ಲಾಕ್‌ಡೌನ್‌ ಎಫೆಕ್ಟ್‌: ಬಾರ್‌ಗೆ ಕನ್ನ, 2 ಲಕ್ಷ ಮೌಲ್ಯದ ಮದ್ಯ ಕದ್ದ ಕಳ್ಳರು

By Kannadaprabha NewsFirst Published Apr 16, 2020, 9:28 AM IST
Highlights
ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಕನ್ನ ಹಾಕಿದ ಮದ್ಯ ಪ್ರಿಯರು| ಬಳ್ಳಾರಿ ನಗರದ ಕುಬೇರ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ನಡೆದ ಕಳ್ಳತನ| ಮದ್ಯ ಕದ್ದು ಪರಾರಿಯಾದ ಕುಡುಕರು|
ಬಳ್ಳಾರಿ(ಏ.16): ನಗರದ ಕುಬೇರ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಬೀಗ ಮುರಿದ ಕಳ್ಳರು ಸುಮಾರು ಎರಡು ಲಕ್ಷ ಮೌಲ್ಯದ ವಿವಿಧ ಮದ್ಯದ ಬಾಟಲ್‌ಗಳನ್ನು ಕದ್ದಿದ್ದಾರೆ.

ಇಲ್ಲಿನ ತಾಳೂರು ರಸ್ತೆಯಲ್ಲಿರುವ ಕುಬೇರ ಬಾರ್‌ಗೆ ಮಂಗಳವಾರ ತಡ ರಾತ್ರಿ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಒಟಿ, ಹೈವರ್ಡ್‌ ಸೇರಿದಂತೆ ಕೈಗೆ ಸಿಕ್ಕ ಮದ್ಯಗಳನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾರೆ. ಸಿಸಿ ಕ್ಯಾಮೆ​ರಾ​ದಲ್ಲಿ ಕಳ್ಳತನ ದೃಶ್ಯ ಸೆರೆಯಾಗುತ್ತದೆ ಎಂದು ಭಾವಿಸಿ ಮೊದಲು ಸಿಸಿ ಕ್ಯಾಮೆರಾ ನಿಷ್ಕ್ರೀ​ಯ ಮಾಡಿ ಈ ಕೃತ್ಯ ಎಸಗಿದ್ದಾರೆ. ನಗರದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಡು ರಸ್ತೆಯಲ್ಲೇ ಅಬಕಾರಿ ಅಧಿಕಾರಿಗಳ ಮಾರಾಮಾರಿ

ಲಾಕ್‌ಡೌನ್‌ ಬಳಿಕ ಜಿಲ್ಲೆಯಲ್ಲಿ ಮದ್ಯ ಕಳ್ಳತನ ಪ್ರಕರಣಗಳು ಮುಂದುವರಿದಿವೆ. ಸಿರುಗುಪ್ಪ, ಕೂಡ್ಲಿಗಿ ಸೇರಿದಂತೆ ವಿವಿಧೆಡೆ ಮದ್ಯ ಕಳ್ಳತನ ಪ್ರಕರಣಗಳು ನಡೆದಿವೆ. ಸಿರುಗುಪ್ಪದಲ್ಲಿ ಅಬಕಾರಿ ಕಚೇರಿಯ ಬೀಗ ಮುರಿದು ಪಾನಪ್ರಿಯರು ವಿವಿಧ ಮದ್ಯದ ಬಾಟಲ್‌ಗಳನ್ನು ಕದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
 
click me!