
ಇಂಡಿ(ಅ.2): ಭೀಮಾತೀರದ ಹಂತಕ ಎಂದೇ ಕುಖ್ಯಾತಿ ಪಡೆದಿರುವ ಭಾಗಪ್ಪ ಹರಿಜನನ ಪತ್ನಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ವಿಜಯಪುರ ನಗರ ನಿವಾಸಿ ಶೋಭಾ ಬಜಂತ್ರಿ (45) ಮೃತಪಟ್ಟ ಮಹಿಳೆ. ಇಂಡಿ ತಾಲೂಕಿನ ಕಪನಿಂಬರಗಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಮೇಲೆ ಗೂಡ್ಸ್ ಟೆಂಪೋ ಹಾಗೂ ಮಹಿಂದ್ರ ಎಕ್ಸ್‌ಯೂ ಕಾರ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾಗಪ್ಪನ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೋಭಾ ಇದ್ದ ಕಾರು ಝಳಕಿ ಕಡೆಯಿಂದ ವಿಜಯಪುರದ ಕಡೆಗೆ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸೋಲಾಪೂರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೂಡ್ಸ್ ಟೆಂಪೋ ಚಾಲಕನಿಗೂ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೃತಪಟ್ಟ ಶೋಭಾ ಬಜಂತ್ರಿ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರಧಾನ ನ್ಯಾಯಾಲಯದಲ್ಲಿ ಎಪಿಪಿ (ಅಸಿಸ್ಟಂಟ್ ಪಬ್ಲಿಕ್ ಪ್ರಾಸಿಕ್ಯೂಟರ್) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.