Bengaluru: ಅಂಡರ್‌ಪಾಸ್‌, ಸ್ಕೈವಾಕ್‌ಗಳ ನಿರ್ವಹಣೆ ಮರೆತ BBMP

Published : Mar 22, 2022, 06:07 AM ISTUpdated : Mar 22, 2022, 06:14 AM IST
Bengaluru: ಅಂಡರ್‌ಪಾಸ್‌, ಸ್ಕೈವಾಕ್‌ಗಳ ನಿರ್ವಹಣೆ ಮರೆತ BBMP

ಸಾರಾಂಶ

*  ಪೊಲೀಸರ ವರದಿ ಆಧರಿಸಿ ಕ್ರಮ: ಗೌರವ್‌ ಗುಪ್ತ *  ಸಾರ್ವಜನಿಕರು ಅಂಡರ್‌ ಪಾಸ್‌, ಮೇಲ್ಸೇತುವೆ ಬಳಸಬೇಕು *  ಬೈರತಿ ಸುರೇಶ್‌ರಿಂದ 2 ಲಕ್ಷ ಪರಿಹಾರ

ಬೆಂಗಳೂರು(ಮಾ.22): ಹೆಬ್ಬಾಳ ಬಳಿ 3 ಅಡಿಯ ರಸ್ತೆ ವಿಭಜಕವನ್ನು ಏಕಾಏಕಿ ದಾಟಿ ಬರುವಾಗ ಅಚಾತುರ್ಯದಿಂದ ಬಿಬಿಎಂಪಿ ಘನತ್ಯಾಜ್ಯ ಹೊತ್ತೊಯ್ಯುವ ಲಾರಿ ಡಿಕ್ಕಿಯಾಗಿ ಬಾಲಕಿ ಸಾವು ಸಂಭವಿಸಿದೆ. ಸಿಸಿಟಿವಿ ಆಧರಿಸಿ ತಪ್ಪು ಯಾರದ್ದು ಎನ್ನುವುದರ ಬಗ್ಗೆ ಪೊಲೀಸರು ವರದಿ ನೀಡಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌(Gaurav Gupta)s ಗುಪ್ತ ತಿಳಿಸಿದ್ದಾರೆ.

ಹೆಬ್ಬಾಳದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಗಂಟೆಗೆ ಈ ರಸ್ತೆಯಲ್ಲಿ 30 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಹೈವೇಯಲ್ಲಿ ಪಾದಚಾರಿಗಳು ಸಂಚಾರ ಮಾಡುವುದನ್ನು ನಿರ್ಬಂಧಿಸಿ ಅವರ ಅನುಕೂಲಕ್ಕಾಗಿ ಪಾದಚಾರಿ ಮೇಲ್ಸೇತುವೆ(Skywalk) ಮತ್ತು ಅಂಡರ್‌ಪಾಸ್‌(Underpass) ನಿರ್ಮಿಸಲಾಗಿದೆ. ಇದನ್ನು ಬಳಸುವುದು ಬಿಟ್ಟು ಮಧ್ಯಾಹ್ನದ ವೇಳೆ ಮೂವರು ಅಚಾತುರ್ಯವಾಗಿ 3 ಅಡಿಯ ರಸ್ತೆ ವಿಭಜಕ ದಾಟಿ ಏಕಾಏಕಿ ರಸ್ತೆಗೆ ಬಂದಿದ್ದರಿಂದ ಲಾರಿ ಡಿಕ್ಕಿಯಾಗಿದೆ. ಜನರು ಈ ರೀತಿಯ ಮಾಡಬಾರದು. ಘಟನೆ ನಡೆದ ಸ್ಥಳದ ಸುತ್ತಲೂ ಇರುವ ಸಿಸಿಟಿವಿ(CCTV) ಆಧರಿಸಿ ಮತ್ತು ಸೂಕ್ತ ತನಿಖೆ ನಡೆಸಿ ಯಾರದ್ದು ತಪ್ಪಿದೆ ಎಂಬುದರ ಬಗ್ಗೆ ಪೊಲೀಸರು(Police) ವರದಿ ನೀಡಲಿದ್ದಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮುಂದಿನ ವರ್ಷಾಂತ್ಯಕ್ಕೆ 110 ಹಳ್ಳಿಗಳಿಗೆ ಕುಡಿವ ನೀರು: ಸಿಎಂ ಬೊಮ್ಮಾಯಿ

ರಸ್ತೆ ವಿಭಜಕ ಎತ್ತರಿಸಲು ಸೂಚನೆ:

