ಬಿಜೆಪಿ ಮುಖಂಡನ ಮೇಲೆ ಪ್ರೀತಿ ವಂಚನೆ ಆರೋಪ, ಪ್ರಿಯತಮನ ಮನೆಮೇಲೆ ಹತ್ತಿ ಹೈಡ್ರಾಮಾ ಮಾಡಿದ ಯುವತಿ

By Suvarna News  |  First Published Nov 20, 2023, 5:02 PM IST

ಬಿಜೆಪಿ ಮುಖಂಡ ನನ್ನನ್ನು ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಈಗ ತನ್ನ ಸಂಪರ್ಕಕ್ಕೂ ಸಿಗದೇ ವಂಚಿಸುತ್ತಿದ್ದಾನೆಂದು ಯುವತಿ ಆತನ ಮನೆ ಮೇಲೆ ಹತ್ತಿ ರಂಪಾಟ ಮಾಡಿದ್ದಾಳೆ.


ಬೆಂಗಳೂರು (ನ.19): ಬಿಜೆಪಿ ಮುಖಂಡನೊಬ್ಬ ನನ್ನನ್ನು ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಈಗ ತನ್ನ ಸಂಪರ್ಕಕ್ಕೂ ಸಿಗದೇ ವಂಚನೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಆತನ ಮನೆ ಮುಂದೆ ಹೋಗಿ ಯುವತಿ ಗಲಾಟೆ ಮಾಡಿದ ಪ್ರಸಂಗ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನಡೆದಿದೆ.

ಪ್ರೀತಿ ಮಾಡಿದ ನಂತರ ಪ್ರಿಯತಮೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಸೌಹಾರ್ದತೆಯಿಂದಲೇ ತಮ್ಮ ಪ್ರೀತಿ ಕಡಿತಗೊಳಿಸಿ ತಮ್ಮ ಪಾಡಿಗೆ ತಾವಿರಬೇಕು. ಒಂದು ವೇಳೆ ವಂಚನೆ ಮಾಡಲು ಮುಂದಾದಲ್ಲಿ ಯಾವ್ಯಾವ ರಾದ್ದಾಂತಗಳು ಸಂಭವಿಸುತ್ತವೆ ಎನ್ನುವುದು ಊಹಿಸಲೂ ಸಾಧ್ಯವಿಲ್ಲ. ಅದೇ ರೀತಿ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿಯೂ ಕೂಡ ತನ್ನನ್ನು ಹಲವು ವರ್ಷಗಳಿಂದ ಪ್ರೀತಿಸಿ, ಸಲುಗೆಯಿಂದ ಇದ್ದು ಈಗ ಏಕಾಏಕಿ ಸಂಪರ್ಕಕ್ಕೆ ಸಿಗದೇ ವಂಚನೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ತನ್ನ ಪ್ರಿಯತಮನ ಮನೆ ಮುಂದೆಯೇ ರಾದ್ದಾಂತ ಮಾಡಿದ್ದಾಳೆ.

Tap to resize

Latest Videos

undefined

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕರೆಂಟ್‌ ತಗುಲಿ ಮೃತಪಟ್ಟ ತಾಯಿ-ಮಗುವಿನ ಅಂತ್ಯಕ್ರಿಯೆಗೂ ಮೊದಲೇ ಆರೋಪಿಗಳ ಬಿಡುಗಡೆ!

ಹೆಗ್ಗನಹಳ್ಳಿಯ ಸ್ಥಳೀಯ ಬಿಜೆಪಿ ಮುಖಂಡ ಸುಂದರೇಶ್‌ನನ್ನು ಪ್ರೀತಿಸುತ್ತಿದ್ದ ಯುವತಿ, ತನ್ನ ಪ್ರಿಯತಮನ ಮನೆ ಮುಂದೆ ಹೈಡ್ರಾಮಾ ಮಾಡಿದ್ದಾಳೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ಬಿಜೆಪಿ ಮುಖಂಡ ಸುಂದರೇಶ್‌ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ರಾಜಗೋಪಾಲ ನಗರ ಠಾಣೆಯ ಪೊಲೀಸರು ಯುವತಿಯ ಮನವೊಲಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಸುಂದರೇಶ್‌ ತನ್ನನ್ನು ಪ್ರೀತಿಸಿ ಮದುವೆಯಾವುದಾಗಿ ನಂಬಿಸಿ ವಂಚಿನೆ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಜೊತೆಗೆ, ಸುಂದರೇಶ್‌ನನ್ನು ಕರೆಸುವ ತನಕ ಮನೆ ಮೇಲಿಂದ ಇಳಿಯೋದಿಲ್ಲ ಅಂತಾ ಹೈಡ್ರಾಮ ಮಾಡಿದ್ದಳು. ಕೊನೆಗೆ, ಪೊಲೀಸರು ಯುವತಿಯ ಮನವೊಲಿಸಿ ಕರೆದೊಯ್ದಿದ್ದಾರೆ. 

