ಜಾನಪದ ಕಲೆಗಳ ಉಳಿವಿನತ್ತ ಯುವಕರು ಆಸಕ್ತಿ ವಹಿಸಿ

By Kannadaprabha News  |  First Published Jun 27, 2023, 6:21 AM IST

ಗ್ರಾಮೀಣ ಶೈಲಿಯ ಜೀವನ ಬದುಕು ಕಟ್ಟಿಕೊಡುವಲ್ಲಿ ಹೆಚ್ಚು ಪ್ರಭಾವ ಬೀರುತ್ತಿದ್ದು, ಆರೋಗ್ಯ ಹಾಗೂ ಮನೋಉಲ್ಲಾಸಕ್ಕಾಗಿ ಜಾನಪದ ಕಲೆಗಳ ಉಳಿವಿನತ್ತ ಯುವಕರು ಹೆಚ್ಚು ಆಸಕ್ತಿ ವಹಿಸುವಂತೆ ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ಜಾನಪದ ಕಲಾವಿದ ಕಾರನಾಗಪ್ಪ ಕರೆ ನೀಡಿದರು.


ಪಾವಗಡ : ಗ್ರಾಮೀಣ ಶೈಲಿಯ ಜೀವನ ಬದುಕು ಕಟ್ಟಿಕೊಡುವಲ್ಲಿ ಹೆಚ್ಚು ಪ್ರಭಾವ ಬೀರುತ್ತಿದ್ದು, ಆರೋಗ್ಯ ಹಾಗೂ ಮನೋಉಲ್ಲಾಸಕ್ಕಾಗಿ ಜಾನಪದ ಕಲೆಗಳ ಉಳಿವಿನತ್ತ ಯುವಕರು ಹೆಚ್ಚು ಆಸಕ್ತಿ ವಹಿಸುವಂತೆ ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ಜಾನಪದ ಕಲಾವಿದ ಕಾರನಾಗಪ್ಪ ಕರೆ ನೀಡಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಸಿದ್ದಾರ್ಥ ಚಾರಿಟಬಲ್‌ ಟ್ರಸ್ಟ್‌ ಪಾವಗಡ ಹಾಗೂ ಸಹಯೋಗದಲ್ಲಿ 75ನೇ ಅಮೃತಮಹೋತ್ಸವದ ಅಂಗವಾಗಿ ತಾಲೂಕಿನ ವಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಹಮ್ಮಿಕೊಂಡಿದ್ದ ಗಡಿನಾಡು ಜಾನಪದ ಉತ್ಸವ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

Latest Videos

undefined

ಸ್ಥಳೀಯ ಗ್ರಾಮ ಮತ್ತು ನಾಡು ನುಡಿ ಹಾಗೂ ಆಚಾರ, ವಿಚಾರ ಮುಖ್ಯವಾಗಿದ್ದು ಇವುಗಳನ್ನು ತಿಳಿಯಬೇಕಾದರೆ ಜಾನಪದ ಕಲೆಗಳಿಂದ ಮಾತ್ರ ಸಾಧ್ಯ. ಜತೆಗೆ ಜಾನಪದ ಕಲೆಗಳು ಮನುಷ್ಯನ ಆರೋಗ್ಯ ಮತ್ತು ಉಲ್ಲಾಸ ತುಂಬುವಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಹೀಗಾಗಿ ಜಾನಪದ ಕಲೆಗಳನ್ನು ಉಳಿಸಬೇಕು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡ್ಯೂಯುವ ಮಹತ್ವರ ಜವಾಬ್ದಾರಿ ನಮ್ಮ ನಿಮೆಲ್ಲರ ಮೇಲಿದೆ ಎಂದು ಸಲಹೆ ನೀಡಿದರು.

