ಬೊಮ್ಮಾಯಿ ದುರ್ಬಲ ಸಿಎಂ: ಸಿದ್ದರಾಮಯ್ಯ ಟೀಕೆ

By Kannadaprabha News  |  First Published Dec 15, 2022, 1:23 AM IST

ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ತಂಟೆ ಮುಗಿದುಹೋದ ಅಧ್ಯಾಯ. ಆದರೆ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರು ದುರ್ಬಲ ಮುಖ್ಯಮಂತ್ರಿ ಆಗಿರುವುದರಿಂದ ಮತ್ತೆ ಈ ಸಮಸ್ಯೆ ಮುನ್ನಲೆಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.


ಬಾಗಲಕೋಟೆ (ಡಿ.15) : ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ತಂಟೆ ಮುಗಿದುಹೋದ ಅಧ್ಯಾಯ. ಆದರೆ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರು ದುರ್ಬಲ ಮುಖ್ಯಮಂತ್ರಿ ಆಗಿರುವುದರಿಂದ ಮತ್ತೆ ಈ ಸಮಸ್ಯೆ ಮುನ್ನಲೆಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಹುನಗುಂದ ತಾಲೂಕಿನ ಬೆಳಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಡಿ ಸಮಸ್ಯೆಗೆ ಸಂಬಂಧಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯನ್ನು ಅಮಿತ್‌ ಶಾ ಕರೆಯುವ ಅಗತ್ಯವಿರಲಿಲ್ಲ. ಸದ್ಯಗಡಿ ವಿಷಯದಲ್ಲಿ ಸಮಸ್ಯೆಯೇ ಇಲ್ಲ. ರಾಜಕಾರಣಕ್ಕಾಗಿ ಮಹಾರಾಷ್ಟ್ರದವರು ಗಡಿಕ್ಯಾತೆ ತೆಗೆಯುತ್ತಿದ್ದಾರೆ. ನೆಲ, ಜಲ, ಭಾಷೆಯ ವಿಷಯದಲ್ಲಿ ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕರ್ನಾಟಕದ ಅಂಗವಾಗಿರುವ ಬೆಳಗಾವಿಯ ಒಂದಿಂಚು ಜಾಗವನ್ನೂ ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ರಾಜ್ಯ ಸರ್ಕಾರ ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಪುಂಡಾಟಿಕೆಗೆ ಕಡಿವಾಣ ಹಾಕಬೇಕು ಎಂದರು.

Tap to resize

Latest Videos

undefined

ಟಿಕೆಟ್‌ಗಾಗಿ ಸಿದ್ದರಾಮಯ್ಯ ಮುಂದೆ ಕಾಂಗ್ರೆಸ್‌ ಆಕಾಂಕ್ಷಿಗಳ ಬಲಪ್ರದರ್ಶನ..!

ಜ.15ರೊಳಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆ:

ಚುನಾವಣಾ ಸಿದ್ಧತೆಗಾಗಿ ಮುಂದಿನ 75 ದಿನಗಳಲ್ಲಿ ಪಕ್ಷ ಏನೇನು ಮಾಡಬೇಕು ಎಂಬುದರ ಕುರಿತು ದೆಹಲಿಯಲ್ಲಿ ಹೈಕಮಾಂಡ್‌ ಜೊತೆ ಚರ್ಚಿಸಿದ್ದೇವೆ. ಅದರಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಜನವರಿ 15ರೊಳಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಲಿದೆ ಎಂದರು.

ಡಿ.30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ, ಜ.2ರಂದು ಹುಬ್ಬಳ್ಳಿಯಲ್ಲಿ ಮಹದಾಯಿಗಾಗಿ ಆಗ್ರಹಿಸಿ ಬೃಹತ್‌ ಸಮಾವೇಶ ನಡೆಸಲಾಗುವುದು. ಜ.8ರಂದು ಎಸ್‌ಸಿ, ಎಸ್‌ಟಿ ಸಮಾವೇಶ ನಡೆಸಲಿದ್ದೇವೆ. ಜ.9ರಿಂದ 22 ಜಿಲ್ಲೆಗಳಲ್ಲಿ ಕಾಂಗ್ರೆಸ್‌ ನಾಯಕರು ಜಂಟಿಯಾಗಿ ಪ್ರವಾಸ ಮಾಡಿ, ಬಿಜೆಪಿ ಸರ್ಕಾರದ ದುರಾಡಳಿತದ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಿದ್ದೇವೆ. ಬಳಿಕ, ಚುನಾವಣೆ ಹಿನ್ನೆಲೆಯಲ್ಲಿ ಎರಡು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲಿದ್ದೇವೆ. ಒಂದು ತಂಡದ ನಾಯಕತ್ವವನ್ನು ನಾನು ವಹಿಸಲಿದ್ದೇನೆ. ಇನ್ನೊಂದು ತಂಡಕ್ಕೆ ಡಿ.ಕೆ.ಶಿವಕುಮಾರ ಮತ್ತು ಇತರ ಹಿರಿಯರು ಮುಖಂಡತ್ವ ವಹಿಸಲಿದ್ದಾರೆ. ಸಮಯದ ಅಭಾವದಿಂದಾಗಿ ಎರಡು ತಂಡಗಳಲ್ಲಿ, ಪ್ರತ್ಯೇಕ ಬಸ್ಸುಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ. ನಾನು ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ಕೈಗೊಂಡರೆ, ದಕ್ಷಿಣ ಕರ್ನಾಟಕ ಭಾಗಕ್ಕೆ ಡಿ.ಕೆ.ಶಿವಕುಮಾರ ಅವರ ತಂಡ ತೆರಳಲಿದೆ ಎಂದು ಹೇಳಿದರು.

Karnataka Assembly Elections: ಇದು 'ವರುಣಾ' ವಾರ್: ಸಿದ್ದು ಭದ್ರಕೋಟೆಯ ಮೇಲೆ ವಿಜಯೇಂದ್ರ ಕಣ್ಣು?

 

ಬಳಿಕ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಒಡೆತನದ ಎಸ್‌.ಆರ್‌.ಕೆ ಶುಗರ್ಸ್‌ ಕಾರ್ಖಾನೆಯ ಭೂಮಿಪೂಜೆ ಸಮಾರಂಭದಲ್ಲಿ ಅವರು ಪಾಲ್ಗೊಂಡರು. ಸಮಾರಂಭದಲ್ಲಿ ಸಿದ್ದುಗೆ ಅಭಿಮಾನಿಗಳು ಟಗರು ನೀಡಿ ಸಂಭ್ರಮಿಸಿದರು. ಕಾಶಪ್ಪನವರ ದಂಪತಿ ಕಂಬಳಿ ಹೊದಿಸಿ, ಬೆಳ್ಳಿಗದೆ ನೀಡಿ ಸನ್ಮಾನಿಸಿದರು.

click me!