ಬಿಜೆಪಿಯಿಂದ ಬೆದರಿಕೆ, ಜನಾರ್ದನ ರೆಡ್ಡಿ ವಿರುದ್ಧ ಅನಿಲ್ ಲಾಡ್ ರೋಷಾವೇಷ

By Suvarna NewsFirst Published Jun 30, 2022, 2:57 PM IST
Highlights
  • ಬಿಜೆಪಿ ತನಿಖಾ ತಂಡಗಳನ್ನಿಟ್ಟುಕೊಂಡು ಬೆದರಿಕೆ ಹಾಕ್ತಿದೆ
  • ಚುನಾವಣೆ ಹಿನ್ನೆಲೆ ಕಿರುಕುಳ ನೀಡೋ ಪ್ಲಾನ್ ಮಾಡ್ತಿದೆ ಬಿಜೆಪಿ
  • ಗಣಿಧಣಿ ಗಳಿಗೆ ಕಿರುಕುಳ ನೀಡೋದ್ರಲ್ಲಿ ಬಿಜೆಪಿ ನಿಸ್ಸಿಮರು ಎಂದ ಲಾಡ್ 

ಬಳ್ಳಾರಿ (ಜೂನ್ 30): ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ನಾಯಕರನ್ನು ಹೆದರಿಸುತ್ತಿದೆಯಂತೆ. ಗಣಿ ಅಕ್ರಮದಲ್ಲಿ ಎಲ್ಲ ರೀತಿಯ ತನಿಖೆ ಮುಗಿದ್ರು ಚುನಾವಣೆ ವರ್ಷವಿರೋ ಹಿನ್ನಲೆ ಮತ್ತೊಮ್ಮೆ ಇಡಿ ಮೂಲಕ ನೋಟಿಸ್ ನೀಡೋ ಕೆಲಸ ಬಿಜೆಪಿ ಮಾಡುತ್ತಿದೆಯಂತೆ. ಇಷ್ಟು ದಿನ ಈ ರೀತಿಯ ಆರೋಪಗಳು ತೆರೆಮರೆಯಲ್ಲಿ ಕೇಳಿ ಬರುತ್ತಿದ್ದವರು ಆದ್ರೇ, ಇದೀಗ ಮಾಜಿ ಶಾಸಕ ಮತ್ತು ಮಾಜಿ ರಾಜ್ಯ ಸಭಾ ಸದಸ್ಯ ಈ ಬಗ್ಗೆ ಸ್ಟಷ್ಟನೆ ನೀಡೋ ಮೂಲಕ ತಮಗೂ ಬಿಜೆಪಿ ಬೆದರಿಸೋ ಕೆಲಸ ಮಾಡುತ್ತಿದೆ ಇಡಿಯಿಂದ ನೋಟಿಸ್ ಕೂಡ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ಉತ್ತುಂಗದ ಸ್ಥಿತಿಯಲ್ಲಿದ್ದಾಗ ಬಳ್ಳಾರಿಯಲ್ಲಿ ಪಕ್ಷಾತೀತವಾಗಿ ಎಲ್ಲ ನಾಯಕರು ಗಣಿಗಾರಿಕೆ ಮಾಡಿದ್ರು. ಅದರಲ್ಲಿ ಸಕ್ರಮ ಮಾಡಿದವರು ಇದ್ದಾರೆ ಅಕ್ರಮ ಮಾಡಿದವರು ಇದ್ದಾರೆ. ಜನಾರ್ದನ ರೆಡ್ಡಿ ಸೇರಿದಂತೆ ಆನಂದ ಸಿಂಗ್, ನಾಗೇಂದ್ರ, ಸುರೇಶ್ ಬಾಬು, ಸತೀಶ್ ಶೈಲ್ ಸೇರಿದಂತೆ ಹತ್ತು ಹಲವು ನಾಯಕರು ಜೈಲಿಗೂ ಹೋಗಿ ಬಂದಿದ್ದು, ಇಂದಿಗೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಆದ್ರೇ, ಇದೀಗ ಕಾಂಗ್ರೆಸ್ ನಾಯಕರ ನ್ನೇ ಟಾರ್ಗೇಟ್ ಮಾಡುತ್ತಿರೋದು ಏಕೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. 

