ಹೆಚ್ಚಿನ ಬಡ್ಡಿಗೆ ಬೇರೆಯವರ ಬಳಿ ಸಾಲ ತೆಗೆದುಕೊಳ್ಳದೆ ಸಹಕಾರ ಸಂಘದ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ತೆಗೆದುಕೊಂಡು ಕೃಷಿಕರು ಅಭಿವೃದ್ಧಿಯಾಗಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಾಕರ ತಿಳಿಸಿದರು.
ಗುಬ್ಬಿ : ಹೆಚ್ಚಿನ ಬಡ್ಡಿಗೆ ಬೇರೆಯವರ ಬಳಿ ಸಾಲ ತೆಗೆದುಕೊಳ್ಳದೆ ಸಹಕಾರ ಸಂಘದ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ತೆಗೆದುಕೊಂಡು ಕೃಷಿಕರು ಅಭಿವೃದ್ಧಿಯಾಗಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಾಕರ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಜಿ.ಹೊಸಹಳ್ಳಿ ಗ್ರಾಮದಲ್ಲಿ ಮಡೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಜಿ.ಹೊಸಹಳ್ಳಿ ಗ್ರಾಮದಲ್ಲಿ ಎಂಎಸ್‌ಸಿ ಗೋದಾಮು ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿನ ಸಂಘದಲ್ಲಿ ಕಡಿಮೆ ಸಾಲವನ್ನು ಇದುವರೆಗೂ ನೀಡಲಾಗಿದೆ. ಮುಂದಿನ ದಿನದಲ್ಲಿ ಜಿಲ್ಲಾ ಬ್ಯಾಂಕಿನಿಂದ ಹೆಚ್ಚಿನ ಸಾಲ ವಿತರಣೆ ಮಾಡಲಾಗುತ್ತದೆ. ನೀಡಿರುವ ಸಾಲವನ್ನು ಸರಿಯಾದ ರೀತಿಯಲ್ಲಿ ರೈತರು ಪಾವತಿಸಿದಾಗ ಖಂಡಿತವಾಗಿಯೂ ಸಹಕಾರ ಬ್ಯಾಂಕುಗಳು ಅಭಿವೃದ್ಧಿಯತ್ತ ಸಾಗುತ್ತವೆ ಎಂದು ತಿಳಿಸಿದರು.
ಸಹಕಾರ ಸಂಘದ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ, ಎಲ್ಲರ ಸಹಕಾರದಿಂದ ಸುಂದರವಾದ ಕಟ್ಟಡ ನಿರ್ಮಾಣವಾಗಿದ್ದು, ಮುಂದಿನ ದಿನದಲ್ಲಿ ಹೆಚ್ಚಿನ ರೀತಿಯಲ್ಲಿ ರೈತರ ಸಹಕಾರದಿಂದ ಸಹಕಾರ ಸಂಘದ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಆರ್ಥಿಕ ಮತ್ತು ಆಡಳಿತ ಸಲಹೆಗಾರ ಜಂಗಮಪ್ಪ ಮಾತನಾಡಿ, ಜಿಲ್ಲಾ ಬ್ಯಾಂಕಿಗೆ ರೈತರು ಹೆಚ್ಚಿನ ರೀತಿಯಲ್ಲಿ ಠೇವಣೆ ಇಡಬೇಕು. ಇದರಿಂದ ಸಹಕಾರ ಬ್ಯಾಂಕುಗಳಿಗೆ ಹೆಚ್ಚಿನ ಶಕ್ತಿ ಬರುತ್ತದೆ. ಈ ಸಹಕಾರ ಸಂಘಕ್ಕೆ ಇದುವರೆಗೂ ಕಡಿಮೆ ಸಾಲವನ್ನು ನೀಡಿದ್ದು , ಮುಂದಿನ ದಿನದಲ್ಲಿ ಚಿನ್ನದ ಸಾಲ ಕೃಷಿ ಸಾಲ ಇನ್ನಿತರ ಸಾಲಗಳನ್ನು ನೀಡಲಾಗುತ್ತದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟ ನಿಯಮಿತ ನಿರ್ದೇಶಕರಾದ ಜಿ.ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಅರ್ಥಿಕ ಮತ್ತು ಆಡಳಿತ ಸಲಹೆಗಾರ ಜಂಗಮಪ್ಪ, ಸುರೇಶ್ ಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.