ಬಸವಕಲ್ಯಾಣದಲ್ಲಿ ಸತ್ತರೆ ಹೂಳೊಕೆ ನನಗೆ ಸ್ವಂತ ಜಾಗ ಇಲ್ಲ. ಸಂಜು ಸುಗೂರೆ ನಾಚಿಕೆ ಆಗಬೇಕು ನಿನಗೆ, ನನ್ನ ಬಳಿ ಇದ್ದುಕೊಂಡು 50 ಕೋಟಿ ಆಸ್ತಿ ಮಾಡಿಕೊಂಡಿದ್ದಿ. ನಿನ್ನ ವಿರುದ್ಧ ಇಡಿ ಅಧಿಕಾರಿಗಳಿಗೆ ದೂರು ನೀಡ್ತೇನೆ. ನನ್ನ ಮೇಲೆ ಜೀವ ಬೆದರಿಕೆ ಆರೋಪ ಮಾಡಿರುವ ಸುಗೂರೆ ನನ್ನಿಂದ ಒಂದೆ ಒಂದು ಕಾಲ್ ಬಂದಿದ್ದು ತೋರಿಸಲಿ. ನಾನು ಸಣ್ಣ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿನಿ. ನನ್ನ ತೇಜೊವಧೆ ಮಾಡುಗ ಕೆಲಸ ನೀನು ಮಾಡಿದ್ದಿ ಎಂದು ಸಂಜೀವ್ ಕುಮಾರ್ ಸುಗೂರೆ ವಿರುದ್ಧ ಕಿಡಿ ಕಾರಿದ ಶಾಸಕ ಶರಣು ಸಲಗರ್
ಬೀದರ್(ಅ.16): ಸಂಜೀವ್ ಕುಮಾರ್ ಸುಗೂರೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮಾನಹರಣ ಮಾಡುವ ಹುನ್ನಾರ ಮಾಡಿದ್ದಾರೆ. ನನ್ನ ಬಳಿ ಇದ್ದಂತಹ 28 ತಿಂಗಳ ಅವಧಿಯಲ್ಲಿ 50 ಕೋಟಿ ಆಸ್ತಿ ಮಾಡಿದ್ದಾರೆ. ಬೆಂಗಳೂರಿನ ಏರ್ಪೋರ್ಟ್ ರೋಡ್ ನಲ್ಲಿ 1 ಕೋಟಿ ಕೊಟ್ಟು ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. ಬಸವಕಲ್ಯಾಣ ಮೇನ್ ರೋಡ್ ನಲ್ಲಿ 50 ರಿಂದ 60 ಲಕ್ಷ ಬೆಲೆ ಬಾಳುವ ಜಾಗ, ಸಲಗರ ಗ್ರಾಮ, ಅಟ್ಟೂರು ಗ್ರಾಮ ಸೇರಿ ಹತ್ತು ಹಲವು ಕಡೆ ಪ್ರಾಪರ್ಟಿ, ಚಂದ್ರಕಾಂತ ಬಿರಾದಾರ ಎಂಬುವರ ಮೇನ್ ರಸ್ತೆಯಲ್ಲಿರುವ 4 ಎಕರೆ ಹೊಲ ಖರೀದಿ ಮಾಡಿದ್ದಾರೆ. 20 ಕೋಟಿ ರೂ. ಪ್ರಾಪರ್ಟಿ ಬಡ ರೈತನಿಂದ ಹೆದರಿಸಿ ತೆಗೆದುಕೊಂಡಿದ್ದಾರೆ. 50 ವರ್ಷದಿಂದ ಚಂದ್ರಕಾಂತ ಬಿರಾದಾರ ಹೆಸರಲ್ಲಿದ್ದ ಪ್ರಾಪರ್ಟಿ ಬೆದರಿಸಿ ತೆಗೆದುಕೊಂಡಿದ್ದಾರೆ. ಬಡ್ಡಿ ವ್ಯವಹಾರ ಮಾಡುತ್ತಾ ಅಧಿಕಾರಿಗಳು, ಗುತ್ತಿಗೆದಾರರ ಬಳಿ ಕೋಟಿಗಟ್ಟಲೇ ವಸೂಲಿ ಮಾಡಿದ್ದಾರೆ ಎಂದು ಸಂಜೀವ್ ಕುಮಾರ್ ಸುಗೂರೆ ವಿರುದ್ಧ ಶಾಸಕ ಶರಣು ಸಲಗರ್ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಸಲಗರ ಕುರಿತು ಅವಹೇಳನಕಾರಿ ಪತ್ರ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಶರಣು ಸಲಗರ ಅವರು, ನಾಪತ್ತೆಯಾಗಿದ್ದ ಉದ್ಯಮಿ ಸಂಜೀವ್ ಕುಮಾರ್ ಸುಗೂರೆ ವಿರುದ್ಧ ಕಿಡಿ ಕಾರಿದ್ದಾರೆ.
