33 ಗೋವುಗಳನ್ನು ರಕ್ಷಿಸಿದ ಪಿಎಸ್ ಐ ಮುರಳಿ ನೇತೃತ್ವದ ತಂಡ!

Published : Aug 31, 2019, 05:09 PM IST
33 ಗೋವುಗಳನ್ನು ರಕ್ಷಿಸಿದ ಪಿಎಸ್ ಐ ಮುರಳಿ ನೇತೃತ್ವದ ತಂಡ!

ಸಾರಾಂಶ

ಬಾಣಸವಾಡಿ ಪಿಎಸ್ ಐ ಮುರಳಿಯಿಂದ 33 ಗೋವುಗಳ ರಕ್ಷಣೆ| ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ ಪಿಎಸ್ ಐ ಮುರಳಿ ಅಂಡ್ ಟೀಂ| ರೌಂಡ್ಸ್ ನಲ್ಲಿದ್ದಾಗ ವಾಹನ ತಪಾಸಣೆ ನಡೆಸುತ್ತಿದ್ದ ಬಾಣಸವಾಡಿ ಪೊಲೀಸರ ಕೈಗೆ ಸಿಕ್ಕ ಆರೋಪಿಗಳು

ಬೆಂಗಳೂರು[ಆ.31]: ಅಕ್ರಮವಾಗಿ ಸಾಗಿಸುತ್ತಿದ್ದ 33 ಗೋವುಗಳನ್ನು ಬಾಣಸವಾಡಿ ಪಿಎಸ್ ಐ ಮುರಳಿ ನೇತೃತ್ವದ ತಂಡ ರಕ್ಷಿಸಿದೆ. ಗುರುವಾರ ಬೆಳಗ್ಗೆ ಎಂದಿನಂತೆ ರೌಂಡ್ಸ್ ನಲ್ಲಿದ್ದಾಗ ಬಾಣಸವಾಡಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಕ್ರಮ ಗೋವು ಸಾಗಿಸುತ್ತಿದ್ದ ವಿಚವಾರ ಬಹಿರಂಗವಾಗಿದೆ. 

ಬಾಣಸವಾಡಿಯ ಇಂಡಿಯನ್ ಪೆಟ್ರೋಲ್ ಬಳಿ ಎರಡು ಕ್ಯಾಂಟರ್ ನಲ್ಲಿ ಸುಮರು 33 ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಪೊಲೀಸರು ತಪಾಸಣೆ ನಡೆಸಿದಾಗ ಬೆಚ್ಚಿಬಿದ್ದ ಸಕ್ರಮ ಗೋವು ಸಾಗಾಟಗಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿಗಳನ್ನು ಬೆನ್ನತ್ತಿದ್ದ ಬಾಣಸವಾಡಿ ಬಾಣಸವಾಡಿ ಪಿಎಸ್ ಐ ನೇತೃತ್ವದ ತಂಡ, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಚಿಕ್ಕಮಗಳೂರು: ಗೋ ಕಳ್ಳರಿಂದ ಹಸುಗಳ ರಕ್ಷಣೆ

ಬಂಧಿತ ಆರೋಪಿಗಳನ್ನು ಮುಜೀದ್ ಹಾಗೂ ಅಬ್ದುಲ್ ಎಂದು ಗುರುತಿಸಲಾಗಿದೆ. ಸದ್ಯ ಗೋವುಗಳನ್ನು ಸದಾಗಿಸುತ್ತಿದ್ದ ಎರಡು ಕ್ಯಾಂಟರ್ ಗಳನ್ನು ಸೀಜ್ ಮಾಡಲಾಗಿದ್ದು, ಗೋವುಗಳನ್ನು ಇಸ್ಕಾನ್ ಗೋ ಶಾಲೆಯಲ್ಲಿರಿಸಲಾಗಿದೆ. 

ಗೋವುಗಳಿದ್ದ ಕ್ಯಾಂಟರ್ಸ್ ಉ. ಕರ್ನಾಟಕ ಭಾಗದಿಂದ ಬೆಂಗಳೂರಿನ ಎಂಟ್ರಿಯಾಗಿತ್ತೆನ್ನಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
 

PREV
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು