ಸಭೆ ನಡೆಯುತ್ತಿದ್ದಾಗ ಮುಖಂಡನೊಬ್ಬ ಒಳ ನುಗ್ಗಿ ಗಲಾಟೆ ಮಾಡಿದ ಘಟನೆ ನಡೆಯಿತು. ಭೀಮರಾಯ ಜಿಗಜಿಣಗಿ ಎಂಬಾತ ಇಟ್ಟಂಗಿಹಾಳದಲ್ಲಿ 2 ಎಕರೆ ಜಮೀನು ಏಕೆ ಕೊಟ್ಟಿದ್ದೀರಿ. ಶಾಲೆ ಹಾಸ್ಟೆಲ್‌ಗಳು ಎಲ್ಲಿ ಹೋಗಬೇಕು? ಎಂದು ಆಕ್ರೋಶ ಹೊರಹಾಕಿದರು.
ವಿಜಯಪುರ(ನ.30): ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಸವನ ಬಾಗೇವಾಡಿಯ ತಹಸೀಲ್ದಾರ್ ವೈ.ಎಸ್. ಸೋಮನಕಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.
46 ಹೈಕೋರ್ಟ್ ಕೇಸ್ ಬಗೆಹರಿಸದೇ ಪೆಂಡಿಂಗ್ ಇಟ್ಟಿದ್ದೀರಿ ಎಂದು ಸಿಟ್ಟಾದ ಭೈರೇಗೌಡರು, ನನ್ನ ಸಿಟ್ಟು ಕಂಟ್ರೋಲ್ ಮಾಡಿಕೊಂಡು ನಿಮಗೆ ಮಾತನಾಡ್ತಿದ್ದೇನೆ. ನೀವು ಶಾಲೆಯ ಮಕ್ಕಳಾ,? ನಾನ್ ಸ್ಕೂಲ್ ಹೆಡ್ ಮೇಸ್ಟ್ರಾ ಎಂದು ತರಾಟೆ ತೆಗೆದುಕೊಂಡರು. ನೀವೊಬ್ಬ ತಾಲೂಕು ಮೆಜಿಸ್ಟ್ರೇಟ್, ನಾನು ಪ್ರತಿ ತಾಲೂಕಿಗೆ ಅಡ್ಡಾಡಲಾ? ನನಗೆ ಹತ್ತು ಕೈ.. ಹತ್ತು ಕಾಲು ಇಲ್ಲ ಎಂದು ತಹಸೀಲ್ದಾರ್ ವಿರುದ್ಧ ವಾಗ್ದಾಳಿ ನಡೆಸಿದರು.
undefined
ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ: ಸಚಿವ ಕೃಷ್ಣ ಭೈರೇಗೌಡ
ನಿಮ್ಮ ಕೆಲಸ ನಿಮಗೆ ಮಾಡೋಕೆ ಆಗಲ್ವಾ. ಇಲ್ಲಿ ನಾಯಿ ಬಾಲವನ್ನು ಆಡಿಸಬೇಕು. ಬಾಲವೇ ನಾಯಿಯನ್ನು ಆಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎ.ಸಿ ಹಾಗೂ ತಹಸೀಲ್ದಾರ್‌ಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದ ಸಚಿವ, ಇಲಾಖೆಯಲ್ಲಿ ಮೂಲ ಕೆಲಸಗಳೇ ಆಗದೆ ಇದ್ದರೇ ಹೇಗೆ ಎಂದರು.
ಸಭೆಗೆ ನುಗ್ಗಿದ ಮುಖಂಡ:
ಸಭೆ ನಡೆಯುತ್ತಿದ್ದಾಗ ಮುಖಂಡನೊಬ್ಬ ಒಳ ನುಗ್ಗಿ ಗಲಾಟೆ ಮಾಡಿದ ಘಟನೆ ನಡೆಯಿತು. ಭೀಮರಾಯ ಜಿಗಜಿಣಗಿ ಎಂಬಾತ ಇಟ್ಟಂಗಿಹಾಳದಲ್ಲಿ 2 ಎಕರೆ ಜಮೀನು ಏಕೆ ಕೊಟ್ಟಿದ್ದೀರಿ. ಶಾಲೆ ಹಾಸ್ಟೆಲ್‌ಗಳು ಎಲ್ಲಿ ಹೋಗಬೇಕು? ಎಂದು ಆಕ್ರೋಶ ಹೊರಹಾಕಿದರು.
ಎಲ್ಲ ಜಮಿನುಗಳನ್ನು ಲೂಟಿ ಮಾಡುತ್ತಿದ್ದಾರೆ. ಕಂದಾಯ ಆಸ್ತಿಗಳನ್ನೇ ಲೂಟಿ ಮಾಡಲಾಗುತ್ತಿದೆ ಎಂದು ಭೀಮರಾಯ ಜಿಗಜಿಣಗಿ ಆರೋಪಿಸಿದರು. ಇವತ್ತಿನ ಸಭೆಗೆ ಸಾರ್ವಜನಿಕರನ್ನು ಕರೆದಿಲ್ಲ ಎಂದು ಅಸಮಾಧಾನ ತೋರಿಕೊಂಡರು. ಪೊಲೀಸರು ಆತನನ್ನು ಹೊರಗೆ ಕಳಿಸಿದರು.