undefined
ನೀತಿಗೆಟ್ಟವರು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ: ಶರಣು ಸಲಗರ್
ಶಾಸಕ ಸಲಗರ ವಿರುದ್ಧ ಗಂಭೀರ ಆರೋಪ ಮಾಡಿ ಪತ್ರ ಬರೆದು ಸಂಜುಕುಮಾರ್ ಸುಗೂರೆ ನಾಪತ್ತೆಯಾಗಿದ್ದಾನೆ. ನಾನು ಶರಣು ಸಲಗರ ಅವರ ಬಲಗೈಬಂಟ ಎಂದು ಹೇಳಿಕೊಂಡು ಹಣ ವಸೂಲಿಯಾಗಿದೆ ಎಂದು ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಮನೆ ಹಾಗೂ ಒಂದು ಪ್ಲಾಟ್ ಹೊರತುಪಡಿಸಿ ಬೇರೆ ಆಸ್ತಿ ಇದ್ರೆ ಬಹಿರಂಗಗೊಳಿಸಲಿ. ಶರಣು ಸಲಗರ್ ಹತ್ತಿರ 10 ಸಾವಿರ ಆಸ್ತಿ ಇದ್ದರೆ ಬಹಿರಂಗಗೊಳಿಸಲಿ. ಇದೆಲ್ಲದರ ಹಿಂದೆ ಯಾರ್ಯಾರು ಕುತಂತ್ರಿಗಳಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಮುಂದೆ ಅವರುಗಳ ಹೆಸರು ಬಹಿರಂಗಗೊಳಿಸುತ್ತೇನೆ. ಬಸವಕಲ್ಯಾಣದಲ್ಲಿ ಸತ್ತರೆ ಹೂಳೊಕೆ ನನಗೆ ಸ್ವಂತ ಜಾಗ ಇಲ್ಲ. ಸಂಜು ಸುಗೂರೆ ನಾಚಿಕೆ ಆಗಬೇಕು ನಿನಗೆ, ನನ್ನ ಬಳಿ ಇದ್ದುಕೊಂಡು 50 ಕೋಟಿ ಆಸ್ತಿ ಮಾಡಿಕೊಂಡಿದ್ದಿ. ನಿನ್ನ ವಿರುದ್ಧ ಇಡಿ ಅಧಿಕಾರಿಗಳಿಗೆ ದೂರು ನೀಡ್ತೇನೆ. ನನ್ನ ಮೇಲೆ ಜೀವ ಬೆದರಿಕೆ ಆರೋಪ ಮಾಡಿರುವ ಸುಗೂರೆ ನನ್ನಿಂದ ಒಂದೆ ಒಂದು ಕಾಲ್ ಬಂದಿದ್ದು ತೋರಿಸಲಿ. ನಾನು ಸಣ್ಣ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿನಿ. ನನ್ನ ತೇಜೊವಧೆ ಮಾಡುಗ ಕೆಲಸ ನೀನು ಮಾಡಿದ್ದಿ ಎಂದು ಕಿಡಿ ಕಾರಿದ್ದಾರೆ.
ಸಂಜು ಸುಗೂರೆ ಡ್ರಾಮಾ ಮಾಡಿದ್ದಾನೆ, ಅವನಿಗೆ ತಕ್ಕ ಶಿಕ್ಷೆ ಆಗಬೇಕು. ಎಸ್‌ಪಿ, ಇಡಿ ಅಧಿಕಾರಿಗಳಿಗೆ ಅವನ ವಿರುದ್ಧ ದೂರು ನೀಡ್ತೇನೆ. ಅವನನ್ನ ನಾಪತ್ತೆ ಆದ ದಿನ ಯಾರು ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದು ಯಾರೂ..?. ಅದಲ್ಲಾ ತನಿಖೆ ಆಗಿ, ಆತನಿಗೆ ಶಿಕ್ಷೆ ಆಗಬೇಕು. ಕುತಂತ್ರ ಮಾಡಿ ನನ್ನ ಹೆಸರು ಹಾಳು ಮಾಡಬೇಕು ಅಂತ ಈ ರೀತಿ ಮಾಡಿದ್ದಾರೆ. ಮುಂದೆ ಎಲ್ಲಾ ಕುತಂತ್ರಿಗಳ ಬಣ್ಣ ಬಯಲು ಮಾಡ್ತೇನೆ ಎಂದು ಹೇಳಿದ್ದಾರೆ.
ಸಂಜು ಸೂಗುರೆಗೆ ಹೈದರಾಬಾದ್‌ನಲ್ಲಿ ಪ್ಲಾಟ್ ಇವೆ, ಬಸವಕಲ್ಯಾಣದಲ್ಲಿ 6 ಮನೆ ಇವೆ. ಅವರ ಬೀಗರ ಹೆಸರಲ್ಲೂ ಅಕ್ರಮ ಆಸ್ತಿ ಮಾಡಿದ್ದಾನೆ. ಮುಂದೆ ಅದನ್ನೆಲ್ಲಾ ದಾಖಲೆ ಸಮೇತ ಬಹಿರಂಗ ಮಾಡ್ತೇನೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ, ಮಾನಹರಣ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಶಾಸಕ ಶರಣು ಸಲಗರ್ ವಾಗ್ದಾಳಿ ನಡೆಸಿದ್ದಾರೆ.