ಪಂಚೆ ಧರಿಸಿ ಬಂದ ರೈತನಿಗೆ ಪ್ರವೇಶ ನಿರ್ಬಂಧಿಸಿ ಮಾನಹಾನಿ ಮಾಡಿದ ಜಿಟಿ ವರ್ಲ್ಡ್ ಮಾಲ್ ರೈತನಿಗೆ 1 ಕೋಟಿ ರೂ. ಮಾನನಷ್ಟ ಪರಿಹಾರ ನೀಡಬೇಕು ಎಂದು ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಬೆಂಗಳೂರು (ಜು.17): ಸಿಲಿಕಾನ್ ಸಿಟಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ. ವರ್ಲ್ಡ್ ಮಾಲ್‌ನಲ್ಲಿ ಕಚ್ಚೆಪಂಚೆ ಧರಿಸಿ ಬಂದಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಮಾನಹಾನಿ ಮಾಡಿದ್ದು, ಸಂಬಂಧಪಟ್ಟ ರೈತನಿಗೆ 1 ಕೋಟಿ ರೂ. ಮಾನನಷ್ಟ ಪರಿಹಾರವನ್ನು ಕೊಡಬೇಕು ಎಂದು ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಜಿ.ಟಿ. ವರ್ಲ್ಡ್ ಮಾಲ್‌ಗೆ ಆಗಮಿಸಿದ ಪ್ರಣವಾನಂದ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡಿ, ಹಾವೇರಿ ಮೂಲದ ರೈತ ಫಕೀರಪ್ಪ ಇರುವ ವಾರ್ಡಿನ ಪಂಚಾಯ್ತಿ ಸದಸ್ಯ ನಾನು. ಬೆಂಗಳೂರಿನಲ್ಲಿ ರೈತನಿಗೆ ಅವಮಾನ ಆಗಿದೆ. ನಾನು ಅವರ ಕುಟುಂಬ ಹಾಗೂ ಸಂಬಂಧಿಕರ ಜೊತೆ ಮಾತನಾಡಿದ್ದೇನೆ. ಕುರುಬ ಸಮುದಾಯಕ್ಕೆ ಸೇರಿದ ಫಕೀರಪ್ಪಗೆ ಅನ್ಯಾಯವಾಗಿದೆ. ಇದನ್ನು ಎಲ್ಲ ರೈತಪರ ಸಂಘಟನೆಗಳು ಹಾಗು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಈಗ ರಾಜ್ಯದ ಎಲ್ಲ ಸ್ವಾಮೀಜಿಗಳು ಹಾಗೂ ಮಠಾಧೀಶರು ಕೂಡ ಖಂಡನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪಂಚೆಯುಟ್ಟ ರೈತನಿಗೆ ಪ್ರವೇಶ ನಿರಾಕರಸಿ ಅವಮಾನಿಸಿದ ಜಿಟಿ ಮಾಲ್ ಸಿಬ್ಬದಿಯಿಂದ ಕೈಮುಗಿದು ಕ್ಷಮೆ!
ನಮ್ಮ ಮಠಾಧೀಶರು ಫಕೀರಪ್ಪ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ರೈತ ಫಕೀರಪ್ಪಗೆ ಮಾನಹಾನಿಯಾಗಿದೆ. ಜಿಟಿ. ವರ್ಲ್ಡ್ ಮಾಲ್‌ನವರು ಅವರಿಗೆ ಮಾನನಷ್ಟ ಆಗಿರುವುದನ್ನು ಭರಿಸುವ ನಿಟ್ಟಿನಲ್ಲಿ ಪರಿಹಾರವಾಗಿ 1 ಕೋಟಿ ರೂ. ಹಣವನ್ನು ನೀಡಬೇಕು. ಇಲ್ಲದಿದ್ದರೆ ಮಾಲ್‌ನ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಇನ್ನು ಹಾವೇರಿ ಜಿಲ್ಲೆ, ರಾಣಿಬೆನ್ನೂರು ತಾಲೂಕು , ಅರೆಮಲ್ಲಪುರ ಗ್ರಾಮ ಪಂಚಾಯ್ತಿಯ ಮತದಾರ ಫಕೀರಪ್ಪ ಆಗಿದ್ದು, ನಾನು ಅವರ ಗ್ರಾಮ ಪಂಚಾಯಿತಿ ಸದಸ್ಯನೂ ಆಗಿದ್ದು, ತಮ್ಮ ಪಂಚಾಯಿತಿಯ ಮತದಾರನಿಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದರು.
ಮಾಲ್ ಒಳಗೆ ಪಂಚೆ ಹಾಕಿಕೊಂಡ ರೈತನಿಗೆ ಪ್ರವೇಶ ನಿರಾಕರಿಸಿ ವಿಚಾರದ ಬಗ್ಗೆ ತಿಳಿದಿಬಂದಿದೆ. ಯಾವುದೋ ಮಾಲ್ ಒಂದರಲ್ಲಿ ಬಿಟ್ಟಿಲ್ಲ ಅಂತಾ. ಇದು ಪ್ರಸ್ತುತವಿರುವ ಮಾನಸಿಕ ಸ್ಥಿತಿಯಾಗಿದೆ. ಸಿದ್ದರಾಮಯ್ಯ ಅವರು ಪಂಚೆ ಹಾಕಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಇದು ಆ ಸೆಕ್ಯುರಿಟಿಗೆ ಯಾರೋ ಗೈಡ್ ಲೈನ್ಸ್ ಕೊಟ್ಟಿರಬಹುದು.
- ಸಂತೋಷ್ ಲಾಡ್, ಕಾರ್ಮಿಕ ಸಚಿವ