ಸಂಘ ಸಂಸ್ಥೆಗಳಿಗೆ ಅರ್ಥಿಕ ಸಹಾಯ ಧನ ನೀಡಲು ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಬಿಬಿಎಂಪಿ

By Suvarna NewsFirst Published Jan 21, 2023, 6:52 PM IST
Highlights

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವಂತಹ ಅರ್ಹ ಸಂಘ ಸಂಸ್ಥೆಗಳಿಗೆ ಅರ್ಥಿಕ ಸಹಾಯ ಧನವನ್ನು ನೀಡಲು ನೇರವಾಗಿ ಅರ್ಜಿಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ.

ಬೆಂಗಳೂರು (ಜ.21): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವಂತಹ ಅರ್ಹ ಸಂಘ ಸಂಸ್ಥೆಗಳಿಗೆ ಅರ್ಥಿಕ ಸಹಾಯ ಧನವನ್ನು ನೀಡಲು ನೇರವಾಗಿ ಅರ್ಜಿಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ. 2022-23ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳ ಲೆಕ್ಕಶೀರ್ಷಿಕೆ ಪಿ-0048 ರಡಿ ವಿವಿಧ ಸಂಘ ಸಂಸ್ಥೆಗಳು ಅರ್ಹ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ನೇರವಾಗಿ ಸಹಾಯಕ ಆಯುಕ್ತರು(ಕಲ್ಯಾಣ) ರವರ ಕಛೇರಿಗೆ ದಿನಾಂಕ: 21-01-2023 ರಿಂದ ದಿನಾಂಕ: 09-02-2023 ರವರೆಗೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಅನುದಾನ ಕೋರುವಂತಹ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರಬೇಕು ಹಾಗೂ ಜಾತ್ಯಾತೀತವಾದ, ಧರ್ಮಾತೀತವಾದ ಹಾಗೂ ರಾಜಕೀಯೇತರ ಕಾರ್ಯಕ್ರಮವಾಗಿ ರೂಪಗೊಂಡಿರಬೇಕು.

ಈಗಾಗಲೇ 2022-23ನೇ ಸಾಲಿಗೆ ಅರ್ಜಿಯನ್ನು ಸಲ್ಲಿಸಿರುವಂತಹ ಸಂಘ ಸಂಸ್ಥೆಗಳು ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರು ಸಾರ್ವಜನಿಕ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

Bengaluru: ಮಹಿಳೆಯರಿಗೆ 100 ವಿಶೇಷ ಶೌಚಾಲಯ ನಿರ್ಮಾಣ: ಹಾಲುಣಿಸಲು, ಬಟ್ಟೆ ಬದಲಿಸಲು ಅವಕಾಶ

ಮರ ಸ್ಥಳಾಂತರಕ್ಕೆ ಖಾಸಗಿ ಸಂಸ್ಥೆ ನೇಮಕ: ಬಿಬಿಎಂಪಿ
ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಮರಗಳನ್ನು ಕಡಿಯುವುದರ ಬದಲು ಸ್ಥಳಾಂತರಿಸಲು ಖಾಸಗಿ ಸಂಸ್ಥೆ ನೇಮಕಕ್ಕೆ ಬಿಬಿಎಂಪಿ ಅರಣ್ಯ ವಿಭಾಗ ಮುಂದಾಗಿದೆ.

ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಬಿಬಿಎಂಪಿ ಹಲವು ರಸ್ತೆಗಳ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ. ನೂರಾರು ಮರಗಳನ್ನು ಕಡಿಯುವ ಪರಿಸ್ಥಿತಿ ಎದುರಾಗಿದೆ. ಆದರೆ ಮರಗಳನ್ನು ಕಡಿಯುವ ಕುರಿತಂತೆ ಸಾರ್ವಜನಿಕರು ಮತ್ತು ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮರ ಕಡಿಯುವ ಬದಲು ಸ್ಥಳಾಂತರಿಸಲು ಬಿಬಿಎಂಪಿ ಅರಣ್ಯ ವಿಭಾಗ ಖಾಸಗಿ ಸಂಸ್ಥೆಗೆ ವಹಿಸಲು ಮುಂದಾಗಿದೆ.

 

Bengaluru: ಫೆ.15ರ ನಂತರ ಬಿಬಿಎಂಪಿ ಬಜೆಟ್‌: ತುಷಾರ್ ಗಿರಿನಾಥ್

ಅರಣ್ಯ ವಿಭಾಗ ರೂಪಿಸಿರುವ ಯೋಜನೆಯಂತೆ 0.17ರಿಂದ 0.99 ಮೀ ಸುತ್ತಳತೆಯ ಮರಗಳು ಹಾಗೂ 1 ರಿಂದ 1.99 ಮೀ. ಸುತ್ತಳತೆಯ ಮರಗಳ ಆರೋಗ್ಯವನ್ನು ಗಮನಿಸಿ ಸ್ಥಳಾಂತರಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ. ಗುತ್ತಿಗೆ ಪಡೆದವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 50 ಮರಗಳನ್ನು ಸ್ಥಳಾಂತರಿಸಿ ಅವುಗಳನ್ನು ನಿರ್ದಿಷ್ಟಅವಧಿವರೆಗೆ ನಿರ್ವಹಣೆ ಮಾಡಬೇಕು. ಅದಕ್ಕಾಗಿ .41 ಲಕ್ಷ ವೆಚ್ಚ ಮಾಡಲಾಗುತ್ತದೆ ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!