ಬೆಂಗಳೂರು: ಕೊತ್ತನೂರಿನಲ್ಲಿ ಬಂಗಾಲಿಗರ ದುರ್ಗಾ ಪೂಜೆ, ಸಾರಕ್ಕಿಯಲ್ಲಿ ದುರ್ಗೋತ್ಸವ

By Web DeskFirst Published Oct 2, 2019, 1:39 PM IST
Highlights

ದಸರೆಯನ್ನು ದೇಶದೆಲ್ಲೆಡೆ ಸಂಭ್ರಮ, ಸಡಗರಿದಿಂದ ಆಚರಿಸಲಾಗುತ್ತದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯಲ್ಪಡುವ ಈ ಹಬ್ಬವನ್ನು ಬಂಗಾಲಿಗರು ದುರ್ಗಾಪೂಜೆ ಎಂದು ದೇವಿಯನ್ನು ಆರಾಧಿಸುತ್ತಾರೆ. ದೂರದ ಕೊಲ್ಕತ್ತಾದಿಂದ ಆಗಮಿಸಿದ ಬಂಗಾಲಿಗರು ಈ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸುತ್ತಿದ್ದು, ಎಲ್ಲಿ, ಯಾವಾಗ ಎಂಬ ಮಾಹಿತಿ ಇಲ್ಲಿದೆ ನೋಡಿ....

ಬೆಂಗಳೂರು (ಅ.02): ದಸರೆಯನ್ನು ದೇಶದೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಬಾಂಗ್ಲಾದಲ್ಲಿ ದುರ್ಗೆಯನ್ನು ಆರಾಧಿಸಿದರೆ, ಗುಜರಾತಿನಲ್ಲಿ ದಾಂಡಿಯಾ ಸಂಭ್ರಮ ಜೋರಾಗಿರುತ್ತದೆ. ಕರ್ನಾಟಕದಲ್ಲಂತೂ ದಸರೆ ನಾಡ ಹಬ್ಬ. ಮೈಸೂರಿನ ದಸರಾ ವಿಶ್ವ ಪ್ರಸಿದ್ಧಿ. 

ಹೊರ ನಾಡಿನಿಂದ ರಾಜ್ಯಕ್ಕೆ ಬಂದವರು, ತಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಚಾಚೂ ತಪ್ಪದೇ ಅನುಸರಿಸುತ್ತಾರೆ. ತಮ್ಮದೇ ಶೈಲಿಯಲ್ಲಿ ತಮ್ಮವರನ್ನು ಒಟ್ಟುಗೂಡಿಸಿ ಸಂಭ್ರಮಿಸುತ್ತಾರೆ. ಗುಜರಾತಿಗಳು ದಾಂಡಿಯಾವನ್ನು ಸಂಘಟಿಸಿದರೆ ಬಂಗಾಲಿಗರು ದುರ್ಗಾ ಪೆಂಡಾಲ್ ಹಾಕಿ, ತಮ್ಮವರನ್ನು ಕಲೆ ಹಾಕಿ ಸ್ತ್ರೀತ್ವದ ಪ್ರತೀಕವಾದ ದುರ್ಗೆಯನ್ನು ತಮ್ಮದೇ ಶೈಲಿಯಲ್ಲಿ ಪೂಜಿಸುತ್ತಾರೆ. 

ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದ ಅಜ್ಜಿ

ವಿಶ್ವದೆಲ್ಲೆಡೆ ಇರುವ ಬಂಗಾಲಿಗರು ತಮ್ಮ ಸಂಸ್ಕೃತಿಯನ್ನು ಚಾಚೂ ತಪ್ಪದೇ ಆಚರಿಸಿಕೊಂಡು  ಬರುತ್ತಿದ್ದಾರೆ. ಬೆಂಗಳೂರಿನ ಬಂಗಾಲಿಗರೂ ಇದಕ್ಕೆ ಹೊರತಲ್ಲ. ಮಾ ದುರ್ಗೆಯನ್ನು ಉತ್ತರ ಬೆಂಗಳೂರಿನ ಕೊತ್ತನೂರಿನ ಆರ್ಕಿಡ್ ವುಡ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಿಶೇಷವಾಗಿ ಪೂಜಿಸುತ್ತಾರೆ. ತಮ್ಮ ಮೂರನೇ ವರ್ಷದ ದುರ್ಗಾ ಪೂಜೆಯನ್ನು ಆಚರಿಸುತ್ತಿದ್ದು, ಅಕ್ಟೋಬರ್ 4 ರಿಂದ 8ರವರೆಗೂ ಪೂಜೆ ನಡೆಯಲಿದೆ.