ಹಿರಿಯ ಜಾನಪದ ಸಾಹಿತಿ ಸಣ್ಣನಾಗಪ್ಪ ಮಾತನಾಡಿ, ಇಂದಿನ ಯುವಕರು ಮತ್ತು ವಿದ್ಯಾರ್ಥಿ ಟಿವಿ ಹಾಗೂ ಮೊಬೈಲ್‌ಗೆ ಹೆಚ್ಚು ಮಾರುಹೋಗಿದ್ದಾರೆ. ಇದು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲಿದ್ದು ಜೀವನ ಶೈಲಿ ಬದಲಾಗಬೇಕಿದೆ. ಗ್ರಾಮೀಣ ಕಲೆಗಳು ವಿನಾಶದತ್ತ ಸಾಗುತ್ತಿದ್ದು ಯಕ್ಷಗಾನ, ಪೌರಾಣಿಕ ಸಂಪ್ರದಾಯಬದ್ಧವಾದ ಹಾಡು ಮತ್ತು ಇತರೆ ಗ್ರಾಮೀಣ ಸೊಗಡು ಬಿಂಬಿಸುವ ಕಲೆಗಳ ಜೀವಂತಿಕೆ ಕಾಪಾಡಬೇಕು. ಇದರಿಂದ ಗ್ರಾಮಗಳಲ್ಲಿ ಉತ್ತಮ ಆರೋಗ್ಯ ಮತ್ತು ಸೌಹಾರ್ಧತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಕಲೆಗಳಿಂದ ಆಗುವ ಪ್ರಯೋಜನಗಳ ಕುರಿತು ವಿವರಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಅಂತರಗಂಗೆ ಶಂಕರಪ್ಪ ಮಾತನಾಡಿ, ಜಾನಪದ ಕಲೆಗಳ ಉಳಿವಿನತ್ತ ಸರ್ಕಾರ ಹಾಗೂ ಸಂಘಸಂಸ್ಥೆಗಳು ಹೆಚ್ಚು ಆಸಕ್ತಿವಹಿಸುವಂತೆ ಕರೆ ನೀಡಿದರು.

ರಾಜ್ಯ ಮಟ್ಟದ ಜಾನಪದ ಕಲಾವಿದ ಆರ್‌.ಎನ್‌.ಲಿಂಗಣ್ಣ ಮಾತನಾಡಿ, ಹಿಂದಿನ ಕಾಲದ ಜನತೆ ಕೋಲಾಟ ಭಜನೆ ಹಾಗೂ ಧ್ಯಾನ ಮತ್ತಿತರೆ ಕಲೆಗಳಲ್ಲಿ ಹೆಚ್ಚು ಭಾಗಿಯಾಗುತ್ತಿದ್ದ ಕಾರಣ ನೂರಾರು ವರ್ಷಗಳ ಬದುಕಿಳಿಯುತ್ತಿದ್ದರು. ಹೆಚ್ಚು ಶ್ರಮಜೀವಿಗಳಾಗಿ ದುಡಿಯುತ್ತಿದ್ದು ಕಲೆಗಳ ಮೋರೆಹೋಗಿದ್ದ ಹಿನ್ನಲೆಯಲ್ಲಿ ಎಲ್ಲಾ ಸಮಸ್ಯೆ ಮರೆಯುತ್ತಿದ್ದರೆಂದು ತಿಳಿಸಿದರು.

ಶಿಕ್ಷಕ ಈರಣ್ಣ ಕಲೆಗಳ ಮಹತ್ವ ಮತ್ತು ಅವುಗಳ ಪ್ರಯೋಜನಗಳ ಕುರಿತು ಮಾತನಾಡಿದರು. ಜಾನಪದ ಕಲಾವಿದ ಮಧುಗಿರಿ ದ್ಯಾವರಪ್ಪ ಮತ್ತು ಮನೋಜ್‌ ತಂಡದಿಂದ ಗಾರುಡಿಗೊಂಬೆ, ಸೋಮನ ಕುಣಿತ, ಭಜನೆ, ಕೋಲಾಟ ಗೀಗಿಪದ, ಭಜನೆ, ಯಕ್ಷಗಾನ, ಭಾವಗೀತೆ, ಡೊಳ್ಳುಕುಣಿತ, ವೀರಾಗಾಸೆ ಹಾಗೂ ಇತರೆ ಜಾನಪದ ಕಲೆಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು

ವಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹನುಮಂತರಾಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾರ್ಥ ಚಾರಿಟಬಲ್‌ ಟ್ರಸ್ಟ್‌ನ ಕಾಯದರ್ಶಿ ವಿ.ಎಸ್‌.ನಾಗೇಶ್‌ ಶಿಕ್ಷಕರಾದ ರಾಮಾಂಜಿನಪ್ಪ,ಕಲಾವಿದ ಶಿವಣ್ಣ ಹಾಗೂ ಊರಿನ ಪ್ರಮುಖರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

click me!