ಮುಖ್ಯ ರಸ್ತೆಗಳಲ್ಲಿ ಜನರು ರಸ್ತೆ ದಾಟುವುದನ್ನು ತಡೆಯಲು ರಸ್ತೆ ವಿಭಜಕ ಹಾಕಿದರೂ, ನಿಯಮ ಮೀರಿ ಹೋಗುವುದರಿಂದ ಕೆಲವೊಮ್ಮೆ ಅಪಘಾತ ಸಂಭವಿಸುತ್ತವೆ. ಕೂಡಲೆ, ಹೆಬ್ಬಾಳ ರಸ್ತೆಯಲ್ಲಿನ ರಸ್ತೆ ವಿಭಜಕವನ್ನು 3 ಅಡಿಯಿಂದ 5 ಅಡಿಗೆ ಎತ್ತರಿಸಬೇಕು. ಇನ್ನು ಮಳೆ ಎರಡು ದಿನ ಮಳೆ ಬಂದಿದ್ದರಿಂದ ಪಾದಚಾರಿ ಸುರಂಗ ಮಾರ್ಗದಲ್ಲಿ (ಸಬ್‌ವೇ) ನೀರು ನಿಂತುಕೊಳ್ಳುವುದು ಸಹಜವಾಗಿದೆ. ನಿರ್ವಹಣೆ ಕಾರ್ಯ ಮಾಡಲಾಗುತ್ತಿದ್ದು, ಜನರು ಈ ಮಾರ್ಗಗಳಲ್ಲಿಯೇ ರಸ್ತೆ ದಾಟಬೇಕು ಎಂದು ಮನವಿ ಮಾಡಿದರು.

ಈ ವೇಳೆ ಶಾಸಕ ಬೈರತಿ ಸುರೇಶ್‌, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಪಾಲಿಕೆ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ಇದ್ದರು.

ಬೈರತಿ ಸುರೇಶ್‌ರಿಂದ 2 ಲಕ್ಷ ಪರಿಹಾರ

ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಬೈರತಿ ಸುರೇಶ್‌ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ ಶಾಸಕ ಬೈರತಿ ಸುರೇಶ್‌, ತಮ್ಮ ಸ್ವಂತ ಹಣದಲ್ಲಿ 2ಲಕ್ಷ ರು. ಪರಿಹಾರ ನೀಡಿದರು. ಅಲ್ಲದೇ, ಸರ್ಕಾರ ಹಾಗೂ ಬಿಬಿಎಂಪಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಜತೆಗೆ ಈ ಪ್ರಕರಣದ ಸಂಬಂಧ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ವಜಾ ಮಾಡಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

BBMP: ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ್ರೂ ರಸ್ತೆ ದುರಸ್ತಿಗೆ ಬಿಬಿಎಂಪಿ ನಕಾರ..!

ವಿಶ್ವಸಂಸ್ಥೆ ಬಂದ್ರೂ ಬೆಂಗ್ಳೂರನ್ನು ರಿಪೇರಿ ಮಾಡೋದು ಸಾಧ್ಯವಿಲ್ಲ

ಬೆಂಗಳೂರು: ಖುದ್ದಾಗಿ ವಿಶ್ವಸಂಸ್ಥೆಯೇ (United Nations) ಬಂದರೂ ಬೆಂಗಳೂರನ್ನು (Bengaluru) ರಿಪೇರಿ  ಮಾಡಲು ಸಾಧ್ಯವಿಲ್ಲ. ಈ ಮಹಾನಗರ ಅಷ್ಟೊಂದು ಅವ್ಯವಸ್ಥೆಯಿಂದ ಕೂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ (Rural Development and Panchayat Raj Minister) ಕೆ.ಎಸ್‌.ಈಶ್ವರಪ್ಪ (K S Eshwarappa) ಹೇಳಿದ್ದರಯ

ಮಾ. 12 ರಂದು ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ (Congress) ಸದಸ್ಯ ಪಿ.ಆರ್‌. ರಮೇಶ್‌ (PR Ramesh) ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಎಲ್ಲೆಲ್ಲೋ ಮನೆ ನಿರ್ಮಾಣ ಆಗಿದೆ. ಅದನ್ನು ಸರಿಪಡಿಸುವ ಉದ್ದೇಶದಿಂದ ಸಂಪುಟ ಉಪ ಸಮಿತಿ (Cabinet Sub Commite) ರಚಿಸಲಾಗಿದೆ. ಕೊಳಚೆ ನೀರು ಕೆರೆಗಳಿಗೆ ಹೋಗದಂತೆ ಕ್ರಮಕೈಗೊಳ್ಳುತ್ತಿದ್ದು 554 ಕೆರೆಗಳ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧಪಡಿಸುತ್ತಿದ್ದೇವೆ ಎಂದರು.
 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC