ವೀಕ್ ಆಫ್ ಇಲ್ದೇ ದುಡಿಯುತ್ತಿರೋರಿಗೆ ಟ್ವೀಟ್ ಸಲಾಂ..!

Suvarna News   | Asianet News
Published : Apr 23, 2020, 12:31 PM IST
ವೀಕ್ ಆಫ್ ಇಲ್ದೇ ದುಡಿಯುತ್ತಿರೋರಿಗೆ ಟ್ವೀಟ್ ಸಲಾಂ..!

ಸಾರಾಂಶ

ಇಲ್ಲೊಬ್ಬರು ಐಎಎಸ್ ಅಧಿಕಾರಿ ತಮ್ಮೊಟ್ಟಿಗೆ 40 ದಿನಗಳಿಂದ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಸೈಲೆಂಟ್ ವಾರಿಯರ್ಸ್ ಕೆಲಸಕ್ಕೆಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತರಾಗಿರುವ ಡಾ. ರವಿ ಸುರಪುರ್ ಅವರು ತಮ್ಮ ಇಡೀ ಟೀಮ್‌ನ ಫೋಟೋ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.  

ಬೆಂಗಳೂರು(ಏ.23): ಕೊರೋನಾ ವಿರುದ್ದ ಹೋರಾಟ ನಡೆಸುತ್ತಿರೋ ಕೊರೊನಾ ವಾರಿಯರ್ಸ್ ಅಂತ ಗುರುತಿಸಲ್ಪಡುವ ಡಾಕ್ಟರ್ ನರ್ಸ್, ಪೊಲೀಸರು, ಪೌರ ಕಾರ್ಮಿಕರನ್ನ ಗುರುತಿಸಿ ಧನ್ಯವಾದ ತಿಳಿಸುತ್ತಿರುತ್ತೇವೆ.

ಆದ್ರೆ, ಇಲ್ಲೊಬ್ಬರು ಐಎಎಸ್ ಅಧಿಕಾರಿ ತಮ್ಮೊಟ್ಟಿಗೆ 40 ದಿನಗಳಿಂದ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಸೈಲೆಂಟ್ ವಾರಿಯರ್ಸ್ ಕೆಲಸಕ್ಕೆಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ಪತ್ನಿ ಮೇಲೆ ತಡರಾತ್ರಿ ಹಲ್ಲೆ: ಇಬ್ಬರು ಅರೆಸ್ಟ್!

ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತರಾಗಿರುವ ಡಾ. ರವಿ ಸುರಪುರ್ ಅವರು ತಮ್ಮ ಇಡೀ ಟೀಮ್‌ನ ಫೋಟೋ ಟ್ವೀಟ್ ಮಾಡಿ 40 ದಿನಗಳಿಂದ ಯಾವುದೇ ರಜೆಯನ್ನು ತೆಗೆದುಕೊಂಡಿಲ್ಲ‌. ನನ್ನ ಇಡೀ ಟೀಮ್ ಭಾನುವಾರವೂ ನನ್ನೊಂದಿಗೆ ಕೊರೋನಾ ವೈರಸ್ ಹೋರಾಟದಲ್ಲಿ‌ ಸಹಕರಿಸುತ್ತಿರೋ ಸೈಲೆಂಟ್ ವಾರಿಯರ್ಸ್ ಎಂದು ಅಭಿನಂದಿಸಿದ್ದಾರೆ.

ಚಿಕ್ಕಮಗಳೂರಿನ ಐದು ತಾಲೂಕುಗಳಲ್ಲಿ ವರ್ಷಧಾರೆ..!

ತಮ್ಮ ಕಚೇರಿಯಲ್ಲಿ ಸಹಯಕನಾಗಿ ಕೆಲಸ ನಿರ್ವಹಿಸೋ ಚಂದ್ರು, ನವೀನ್, ಪ್ರೇಮಾ , ಕಾವ್ಯ ಹಾಗೂ ಆಪ್ತ ಕಾರ್ಯದರ್ಶಿ ಮಂಜುನಾಥ್ , ವಿನಯ್ , ಸುರೇಶ್  ಎಲ್ಲರ ಹೆಸರನ್ನು ಟೀಟರ್ ನಲ್ಲಿ‌ ಫೋಟೋ ಸಹಿತ  ಹಾಕಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಇಂತಹ ಅದೆಷ್ಟೋ ಸೈಲೆಂಟ್ ವಾರಿಯರ್ಸ್ ನಮಗಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಶ್ರಮ‌ ಸಾರ್ಥಕವಾಗ ಬೇಕು ಅಂದ್ರೆ ನಾವು ಮನೆಯಲ್ಲಿ ಇರೋಣ ಸ್ಟೇ ಹೋಮ್ ,ಸ್ಟೇ  ಸೇಫ್..

PREV
click me!

Recommended Stories

Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ
ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?