ಹಾಸನ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಮತ್ತೆರಡು ದಿನ ಮುಂದಕ್ಕೆ

By Kannadaprabha NewsFirst Published Jul 24, 2019, 2:25 PM IST
Highlights

ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮತ್ತೆ ತಾಲೂಕಿನ ಶಿರಿವಾಗಲು ಸಮೀಪ ರೇಲ್ವೆ ಹಳಿಗಳ ಮೇಲೆ ಮಣ್ಣು ಕುಸಿದಿದ್ದು, ಮತ್ತೆ ಮಂಗಳವಾರ ತೆರವು ಕಾರ್ಯಾಚರಣೆ ನಡೆಯಿತು. ಸದ್ಯಕ್ಕೆ ಬೆಂಗಳೂರು- ಮಂಗಳೂರು ನಡುವೆ ರೈಲುಗಳ ಸಂಚಾರ ಆರಂಭವಾಗುವ ಸಾಧ್ಯತೆಗಳು ಕಡಿಮೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ(ಜು.24): ಸಕಲೇಶಪುರದ ಶಿರಿವಾಗಲು ಸಮೀಪ ರೇಲ್ವೆ ಹಳಿಗಳ ಮೇಲೆ ಮಣ್ಣು ಕುಸಿದಿದ್ದು ಮಂಗಳವಾರ ತೆರವು ಕಾರ್ಯಾಚರಣೆ ನಡೆದಿದೆ. ಹೀಗೆ ಹಳಿಗಳ ಮೇಲೆ ಮಣ್ಣು ಮತ್ತು ಬಂಡೆಗಳು ಕುಸಿಯುತ್ತಿದೆ. ಆದ್ದರಿಂದ ಸದ್ಯಕ್ಕೆ ಬೆಂಗಳೂರು- ಮಂಗಳೂರು ನಡುವೆ ರೈಲುಗಳ ಸಂಚಾರ ಸದ್ಯ ಆರಂಭವಾಗುವ ಸಾಧ್ಯತೆಗಳು ಕಡಿಮೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಹಳಿಗಳ ಸಮೀಪ ಕಟ್ಟಿನಿಂತ ನೀರು:

ತಾಲೂಕಿನ ಶಿರಿವಾಗಿಲು ಸಮೀಪ ರೈಲು ಹಳಿಗಳ ಮೇಲೆ ಬಿದ್ದಿರುವ ಮಣ್ಣನ್ನು ತೆರುವು ಮಾಡಲು ಮಂಗಳವಾರ ನಿರಂತರ ಕಾರ್ಯಾಚರಣೆ ನಡೆಯಿತು. ಶಿರಿವಾಗಿಲು ಸಮೀಪದ 86ನೇ ಮೈಲುಗಲ್ಲಿನ ಸುರಂಗವೊಂದರ ಸಮೀಪ ರೈಲು ಹಳಿಗಳ ಪಕ್ಕದಲ್ಲಿ ನೀರು ನಿಂತಿದ್ದು ಜೊತೆಗೆ ಕೆಲವು ಮಧ್ಯಮ ಗಾತ್ರದ ಬಂಡೆಗಳು ರೈಲು ಹಳಿಗಳ ಮೇಲೆ ಕುಸಿದಿತ್ತು.

ಮಂಗಳೂರು-ಬೆಂಗಳೂರು ರೈಲು 2 ದಿನ ಸ್ಥಗಿತ

ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಪಡಿಸಿ ಮಣ್ಣು ತೆರವುಗೊಳಿಸಲು ಶನಿವಾರ ಮುಂಜಾನೆಯಿಂದಲೇ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಕಾರ್ಯಾಚರಣೆ ಮುಗಿಯುತ್ತಲ್ಲೇ ಮತ್ತೊಮ್ಮೆ ಕುಸಿಯಿತು ಮಣ್ಣು:

ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮಣ್ಣು ತೆರವುಗೊಳಿಸಿ ಕಾರ್ಯಾಚರಣೆ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಸಹ ರಾತ್ರಿಯ ವೇಳೆಗೆ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮತ್ತಷ್ಟುಮಣ್ಣು ರೈಲು ಹಳಿಗಳ ಮೇಲೆ ಕುಸಿಯಿತು. ಇದರಿಂದ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರು- ಮಂಗಳೂರು ನಡುವಿನ ರೈಲು ಸಂಚಾರವನ್ನು ಮಂಗಳವಾರ ಸಹ ರದ್ದು ಪಡಿಸಲಾಗಿತ್ತು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!