58 ವಿದ್ಯಾರ್ಥಿಗಳಿಗೆ 5 ಲಕ್ಷ ರು. ಸ್ಕಾಲರ್‌ಶಿಪ್ ವಿತರಣೆ; ಮಕ್ಕಳ ಕನಸಿಗೆ ಸಿಕ್ತು ಬಲ

Published : Jul 27, 2026, 08:36 PM IST
Bantwal

ಸಾರಾಂಶ

ರೋಟರಿ ಕ್ಲಬ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮತ್ತು ಭದ್ರಾ ಗ್ಯಾಸ್ ಏಜೆನ್ಸಿ ಸಹಯೋಗದಲ್ಲಿ 58 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ರೋಟರಿ ಕ್ಲಬ್‌ನ 58ನೇ ಹಾಗೂ ಭದ್ರಾ ಗ್ಯಾಸ್ ಏಜೆನ್ಸಿಯ 40ನೇ ವರ್ಷದ ಅಂಗವಾಗಿ ಒಟ್ಟು 5 ಲಕ್ಷ ರೂಪಾಯಿ ಮೊತ್ತದ ಸ್ಕಾಲರ್‌ಶಿಪ್ ನೀಡಲಾಯಿತು.

ದಕ್ಷಿಣ ಕನ್ನಡ: ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಭದ್ರಾ ಗ್ಯಾಸ್ ಏಜೆನ್ಸಿ ಬಂಟ್ವಾಳ ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಆಯ್ದ 58 ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣೆ ಕಾರ್ಯಕ್ರಮ ಭಾನುವಾರ ರೋಟರಿ ಸಭಾಂಗಣದಲ್ಲಿ ನಡೆಯಿತು.

ರೋಟರಿ ಕ್ಲಬ್ ಬಂಟ್ವಾಳದ 58ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಹಾಗೂ ಭದ್ರಾ ಗ್ಯಾಸ್ ಏಜೆನ್ಸಿ ಮಾಲೀಕ ಮಂಜುನಾಥ ಆಚಾರ್ಯ ಸಹಯೋಗ ನೀಡಿದರು. ಈ ಬಗ್ಗೆ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಮಾಹಿತಿ ನೀಡಿದರು.

ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ವಿದ್ಯಾರ್ಥಿಗಳು ಹಿರಿಯರು, ಶಿಕ್ಷಕರು ಹಾಗೂ ಸೈನಿಕರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಭವಿಷ್ಯದಲ್ಲಿ ತಾವು ಪಡೆದ ಸಹಾಯಕ್ಕಿಂತ ಹತ್ತು ಪಟ್ಟು ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬಂದು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಜೀವನದ ಪ್ರತಿ ಕ್ಷಣವನ್ನು ಕಲಿಕೆಗೆ ಮೀಸಲಿಟ್ಟು ಗುರಿ ಸಾಧನೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಮಕ್ಕಳ ಅಡ್ಮೀಷನ್‌ ಕ್ಯಾನ್ಸಲ್‌ ಮಾಡಿದ ತಾಯಿಗೆ ರೀಫಂಡ್‌ ನೀಡದ ಸ್ಕೂಲ್‌, ಭಾರೀ ದಂಡ ವಿಧಿಸಿದ ಕೋರ್ಟ್‌

5 ಲಕ್ಷ ರು. ಮೊತ್ತದ ಸ್ಕಾಲರ್‌ಶಿಪ್ ವಿತರಣೆ

ಭದ್ರಾ ಗ್ಯಾಸ್ ಏಜೆನ್ಸಿ ಮಾಲೀಕ ಹಾಗೂ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ, ಭದ್ರಾ ಗ್ಯಾಸ್ ಏಜೆನ್ಸಿಯ 40ನೇ ವರ್ಷದ ಅಂಗವಾಗಿ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಇಂಟರ್‍ಯಾಕ್ಟ್ ಶಾಲೆಗಳ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟು 5 ಲಕ್ಷ ರು. ಮೊತ್ತದ ಸ್ಕಾಲರ್‌ಶಿಪ್ ವಿತರಿಸಲಾಗಿದೆ ಎಂದು ಹೇಳಿದರು.

ಮಧ್ವ ಆಚಾರ್ಯ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಕೃಷ್ಣ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಭಾಗ್ಯಶ್ರೀ ಭಂಡಾರ್ಕರ್, ರೋಟರಿ ಕ್ಲಬ್ ಬಂಟ್ವಾಳ ಕಾರ್ಯದರ್ಶಿ ರವಿರಾಜ ಶೆಟ್ಟಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಐತಪ್ಪ ಪೂಜಾರಿ ವಂದಿಸಿದರು. ಸದಸ್ಯ ಅಹಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: ಪರೀಕ್ಷಾ ಸುಧಾರಣೆಗೆ ಮೋದಿ ರಚಿಸಿದ ನೀಲೆಕಿಣಿ ನೇತೃತ್ವದ ಟಾಸ್ಕ್ ಫೋರ್ಸ್‌ನಲ್ಲಿ ಯಾರಿದ್ದಾರೆ?

PREV
Read more Articles on
click me!

Recommended Stories

Bengaluru: ಹುಸ್ಕೂರು ಗೇಟ್‌ ಮೆಟ್ರೋ ಸ್ಟೇಷನ್‌ನಲ್ಲಿ ಹಳಿಗೆ ಜಿಗಿದು ಪತ್ರಕರ್ತ ರಾಜೇಶ್‌ ಹೀರೇಮಠ್‌ ಸಾವು
ಬುಕ್​ ಮಾಡಿದ್ದೇ ಒಂದು ಆಟೊ, ಬಂದಿದ್ದೇ ಇನ್ನೊಂದು: ನಂಬರ್​ ಚೇಂಜ್​ ಇದ್ರೆ ಹತ್ತಲೇಬೇಡಿ- ಕಮಿಷನರ್‌ ಖಡಕ್‌ ಎಚ್ಚರಿಕೆ