ಚುನಾವಣೆಗೆ ಭದ್ರತೆ ಒದಗಿಸುವ ಪ್ರಮುಖ ಕರ್ತವ್ಯದ ನಡುವೆಯೂ ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಚನ್ನಣ್ಣನವರ್ ಅವರು ಕೆಲ ಕ್ಷಣ ಪುಟ್ಟ ಮಗುವಿನೊಂದಿಗೆ ಕಾಲ ಕಳೆದರು.
ಹೊಸಕೋಟೆ(ಡಿ.05): ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಚನ್ನಣ್ಣನವರ್ ಅವರು ಚುನಾವಣಾ ಕರ್ತವ್ಯದ ನಡುವೆಯೂ ಪುಟ್ಟ ಮಗುವನ್ನು ಎತ್ತಿ ಆಡಿಸಿದ ಘಟನೆ ಅತಿ ಸೂಕ್ಷ್ಮ ಮತಗಟ್ಟೆ ಬೆಂಡಿಗಾನ ಹಳ್ಳಿಯಲ್ಲಿ ನಡೆದಿದೆ.
ಚುನಾವಣೆ ಬಿಗಿ ಭದ್ರತೆಯ ಕರ್ತವ್ಯದ ನಡುವೆ ಕೆಲ ನಿಮಿಷ ಮಗುವಿನೊಂದಿಗೆ ಕಾಲ ಕಳೆದ ರವಿಚನ್ನಣ್ಣನವರ್ ಮಗುವನ್ನು ಮುದ್ದಿಸಿದ್ದಾರೆ. ಹೊಸಕೋಟೆ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಅತಿ ಸೂಕ್ಷ್ಮ ಮತಗಟ್ಟೆ ಬೆಂಡಿಗಾನ ಹಳ್ಳಿ ಮತಗಟ್ಟೆಗೆ ರವಿ ಡಿ ಚನ್ನಣ್ಣನವರ್ ಭೇಟಿ ಕೊಟ್ಟಿದ್ದಾರೆ.
undefined
100ಕ್ಕೆ 1000 ಪಟ್ಟು ಗೆಲ್ತೀನಿ: ಬಿಜೆಪಿ ಅಭ್ಯರ್ಥಿ ವಿಶ್ವಾಸ
ಬೆಳಗ್ಗೆ ಏಜೆಂಟರ್ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ರವಿ ಡಿ ಚನ್ನಣ್ಣನವರ್ ಮತಗಟ್ಟೆಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಮತದಾನ ಮಾಡಲು ಬಂದಿದ್ದ ವೃದ್ಧ ದಂಪತಿಯ ಮೊಮ್ಮಗುವಿನ ಜೊತೆ ಕೆಲ ಕಾಲ ಸಮಯ ಕಳೆದಿದ್ದಾರೆ.
ಅಜ್ಜಿಯ ಯೋಗಕ್ಷೇಮ ವಿಚಾರಿಸಿ, ವೋಟ್ ಮಾಡಿದ್ರಾ ಎಂದು ವಿಚಾರಿಸಿ, ನಮಗೆ ಊಟ ಹಾಕೋಲ್ವ ಎಂದು ರವಿ ಚನ್ನಣ್ಣ ತಮಾಷೆ ಮಾಡಿದ್ದಾರೆ. ಬನ್ನಿ ಮುದ್ದೆ ಊಟ ಮಾಡಿ ಕೊಡ್ತಿನಿ ಆದ್ರೆ ಕೋಳಿ ಸಾರ್ ಮಾತ್ರ ಕೇಳ್ಬೇಡಿ ಎಂದ ಅಜ್ಜಿ ಮಾತಿಗೆ ನಗುವಿನ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಹೊಸಕೋಟೆ BJP, ಕಾಂಗ್ರೆಸ್ ಅಭ್ಯರ್ಥಿಗಳಿಲ್ಲ ತಮ್ಮ ಪರ ಮತ ಹಾಕೋ ಅವಕಾಶ
ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಮುಂದಿನ ಮತಗಟ್ಟೆಯತ್ತ ತೆರಳಿದ್ದಾರೆ. ಬೆಳಗ್ಗಿನಿಂದಲೂ ರವಿ ಅವರು ಮತಗಟ್ಟೆಗಳ ಭದ್ರತೆ ಪರಿಶೀಲಿಸುತ್ತಿದ್ದಾರೆ.