ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ತ್ರೀಯರ ಸಮಾನತೆಗೆ ಭದ್ರ ಬುನಾದಿ ಹಾಕಿದವರು ಬಸವಣ್ಣ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ತಿಳಿಸಿದರು.
ಮೈಸೂರು : ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ತ್ರೀಯರ ಸಮಾನತೆಗೆ ಭದ್ರ ಬುನಾದಿ ಹಾಕಿದವರು ಬಸವಣ್ಣ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ತಿಳಿಸಿದರು.
ಪರಂಜ್ಯೋತಿ ಮಹಿಳಾ ಬಳಗವು ನಗರದ ಶ್ರೀರಾಂಪುರದ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಮತ್ತು ಬಸವಣ್ಣ ಮತ್ತು ಅಕ್ಕಮಹಾದೇವಿ ಜಯಂತಿಯಲ್ಲಿ ಮಾತನಾಡಿದ ಅವರು, ಹೆಣ್ಣನ್ನು ಕೀಳಾಗಿ ಕಾಣುತ್ತಿದ್ದಂತಹ ಕಾಲಘಟ್ಟದಲ್ಲಿ 12ನೇ ಶತಮಾನ ಸ್ತ್ರೀಯರಿಗೆ ಪ್ರಥಮ ಬಾರಿಗೆ ಸ್ವಾತಂತ್ರ್ಯ ನೀಡುವುದರ ಮೂಲಕ ಮಹಿಳೆಯರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹಾಗೂ ವೈಚಾರಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದರು.
undefined
ನಿವೃತ್ತ ಪ್ರಾಧ್ಯಾಪಕಿ ಸಿ.ಜಿ. ಉಷಾದೇವಿ ಮಾತನಾಡಿ, ಅಕ್ಕಮಹಾದೇವಿಯವರ ಜೀವನ ಚರಿತ್ರೆ ಇಂದು ಸಮಸ್ಯೆಗಳನ್ನು ಎದುರಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಆದರ್ಶವಾಗಿದೆ. ನೋವಿನಲ್ಲೂ ನಲಿವನ್ನು ಕಂಡು ಸಾಹಿತ್ಯ ಕ್ಷೇತ್ರ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಯೋಗಿಣಿ. ಕನ್ನಡ ಮಹಿಳಾ ಸಾಹಿತ್ಯದ ಶ್ರೀಮಂತಿಕೆಗೆ ಅಕ್ಕನ ಕಾಣಿಕೆ ಅಪಾರವಾಗಿದೆ ಎಂದರು.
ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳ ಮುದ್ದುಮಾದಪ್ಪ, ಪರಂಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ಪಾರ್ವತಿ ಶಂಕರ್, ಕಾರ್ಯದರ್ಶಿ ಶೈಲ ಸಿದ್ಧರಾಮಪ್ಪ, ಪುಷ್ಪ ಸುರೇಶ, ವಿಜಯಲಕ್ಷಿ ್ಮ ಮೊದಲಾದವರು ಇದ್ದರು.
ಸಂಸತ್ ಭವನದಲ್ಲಿ ಆಯಾ ರಾಜ್ಯದ ವಿಶೇಷತೆ
ನವದೆಹಲಿ(ಮೇ.28): ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನ ಉದ್ಘಾಟಿಸಿದ್ದಾರೆ. ದೇಶದ ಹಲವು ರಾಜ್ಯಗಳಿಂದ ಗ್ಯಾನೈಟ್, ಮಾರ್ಬಲ್, ಕಲ್ಲು, ಬಿದಿರಿನ ಚಾವಣಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತರಿಸಿ ಭವನ ನಿರ್ಮಾಣ ಮಾಡಲಾಗಿದೆ. ಇಷ್ಟೇ ಅಲ್ಲ ಈ ಸಂಸತ್ ಭವನದಲ್ಲಿ ಆಯಾ ರಾಜ್ಯದ ವಿಶೇಷತೆಗಳನ್ನು ಕಾಣಬಹುದು. ಅದರಲ್ಲೂ ನೂತನ ಸಂಸತ್ ಭವನದಲ್ಲಿ ಕನ್ನಡ ಕಂಪು ಕಣ್ಮನಸೆಳೆಯುತ್ತಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ವಿಡಿಯೋ ಪೋಸ್ಟ್ ಮಾಡಿದ್ದು ಭಾರಿ ಮೆಚ್ಚುಗೆ ಪಡೆದಿದೆ.
ಸಂಸತ್ ಭವನದ ಗೋಡೆಯಲ್ಲಿ ಹಂಪಿಯ ಕಲ್ಲಿನ ರಥವನ್ನು ಕೆತ್ತನೆ ಮಾಡಲಾಗಿದೆ. ಈ ಕಲ್ಲಿನ ರಥದ ಮೇಲೆ ಭಾರತದ ಮಹಾನ್ ದಾರ್ಶನಿಕರ ಚಿತ್ರಗಳನ್ನು ಹಾಕಲಾಗಿದೆ. ಈ ಚಿತ್ರಗಳ ಪೈಕಿ ಜಗಜ್ಯೋತಿ ಬಸವೇಶ್ವರ ಚಿತ್ರವೂ ಇದೆ. ಇನ್ನು ಪಕ್ಕದಲ್ಲೇ ಗೋಡೆಯ ಮೇಲೆ ಬಸವಣ್ಣನ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ , ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಅನ್ನೋ ವಚನದ ಸಾಲುಗಳನ್ನು ಬರೆಯಲಾಗಿದೆ.
ಹೊಸ ಸಂಸತ್ ಭವನ 140 ಕೋಟಿ ಭಾರತೀಯರ ಕನಸಿನ ಪ್ರತಿಬಿಂಬ, ಬಸವಣ್ಣ ಉಲ್ಲೇಖಿಸಿ ಮೋದಿ ಭಾಷಣ!
ನೂತನ ಸಂಸತ್ ಭವನದಲ್ಲಿರುವ ಈ ಕನ್ನಡ ಕಂಪು ಇದೀಗ ಕನ್ನಡಿಗರ ಹೆಮ್ಮೆಗೆ ಕಾರಣವಾಗಿದೆ. ಈ ಕುರಿತು ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ, ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಸಂಸತ್ತಿನಲ್ಲಿ ಕನ್ನಡದ ಕಂಪು. ಬಸವಣ್ಣರ ವಚನ, ಮಧ್ವರ ಪ್ರೇರಣೆ, ಹಂಪಿಯ ರಥದ ವೈಭವ ಎಂದು ಟ್ವೀಟ್ ಮಾಡಿದ್ದಾರೆ