Zika virus ಪತ್ತೆ: ಸೋಂಕಿತ ಬಾಲಕಿ ಮನೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ

By Ravi Janekal  |  First Published Dec 14, 2022, 11:36 PM IST
  • ಝೀಕಾ ಸೋಂಕಿತ ಬಾಲಕಿಯನ್ನ ಭೇಟಿ ಮಾಡಿದ ಶಾಸಕ
  • ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ
  • ಬಾಲಕಿಯ ಆರೋಗ್ಯ ವಿಚಾರಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಡಿ.14): ಜಿಲ್ಲೆಯ ಮಾನವಿ ತಾಲೂಕಿನ ಕೋಳಿ ಕ್ಯಾಂಪ್ ಗೆ ಇಂದು ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ‌ನೀಡಿದ್ರು. ರಾಜ್ಯದಲ್ಲಿಯೇ  ಝೀಕಾ ವೈರಸ್ ಕೋಳಿ ಕ್ಯಾಂಪ್ ನಲ್ಲಿ ಪತ್ತೆಯಾಗಿದ್ದು, ಕೋಳಿ ಕ್ಯಾಂಪ್ ಗೆ ಭೇಟಿ ನೀಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಗ್ರಾಮಸ್ಥರ ಜೊತೆಗೆ ಇಡೀ ಗ್ರಾಮದ ತುಂಬಾ ಸುತ್ತಾಟ ನಡೆಸಿದರು. ಆ ಬಳಿಕ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಯಾರು ಆತಂಕಕ್ಕೆ ಒಳಗಾಗಬೇಡಿ.ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು ನೀಡಿದ ಸೂಚನೆಗಳನ್ನು ಗ್ರಾಮಸ್ಥರು ಎಲ್ಲರೂ ಪಾಲಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಝಿಕಾ ವೈರಸ್ ಸೋಂಕಿತ ಬಾಲಕಿ ಮನಗೆ  ಭೇಟಿ ಮಾಡಿದ ಶಾಸಕ ರಾಜಾ ವೆಂಕಟಪ್ಪ ‌ನಾಯಕ ಮಗುವಿನ ಆರೋಗ್ಯದ ಕುರಿತು ಪೋಷಕರೊಂದಿಗೆ ಮಾತುಕತೆ ‌ನಡೆಸಿದರು. 

Latest Videos

undefined

ಝೀಕಾ ವೈರಸ್ ಪಾಸಿಟಿವ್ ಆಗಿದೆ ಮಗುವಿನ ಆರೋಗ್ಯದಲ್ಲಿ ಚೇತರಿಕೆ:

ಮಾನ್ವಿ ತಾಲೂಕಿನ ಕೋಳಿಕ್ಯಾಂಪ್ ನ ಐದು ವರ್ಷದ ಮಗುವಿನ ಬಳಿ ಝೀಕಾ ವೈರಸ್ ಪತ್ತೆಯಾಗಿತ್ತು. ಈ ಕುರಿತು ಖುದ್ದು ಆರೋಗ್ಯ ಸಚಿವ ಡಾ.ಸುಧಾಕರ ವಿಶೇಷ ಸುದ್ದಿಗೋಷ್ಠಿ ನಡೆಸಿ ಝೀಕಾ ವೈರಸ್ ಪಾಸಿಟಿವ್ ಬಗ್ಗೆ ಮಾಹಿತಿ ನೀಡಿದ್ರು. ಅಷ್ಟೇ ಅಲ್ಲದೇ ಝೀಕಾ  ವೈರಸ್ ತಡೆಗಾಗಿ ಆರೋಗ್ಯ ಇಲಾಖೆಯ ತಜ್ಞರ ತಂಡ ವಿಶೇಷ ಗೈಡ್ ಲೈನ್ಸ್ ಸಹ ಬಿಡುಗಡೆ ಮಾಡಿ ರಾಯಚೂರಿಗೆ ಕೇಂದ್ರದ ವಿಶೇಷ ತಂಡ ಭೇಟಿ ನೀಡಿತ್ತು. 

ಕರ್ನಾಟಕಕ್ಕೂ ವಕ್ಕರಿಸಿದ ಝೀಕಾ ವೈರಸ್‌..!

ಕೋಳಿಕ್ಯಾಂಪ್ ಗೆ ಭೇಟಿ ನೀಡಿದ ಕೇಂದ್ರದ ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿ ಸುತ್ತಮುತ್ತಲಿನ 5 ಕಿ.ಮೀ. ಸರ್ವೇ ಮಾಡಲು ಸೂಚನೆ ನೀಡಿದರು. ಆದರಂತೆ ಈಗ ಕೋಳಿಕ್ಯಾಂಪ್ ಸುತ್ತಲಿನ 7 ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಸರ್ವೇ ಕಾರ್ಯ ಶುರು ಮಾಡಿದ್ದಾರೆ. ‌ಈ ಮಾಹಿತಿ ತಿಳಿದ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಖುದ್ದು ಅಧಿಕಾರಿಗಳ ತಂಡದ ಸಮೇತ ಕೋಳಿಕ್ಯಾಂಪ್ ಗೆ ಭೇಟಿ ನೀಡಿ  ಪರಿಶೀಲನೆ ನಡೆದರು. ಝೀಕಾ  ವೈರಸ್ ಬಗ್ಗೆ ಏನೇನೋ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಈಗಾಗಲೇ ಝಿಕಾ ವೈರಸ್ ಬಂದಂತ ಮಗು ಆರೋಗ್ಯದ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

 ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಮಾನವಿ ಶಾಸಕ: 

ಕೋಳಿಕ್ಯಾಂಪ್ ‌ಗೆ ಭೇಟಿ ನೀಡಿದ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು‌. ಈಗ ಕೋಳಿಕ್ಯಾಂಪ್ ‌ನಲ್ಲಿ ಒಂದು ‌ಝೀಕಾ  ಕೇಸ್ ಪತ್ತೆಯಾಗಿದೆ. ಈ ಕೇಸ್ ನಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಸ್ಥರ ಆತಂಕ ದೂರು ಮಾಡಬೇಕು. ಜೊತೆಗೆ ಗ್ರಾಮಸ್ಥರಿಗೆ ವೈರಸ್ ಬಾರದಂತೆ ಸ್ವಚ್ಚತಾ ಬಗ್ಗೆ ಮಾಹಿತಿ ‌ನೀಡಬೇಕು. ಝೀಕಾ  ವೈರಸ್ ಅಲ್ಲದೇ ಇನ್ನಿತರ ಕಾಯಿಲೆಗಳು ಬರದಂತೆ ಮುನ್ನೆಚ್ಚರಿಕೆ ‌ಕ್ರಮಗಳು ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಅಧಿಕಾರಿಗಳು ಕೆಲಸ ಮಾಡಬೇಕು. ಆರೋಗ್ಯ ಇಲಾಖೆಗೆ ತಹಸೀಲ್ದಾರ್ ಮತ್ತು ತಾ.ಪಂ. ಇಒ ಸಹಕಾರ ‌ನೀಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದ್ರು.

 ಎಲ್ಲಾ ಗ್ರಾಮದಲ್ಲಿ ಫ್ಯಾಗಿಂಗ್ ಮಾಡಲು ಅಧಿಕಾರಿಗಳಿಗೆ ಸೂಚನೆ: 

ಹಗಲಿನಲ್ಲಿ ಸೊಳ್ಳೆ ಕಡಿತದಿಂದ ಝಿಕಾ ವೈರಸ್ ಬರುತ್ತೆ. ಹೀಗಾಗಿ ಮಾನವಿ ವಿಧಾನಸಭಾ ಕ್ಷೇತ್ರದ ತುಂಬಾ ಬರುವ ಎಲ್ಲಾ ಗ್ರಾಮದಲ್ಲಿ ಸ್ವಚ್ಚತೆಗೆ ಹೆಚ್ಚು ಒತ್ತು‌ ನೀಡಬೇಕು. ಗ್ರಾಮಗಳಲ್ಲಿ ‌ಇನ್ನು ಮುಂದೆ ನಿತ್ಯವೂ ಚರಂಡಿ,ಕೊಳಚೆ ಮತ್ತು ಕಸ ಗುಡಿಸಲು ಕಾರ್ಯ ನಡೆಯಬೇಕು. ಕೊಳಚೆ ಹೆಚ್ಚಾಗಿರುವ ಗ್ರಾಮದಲ್ಲಿ ಪಾಗಿಂಗ್,ಬೀಚಿಂಗ್ ಪೌಡರ್  ಹಾಕಬೇಕು. ಈ ದಿನಗಳಲ್ಲಿ ವೈರಸ್ ಗಳ ಬೆಳವಣಿಗೆ ಹೆಚ್ಚಾಗಿರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ತಿಳಿಸಿದರು. 

Zika Virus: ಕರ್ನಾಟಕದಲ್ಲಿ ಝೀಕಾ ವೈರಸ್ ಪತ್ತೆ: ಲಕ್ಷಣಗಳು ಏನು ಗೊತ್ತಾ?

ಇನ್ನೂ ಈ ವೇಳೆ ಮಾನ್ವಿ ತಹಸೀಲ್ದಾರ್ ಅಬ್ದುಲ್ ವಾಹೀದ್,ತಾ. ಪಂ. ಇಒ ಸೈಯದ್ ಪಟೇಲ್, ತಾಲೂಕ ಆರೋಗ್ಯ ಅಧಿಕಾರಿ ಚಂದ್ರಶೇಖರ್ ಸ್ವಾಮಿ ಹಿರೇಮಠ, ವೈದ್ಯಧಿಕಾರಿಗಳಾದ ಡಾ. ಸಂಗಮೇಶ,ಡಾ ಸುಧಾಕರ,ಡಾ ಶ್ರೀಧರ, ಡಾ ಅಂಬಿಕಾ, ಡಾ ವೀಣಾ,‌ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪಾಟೀಲ ಬಲ್ಲಟಗಿ, ಮುಖಂಡರಾದ ರಾಜಾ ದೇವರಾಜ ನಾಯಕ ವಕೀಲ,ಹಂಪನಗೌಡ ನೀರಮಾನವಿ ,ಗೋಪಾಲ್ ನಾಯಕ ಹರವಿ, ಪೋಮಣ್ಣ ಹರವಿ, ಹನುಮಂತ ಕೋಳಿ ಕ್ಯಾಂಪ್,ಅಮರೇಶ ಕೋಳಿ ಕ್ಯಾಂಪ್, ಬಸವರಾಜ ಕೋಳಿ ಕ್ಯಾಂಪ್,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಶಿಕ್ಷಕರು,ಅಶಾ ಕಾರ್ಯಕರ್ತರು ಉಪಸ್ಥಿರಿದ್ದರು.

click me!