ತಾಯಿ ಮಗುವನ್ನು ಕೊಂದು ಅಂತ್ಯಕ್ರಿಯೆಗೂ ಮೊದಲೇ ಜೈಲಿಂದ ಹೊರಬಂದ ಅರೋಪಿಗಳು: ಬೆಂಗಳೂರು (ನ.20): ಬೆಂಗಳೂರಿನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ವೈಟ್‌ ಫೀಲ್ಡ್‌ ಸಮೀಪದ ಓಫಾರ್ಮ್‌ ಸರ್ಕಲ್‌ ಬಳಿ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದರೂ ಬೆಸ್ಕಾಂ ಸಿಬ್ಬಂದಿ ದುರಸ್ತಿಗೊಳಿಸದೇ ನಿರ್ಲಕ್ಷ್ಯ ಮಾಡಿದ್ದರಿಂದ ತಾಯಿ ಹಾಗೂ 9 ತಿಂಗಳ ಮಗು ವಿದ್ಯುತ್‌ ತಂತಿ ತುಳಿದು ದಾರುಣ ಸಾವನ್ನಪ್ಪಿದ್ದರು. ಈ ದುರ್ಘಟನೆಗೆ 5 ಜನ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಪೊಲೀಸರು ಬಂಧಿಸಿದ್ದರು. ಮೃತ ತಾಯಿ- ಮಗುವಿನ ಅಂತ್ಯಕ್ರಿಯೆ ನೆರವೇರಿದೆಯೋ ಇಲ್ಲವೋ ಗೊತ್ತಿಲ್ಲ, ಆದ್ರೆ ಕೇವಲ 24 ಗಂಟೆಗಳಲ್ಲಿ ಬಂಧಿತ ಅಧಿಕಾರಿಗಳು ಜಾಮೀನು ಮೇಲೆ ಹೊರಗೆ ಬಂದಿದ್ದಾರೆ.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಣಂತಿ ತಾಯಿ, 9 ತಿಂಗಳ ಹಸುಗೂಸು ಬಲಿ: ಹೆಂಡ್ತಿ-ಮಗು ಜೀವ ಹೋಗ್ತಿದ್ರೂ ರಕ್ಷಿಸಲಾಗಲಿಲ್ಲ

ಇಡೀ ಬೆಂಗಳೂರು ಭಾನುವಾರ ಬೆಳ್ಳಂಬೆಳಗ್ಗೆ ಮಮ್ಮಲ ಮರುಗುವಂತಹ ಘಟನೆ ವೈಟ್‌ಫೀಲ್ಡ್‌ನಲ್ಲಿ ನಡೆದಿತ್ತು. ತಾವಾಯ್ತು, ತಮ್ಮ ಜೀವನವಾಯ್ತು ಎಂದು ತಮ್ಮ ಪಾಡಿಗಿದ್ದ ಕುಟುಂಬ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬಲಿಯಾಗಿ ಹೋಗಿತ್ತು. ತಮಿಳುನಾಡಿನಲ್ಲಿರುವ ತನ್ನ ತಾಯಿ ಮನೆಗೆ ಗಂಡ-ಮಗುವಿನೊಂದಿಗೆ ಹೋಗಿದ್ದಳು. ಶನಿವಾರ ಬಸ್‌ ಹತ್ತಿಕೊಂಡು ಬೆಂಗಳೂರಿನ ವೈಟ್‌ಫೀಲ್ಡ್ಗೆ ಬಂದು ಭಾನುವಾರ ಬೆಳ್ಳಂಬೆಳಗ್ಗೆ ಇಳಿದಿದ್ದಾಳೆ. ಗಂಡ, ಹೆಂಡತಿ ಹಾಗೂ ಆಕೆಯ ಕಂಕಳಲ್ಲಿ 9 ತಿಂಗಳ ಮಗುವೊಂದಿತ್ತು. ಮುಂಜಾವಿನಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತುಳಿದರು. ಕೂಡಲೇ ಕರೆಂಟ್‌ ಶಾಕ್‌ನಿಂದ ಕುಸಿದು ಪುನಃ ತಂತಿ ಮೇಲೆ ಬಿದ್ದ ತಾಯಿ ಹಾಗೂ ಮಗುವಿನ ಜೀವವನ್ನು ವಿದ್ಯುತ್‌ ತೆಗೆದಿದ್ದಲ್ಲದೇ ಅವರನ್ನು ಸುಟ್ಟು ಕರಕಲಾಗುವಂತೆ ಮಾಡಿತ್ತು.

click me!