗಳನ್ನು ಬಿಬಿಎಂಪಿಗೆ ಪಾವತಿಸಿ, ಬಾಕಿಯಿರುವ ಆಸ್ತಿ ತೆರಿಗೆ ಹಣವನ್ನು ಈ ಮಾಸಾಂತ್ಯದೊಳಗೆ ಪಾವತಿಸುವುದಾಗಿ ಮನವಿ ಮಾಡಿ, ಮುಚ್ಚಳಿಕೆ ಪತ್ರ ಬರೆದುಕೊಟ್ಟಿತು. ಈ ಹಿನ್ನೆಲೆಯಲ್ಲಿ ಮಂತ್ರಿಮಾಲ್‌ಗೆ ಜಡಿದಿದ್ದ ಬೀಗವನ್ನು ತೆರವುಗೊಳಿಸಲಾಯಿತು ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಶಾಪಿಂಗ್ ಪ್ರಿಯರಿಗೆ ಶಾಕ್; ನೆಲಸಮವಾಗುತ್ತಾ ಮಂತ್ರಿ ಮಾಲ್?

ಮಂತ್ರಿಮಾಲ್‌ ಆಡಳಿತ ಮಂಡಳಿ 2018-19ರಲ್ಲಿ 12.47 ಕೋಟಿ ರು., 2019-20ರಲ್ಲಿ 10.84 ಕೋಟಿ ರು., 2020-21ರಲ್ಲಿ 9.21 ಕೋಟಿ ರು. ಹಾಗೂ 2021-22ರಲ್ಲಿ 6.95 ಕೋಟಿ ರು.ಗಳು ಸೇರಿ ಒಟ್ಟು 39.49 ಕೋಟಿ ರು.ಗಳ ಆಸ್ತಿ ತೆರಿಗೆ ಪಾವತಿಸಬೇಕಿತ್ತು. ಇದರಲ್ಲಿ ಆಸ್ತಿ ತೆರಿಗೆ(Tax) ಮೊತ್ತ 27.22 ಕೋಟಿ ರು.ಗಳಾಗಿದ್ದು ಬಡ್ಡಿ 12.26 ಕೋಟಿ ರು.ಗಳಾಗಿದೆ. ಜೊತೆಗೆ 400 ರು.ದಂಡ ಮತ್ತು ಘನ ತ್ಯಾಜ್ಯದ ಸೆಸ್‌ ಮೊತ್ತ 28,800 ರು. ಒಳಗೊಂಡಿದೆ. ಈ ಹಿಂದೆ 2018-19ನೇ ಸಾಲಿಗೆ ಸಂಬಂಧಿಸಿದಂತೆ ಕಳೆದ ವರ್ಷ 10,43,81,045 ರು.ಗಳ ಚೆಕ್‌ ನೀಡಲಾಗಿದ್ದು, ಮಂತ್ರಿಮಾಲ್‌ ಬ್ಯಾಂಕಿನ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಅಮಾನ್ಯಗೊಂಡಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆಸ್ತಿ ತೆರಿಗೆ ಬಾಕಿ: ಕೋಟಿ ಕೋಟಿ ಟ್ಯಾಕ್ಸ್‌ ಕಟ್ಟಿದ ಮಂತ್ರಿಮಾಲ್‌

2020 ರಲ್ಲೂ ಕೂಡ ಮಂತ್ರಿಮಾಲ್‌ನಿಂದ ಬರಬೇಕಿದ್ದ ಆಸ್ತಿ ತೆರಿಗೆ ಹಾಗೂ ಬಡ್ಡಿ ಮೊತ್ತ 9.22 ಕೋಟಿಗಳನ್ನು ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಗಳು ವಸೂಲಿ ಮಾಡಿದ್ದರು.  2018-19ನೇ ಸಾಲಿನಿಂದ ಮಂತ್ರಿಮಾಲ್‌ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಡ್ಡಿ ಮೊತ್ತ ಸೇರಿ ಒಟ್ಟು 9.22 ಕೋಟಿ ವಸೂಲಿ ಮಾಡಲಾಗಿದೆ.  ಪ್ರತಿ ವಲಯದಲ್ಲೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಸಿದ್ಧಪಡಿಸಿಕೊಳ್ಳಲಾಗಿದ್ದು, ಆದ್ಯತೆಯ ಮೇಲೆ ಆಸ್ತಿ ತೆರಿಗೆ ವಸೂಲಿ ಮಾಡಲಾಗಿತ್ತು. 
 

PREV
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