ಪಾದರಾಯನಪುರ ರಸ್ತೆಗಳ ಮರುನಾಮಕರಣ ರದ್ದುಗೊಳಿಸಲು ಮುಂದಾದ ಬಿಬಿಎಂಪಿ

Published : Jan 02, 2021, 10:45 PM IST
ಪಾದರಾಯನಪುರ ರಸ್ತೆಗಳ ಮರುನಾಮಕರಣ ರದ್ದುಗೊಳಿಸಲು ಮುಂದಾದ ಬಿಬಿಎಂಪಿ

ಸಾರಾಂಶ

ಪಾದರಾಯನಪುರದ 11 ರಸ್ತೆಗಳಿಗೆ ಹೆಸರು ನಾಮಪಕಾರಣ ವಿವಾದ ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಈ ಬಗ್ಗೆ ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬೆಂಗಳೂರು, (ಜ.02): ನಗರದ ಪಾದರಾಯನಪುರದ 11 ರಸ್ತೆಗಳಿಗೆ ಅಲ್ಪ ಸಮುದಾಯಕ್ಕೆ ಸೇರಿರುವ ಸಮಾಜ ಸೇವಕರ ಹೆಸರಿಡಲು ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಈ ಪ್ರಕ್ರಿಯೆ ರದ್ದುಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕಳೆದ ಸೆಪ್ಟೆಂಬರ್​ನಲ್ಲಿ ನಡೆದ ಸಭೆಯಲ್ಲಿ ಪಾದರಾಯನಪುರ ವಾರ್ಡ್​ನ ರಸ್ತೆಗಳಿಗೆ ಈ ಸಮಾಜಸೇವಕರ ಹೆಸರು ಇಡಲು ಬಿಬಿಎಂಪಿ ನಿರ್ಧರಿಸಿತ್ತು. 

ಆದರೆ, ಇದಕ್ಕೆ ಸಂಸದರಾದ ಅನಂತ್​ ಕುಮಾರ್​ ಹೆಗಡೆ, ಪಿ.ಸಿ ಮೋಹನ್​ ಮತ್ತು ತೇಜಸ್ವಿ ಸೂರ್ಯ ಭಾರಿ ವಿರೋಧ ಹೊರ ಹಾಕಿದ್ದರು. ಹೀಗಾಗಿ, ಮಂಜುನಾಥ ಪ್ರಸಾದ್ ಸರ್ಕಾರಕ್ಕೆ ಈ ಮನವಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಪಾಲಿಕೆಯ ಈ ನಿರ್ಧಾರಕ್ಕೆ ಆಕ್ರೋಶ ಹೊರ ಹಾಕಿದ್ದ ಸಂಸದ ತೇಜಸ್ವಿ ಸೂರ್ಯ ಟ್ವೀಟ್​ ಮೂಲಕ ಬಿಬಿಎಂಪಿಗೆ ಬಿಸಿ ಮುಟ್ಟಿಸಿದ್ದರು. ಅನಂತ್​ ಕುಮಾರ್ ಹೆಗಡೆ ಕೂಡ ಪತ್ರ ಬರೆದು, ಈ ನಿರ್ಧಾರ ಕೈಬಿಡಲು ಆಗ್ರಹಿಸಿದ್ದರು.

PREV
click me!

Recommended Stories

ಸಿಎಂ ಆಗಲು ಆಶೀರ್ವದಿಸಿ, ಇಡೀ ರಾಜ್ಯದ ಚಿತ್ರಣವೇ ಬದಲಿಸುವೆ: ಶಾಸಕ ಬಸನಗೌಡ ಯತ್ನಾಳ
ಕೆಎಎಸ್‌ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ: ಸಿಎಂ ಸಿದ್ದರಾಮಯ್ಯ