ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಮಾಕನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಮದುಮಗ ಸೇರಿ ಇಬ್ಬರು ಸ್ಥಳದಲ್ಲಿಯೇ ಸಾವಪ್ಪಿದ ದುರಂತ ಘಟನೆ ಇಂದು ನಡೆದಿದೆ.
ಚಿಕ್ಕಮಗಳೂರು (ಜ.21): ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಮಾಕನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಮದುಮಗ ಸೇರಿ ಇಬ್ಬರು ಸ್ಥಳದಲ್ಲಿಯೇ ಸಾವಪ್ಪಿದ ದುರಂತ ಘಟನೆ ಇಂದು ನಡೆದಿದೆ.
ಕಾರು ಅಪಘಾತದಲ್ಲಿ ಶಿವನಿ ಮೆಸ್ಕಾಂನಲ್ಲಿ ಜ್ಯೂನಿಯರ್ ಇಂಜಿನಿಯರ್ (ಜೆ.ಇ) ಆಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ (32) ಹಾಗೂ ಅವರೊಂದಿಗಿದ್ದ ನಾಗರಾಜ್ (40) ಮೃತ ದುರ್ದೈವಿಗಳು. ಇನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಮೃತ ಕಿರಣ್ ಅವರಿಗೆ ಮುಂಬರುವ ಫೆಬ್ರವರಿ 8 ರಂದು ಮದುವೆ ನಿಗದಿಯಾಗಿತ್ತು. ಆದರೆ, ಕೆಲಸದ ನಿಮಿತ್ತ ಕಾರಿನಲ್ಲಿ ಹೋಗುವಾಗ ಕಾರು ಮರಕ್ಕೆ ಡಿಕ್ಕಿ ಹೊಡೆದ ರಭಸದಿಂದ ಸಾವನ್ನಪ್ಪಿದ್ದಾರೆ. ಇನ್ನು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ನಿಶ್ಚಯವಾಗಿ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಮದುವೆ ಮಾಡುವ ಕನಸು ಹೊತ್ತಿದ್ದ ತಂದೆ ತಾಯಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರಿನಲ್ಲಿ ಮತ್ತೆ ರಾಕ್ಷಸ ಪ್ರವೃತ್ತಿಯ ಕಾರ್ ರೈಡ್: ಬಾನೆಟ್ ಏರಿದವನ 2 ಕಿ.ಮೀ ಎಳೆದೊಯ್ದಳು
ಮದುವೆಗೂ ಮುನ್ನ ಕಮರಿದ ಕನಸು: ಇನ್ನು ತನ್ನನ್ನು ವರಿಸುವ ಹುಡುಗ ಮೆಸ್ಕಾಂ ಉದ್ಯೋಗಿಯಾಗಿದ್ದು, ಆತನನ್ನು ಮದುವೆಯಾದರೆ ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ವಧು ಕನಸು ಕಂಡಿದ್ದಳು. ಜೀವನದ ಗೋಪುರವನ್ನೇ ಕಟ್ಟಿಕೊಂಡು ಮದುವೆ ದಿನಕ್ಕಾಗಿ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದಳು. ಇನ್ನು ವಧುವಿನ ಮನೆಯವರು ಕೂಡ ಮದುವೆಗೆ ಅಗತ್ಯವಿರುವ ಆಭರಣಗಳು, ಬಟ್ಟೆ ಸೇರಿ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ, ಈಗ ಮದುಮಗನೇ ಅಪಘಾತಕ್ಕೆ ಬಲಿಯಾಗಿದ್ದು, ವಧು ಸೇರಿದಂತೆ ಎಲ್ಲರಿಗೂ ಬರಸಿಡಿಲು ಬಡಿದಂತಾಗಿದೆ.
ಕಾರಿನ ಬಾನೆಟ್ ಮೇಲೆ ಯುವಕ ಮೃಗಿಯ ವರ್ತನೆ: ಬೆಂಗಳೂರು(ಜ.21): ಬೆಂಗಳೂರಿನಲ್ಲಿ ಬೈಕ್ ಸವಾರ ವೃದ್ಧನನ್ನ ದರದರನೇ ಎಳೆದುಕೊಂಡು ಹೋಗಿದ್ದ ಘಟನೆ ಮಾಸುವ ಮುನ್ನ ಮತ್ತೊಂದು ಅಮಾನವಿಯ ಘಟನೆ ನಡೆದಿದೆ. ರಾಜಧಾನಿಯಲ್ಲಿ ನಡೆದಿರೋ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಕೇಸ್ ವರದಿಯಾಗಿದೆ. ಬೈಕ್ ಸವಾರನೊಬ್ಬ 70 ವರ್ಷದ ವೃದ್ಧನ್ನ ದರದರನೇ ಎಳೆದಕೊಂಡು ಹೋಗಿದ್ದ ಘಟನೆ ಮಾಸುವ ಮುನ್ನ ಮತ್ತೊಂದು ಹಿಟ್ ಅಂಡ್ ರನ್ ಕೇಸ್ ಉಲ್ಲಾಳ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರಿನ ಬಾನೆಟ್ ಮೇಲೆ ಯುವಕ ಕುಳಿತಿದ್ದರೂ ಮಹಿಳೆಯ ಮೃಗಿಯ ವರ್ತನೆ ತೋರಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.
ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನೇ ಎಳೆದೊಯ್ದ ಕಾರು!
ಇಬ್ಬರೂ ಪೊಲೀಸ್ ಠಾಣೆಗೆ ಹಾಜರು: ಉಲ್ಲಾಳ ಮುಖ್ಯ ರಸ್ತೆಯಲ್ಲಿ ಟಾಟಾ ನೆಕ್ಸಾನ್ ಕಾರು ಪ್ರಿಯಾಂಕ ಅನ್ನೋ ಮಹಿಳೆ ಡ್ರೈವ್ ಮಾಡಿಕೊಂಡು ಹೋಗುತ್ತಿರುತ್ತಾರೆ. ರ್ಯಾಶ್ ಡ್ರೈವಿಂಗ್ ಮಾಡಿಕೊಂಡು ಹೋಗುತ್ತಿದ್ದನ್ನ ದರ್ಶನ್ ಎಂಬ ಯುವಕ ಪ್ರಶ್ನೇ ಮಾಡಿದ್ದಾನೆ. ಮಹಿಳೆ ಬೆರಳು ತೋರಿಸಿ ದರ್ಪ ತೊರಿದ್ದಾಳೆ. ಮಹಿಳೆ ಯಾವಾಗ ದರ್ಪ ತೋರಿ ಮುಂದೆ ಕಾರು ಮೂವ್ ಮಾಡಲು ಮುಂದಾದಾಗ ದರ್ಶನ್ ಹಾಗೂ ಅವರ ತಂಡ ಕಾರನ್ ಚೇಸ್ ಮಾಡಿದ್ದಾರೆ. ತಡೆದು ಗಲಾಟೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರಿಗೆ ಮಾಹಿತಿ ಹೋಗಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಇಬ್ಬರಿಗೂ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿ ಹೊರಟಿದ್ದಾರೆ.