ಪಬ್ಲಿಕ್‌ ವಾಲ್‌ನಲ್ಲಿ ಅಶ್ಲೀಲ ಚಿತ್ರ, ಗೋಡೆ ವಿರೂಪಗೊಳಿಸುವವರ ವಿರುದ್ಧ ತಿರುಗಿ ಬಿದ್ದ ಪೊಲೀಸರು

By Suvarna News  |  First Published Dec 16, 2019, 10:58 AM IST

ಪಬ್ಲಿಕ್ ವಾಲ್‌ಗಳನ್ನೇ ಕ್ಯಾನ್‌ವಾಸ್‌ ಮಾಡಿಕೊಂಡವರ ವಿರುದ್ಧ ಬೆಂಗಳೂರು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾಮಾಜಿಕ ಸಂದೇಶ, ಸಾಮಾಜಿಕ ಕಳಕಳಿ ಹೊರತುಪಡಿಸಿ ಬೇಕಾಬಿಟ್ಟಿ ವಿಚಿತ್ರ ಚಿತ್ರಗಳನ್ನು ಬಿಡಿಸುವವರ ವಿರುದ್ಧ ಪೊಲೀಸರು ತಿರುಗಿ ಬಿದ್ದಿದ್ದಾರೆ.


ಬೆಂಗಳೂರು(ಡಿ.16): ಪಬ್ಲಿಕ್ ವಾಲ್‌ಗಳನ್ನೇ ಕ್ಯಾನ್‌ವಾಸ್‌ ಮಾಡಿಕೊಂಡವರ ವಿರುದ್ಧ ಬೆಂಗಳೂರು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾಮಾಜಿಕ ಸಂದೇಶ, ಸಾಮಾಜಿಕ ಕಳಕಳಿ ಹೊರತುಪಡಿಸಿ ಬೇಕಾಬಿಟ್ಟಿ ವಿಚಿತ್ರ ಚಿತ್ರಗಳನ್ನು ಬಿಡಿಸುವವರ ವಿರುದ್ಧ ಪೊಲೀಸರು ತಿರುಗಿ ಬಿದ್ದಿದ್ದಾರೆ.

ಸಾರ್ವಜನಿಕ ಸ್ಥಳಗಳ ಗೋಡೆಗಳ ವಿರೂಪಗೊಳಿಸುವವರ ವಿರುದ್ಧ ಪೊಲೀಸರು ತಿರುಗಿಬಿದ್ದಿದ್ದು, ಗೋಡೆಯ ಮೇಲೆ ಅಶ್ಲೀಲ ಚಿತ್ರ ಹಾಗೂ ಅನಗತ್ಯ ಚಿತ್ರಗಳ ಬಿಡಿಸುವವರ ವಿರುದ್ಧ ಕ್ರಮ ವಹಿಸಲಾಗಿದೆ.

Tap to resize

Latest Videos

ಹಿಂದೂ ಸಂಸ್ಕೃತಿಯ ಪ್ರಕಾರ ಮನೆಯ ಗೃಹ ಪ್ರವೇಶ ಮಾಡಿದ ಮುಸ್ಲಿಂ ಕುಟುಂಬ

ನಗರದ ಹೃದಯ ಭಾಗದ ಕೆಲ ಸ್ಥಳಗಳ ಗೋಡೆಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಅನಗತ್ಯ ಚಿತ್ರಗಳು ಹಾಗೂ ಪದಗಳ ಬರೆದು ವಿಕೃತಿ ಮಾಡಿದ್ದು, ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ, ಮಲ್ಯರಸ್ತೆ ಸೇರಿದಂತೆ ಹಲವು ಕಡೆ ಕೃತ್ಯ ನಡೆದಿದೆ. knock, boss, guess who ಅನ್ನೊ ಪದಗಳನ್ನು ಗೋಡೆಯಲ್ಲಿ ಬರೆದಿದ್ದಾರೆ. ಇನ್ನು ಕೆಲವು ಕಡೆ ವಿಚಿತ್ರ ಚಿತ್ರಗಳನ್ನು ಬಿಡಿಸಿ ವಿಕೃತಿ ತೋರಿಸಲಾಗಿದೆ. ತಡರಾತ್ರಿ ಎಂಟ್ರಿ ಕೊಡುವ ದುಷ್ಕರ್ಮಿಗಳಿಂದ ಕೃತ್ಯ ನಡೆಯುತ್ತಿದ್ದು, ಮುಚ್ಚಿದ ಅಂಗಡಿಗಳ ಮೇಲೆಯೂ ಅರ್ಥವಿಲ್ಲದ ಚಿತ್ರ ಹಾಗೂ ಪದ ಬರೆದು ಪರಾರಿಯಾಗುತ್ತಿದ್ದಾರೆ.

ಮಂಡ್ಯ: ಕ್ರಿಶ್ಚಿಯಾನಿಟಿಗೆ ಮತಾಂತರ ಆರೋಪ, ಯುವಕರಿಗೆ ಥಳಿತ

ತಮ್ಮ ಚಿತ್ರಗಳ ಮೂಲಕ ದುಷ್ಕರ್ಮಿಗಳು ಅಂಗಡಿಗಳ ಮಾಲೀಕರು ಹಾಗೂ ಸಾರ್ವಜನಿಕರಿಗೆ ತಲೆಬಿಸಿ ಉಂಟು ಮಾಡಿದ್ದಾರೆ. ಬಿಬಿಎಂಪಿ ಹಾಗೂ ಕೆಲ ಸಂಘಸಂಸ್ಥೆಗಳ ಚಿತ್ರ ಸಮಾಜಕ್ಕೆ ಒಳ್ಳೆಯದು. ಆದರೆ ಕಾನೂನು ನಿಯಮ ಉಲ್ಲಂಘಿಸಿ ಕೆಲ ದುಷ್ಕರ್ಮಿಗಳು ಅರ್ಥವಿಲ್ಲದ ಬರಹಗಳ ಬರೆದು ಗೋಡೆಗಳನ್ನು ಹಾಳು ಮಾಡುತಿದ್ದಾರೆ. ಈ ಹಿನ್ನಲೆ ಸಾರ್ವಜನಿಕ ಆಸ್ತಿಯ ಹಾನಿ, ನಷ್ಟವನ್ನು ತಡೆಯುವ ಕಾಯ್ದೆ (prevention of destruction and loss of property act-1981) ಅಡಿ ಪ್ರಕರಣ ದಾಖಲಿಸಲಾಗಿದೆ. ಈ ರೀತಿಯ ಕೃತ್ಯ ಎಸಗುವವರ ವಿರುದ್ಧ ಪಿಡಿಎಲ್ಪಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲು ಮುಂದಾದ ಪೊಲೀಸರು

click me!