ದೂರದ ಕೊಲ್ಕತ್ತಾದಿಂದ ಸಿಲಿಕಾನ್ ಸಿಟಿಗೆ ಬಂದು, ನೆಲೆ ಕಂಡು ಕೊಂಡಿರುವ ಬಂಗಾಲಿಗರನ್ನು ಒಟ್ಟುಗೂಡಿಸಲು ಇಲ್ಲಿ ದುರ್ಗೆ ಪೂಜೆಯನ್ನು ಆಚರಿಸಲಾಗುತ್ತದೆ. ತಮ್ಮ ಸಂಸ್ಕೃತಿಯ ಬೇರಿನೊಂದಿಗೆ ಹೆಚ್ಚೆಚ್ಚು ಕನೆಕ್ಟ್ ಆಗುವಂತೆ ಪೂಜೆ, ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಎಲ್ಲ ಬಂಗಾಲಿ ಕುಟುಂಬಗಳು ಒಂದಾಗಿ, ಈ ನಾಲ್ಕು ದಿನಗಳ ಕಾಲ ಒತ್ತಡದ ಬದುಕಿಗೆ ವಿದಾಯ ಹೇಳಲಾಗುತ್ತದೆ. ತಮ್ಮ ನೋವನ್ನು ಮರೆಯಲು ಈ ಸಂಭ್ರಮ ನೆರವಾಗುತ್ತದೆ. ನಕರಾತ್ಮಕ ಚಿಂತನೆಗಳಿಗೆ ಗುಡ್ ಬೈ ಹೇಳಿ, ಹಿಡಿಯುವ ಕೆಲಸಗಳಲ್ಲಿ ಯಶಸ್ಸು ಸಿಗಲೆಂದು ದೇವಿ ದುರ್ಗೆಯನ್ನು ಬಂಗಾಲಿಗರು ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸುತ್ತಾರೆ. 

ಮೈಸೂರು ದಸರೆಯಲ್ಲಿ ದಂಪತಿಗಳಿಂದ ಪಾಕೋತ್ಸವ

ಸಂತೋಷವಾಗಿ, ಆಧ್ಯಾತ್ಮಕಿ ಜ್ಞಾನ ವೃದ್ಧಿಯೊಂದಿಗೆ ಸಾಂಸ್ಕೃತಿಕವಾಗಿಯೂ ಆಚರಿಸುವ ಈ ಹಬ್ಬದ ಪ್ರಯುಕ್ತ ಅಕ್ಟೋಬರ್ 6ರಂದು ಮಧ್ಯಾಹ್ನ 2ರಿಂದ ಸಂಜೆ 5ರವರಿಗೆ 108 ಕಮಲ ಹಾಗೂ ಶಂಖಗಳ ಚಿಪ್ಪಿನೊಂದಿಗೆ ದೇವಿಯನ್ನು ವೇದ ಘೋಷಗಳೊಂದಿಗೆ ಪೂಜಿಸಿ, ದೈವಿಕ ಭಾವ ಹೆಚ್ಚಿಸುವಂತೆ ಮಾಡುವುದು ಈ ದುರ್ಗಾದೇವಿಯ ವಿಶೇಷ. 

ದುರ್ಗೋತ್ಸವ
ಅಕ್ಟೋಬರ್ 4ರಿಂದ ಅ.8ರವರೆಗೆ ಸಾರಕ್ಕಿ ಸಿಗ್ನಲ್ ಸಮೀಪದ ಸಿಂಧೂರ ಕನ್ವೆನ್ಷನ್ ಹಾಲ್‌ನಲ್ಲಿ ಬೆಂಗಾಲಿ ಸಂಘಟನೆಯು ದುರ್ಗೋತ್ಸವವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮವನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಲಿದ್ದು, ಐಪಿಎಸ್ ಅಧಿಕಾರಿ ಡಿ.ರೂಪಾ, ಪ್ರಖ್ಯಾತ ನೃತ್ಯ ಕಲಾವಿದರಾದ ಡಾ.ಸತ್ಯನಾರಾಯಣ್ ರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ. ಸಾಂಸ್ಕೃತಿಕ ಸಂಜೆ, ಭೋಗ್ ಪ್ರಸಾದ್, ನೃತ್ಯ, ಆಹಾರ ಮೇಳ ಹಾಗೂ ಇತರೆ ಹಾಸ್ಯ ವಿನೋದ ಕಾರ್ಯಕ್ರಮಗಳು ಈ ದುರ್ಗೋತ್ಸವದ ಪ್ರಮುಖ ಆಕರ್ಷಣೆಗಳಾಗಿರುತ್ತವೆ.

 

click me!