Davangere ಸಿಟಿಯಲ್ಲಿ ಈಗ 24 ಗಂಟೆಯೂ ಸಿಸಿಟಿವಿ ಕಣ್ಗಾವಲು

ಗಣಿ ಉದ್ಯಮಿಗಳ ವಿರುದ್ದ ಮತ್ತೆ ಸಿಬಿಐ ಮತ್ತು ಇಡಿ ಕೇಸ್ :
 ಹೆಚ್ಚು ಕಡಿಮೆ 2004 ರಿಂದ 2010ರವರೆಗೆ ಬಳ್ಳಾರಿಯಲ್ಲಿ ಎಗ್ಗಿಲ್ಲದೇ ಅಕ್ರಮ ಗಣಿಗಾರಿಕೆಯನ್ನು ಮಾಡಲಾಗಿತ್ತು. ಇದಕ್ಕೆ ಪೊಲೀಸ್, ಲೋಕಾಯುಕ್ತ, ಸಿಬಿಐ, ಎಸ್ಐಟಿ ಸೇರಿದಂತೆ ಹತ್ತು ಹಲವು ತನಿಖಾ ಸಂಸ್ಥೆಗಳು 2010 ರಿಂದಲೇ ನಿರಂತರವಾಗಿ ಪ್ರಕರಣ ದಾಖಲು ಮಾಡಿದ್ದು, ತನಿಖೆಯನ್ನು ಮಾಡುತ್ತಿದೆ. ಆದ್ರೇ, ಇದೇ ವಿಚಾರವಾಗಿ ಈ ಹಿಂದೆ ಅನಿಲ್ ಲಾಡ್ ಸೇರಿದಂತೆ ಹಲವು ಗಣಿ ಉದ್ಯಮಿಗಳು ಮೊದಲು ಎಸ್ ಐಟಿಗೆ ನಂತರ ಸಿಬಿಐ  ಮಾಹಿತಿ ಯನ್ನು ನೀಡಿ ತನಿಖೆಯನ್ನು ಎದುರಿಸಿದ್ದಾರೆ. ಆದ್ರೇ, ಇದೀಗ ಇಡಿ ಅಧಿಕಾರಿಗಳು ಹೊಸದಾಗಿ ಕೇಸ್ ಮಾಡಿ ನೋಟಿಸ್ ನೀಡ್ತಾ ಇದ್ದಾರೆ ನನಗೂ ಈಗ ನೋಟಿಸ್ ನೀಡಿದ್ದಾರೆ ಇದೆಲ್ಲವೂ ರಾಜಕೀಯ ಷಡ್ಯಂತ್ರವಲ್ಲದೇ  ಮತ್ತಿನ್ನೇನು ಎಂದು ಅನಿಲ್ ಲಾಡ್ ಪ್ರಶ್ನಿಸಿದ್ದಾರೆ.

ಈ ಹಿಂದೆ ಎಸ್ ಐಟಿ 50 ಸಾವಿರ ಮೆಟ್ರಿಕ್ ಟನ್ ಅಕ್ರಮ ಸಾಗಾಟ ಮಾಡಿದವರ ವಿರುದ್ದ ಕೇಸ್ ಮಾಡಿದ್ದಾರೆ ಆ ಕುರಿತು ನಾವೂ ಸಿಬಿಐಗೆ ಮಾಹಿತಿ ನೀಡಿದ್ದೇವೆ. ಮತ್ತೆ ಈಗ ಇಡಿಯನ್ನು ಕರೆಯಿಸಿ ಕೇಸ್ ಮಾಡಿಸುತ್ತಿದ್ದಾರೆ. ನಾವೂ ಗಣಿಗಾರಿಕೆ ಮಾಡುವಾಗ ನಮ್ಮ ‌ಮೈನ್ಸ್ ಗಳನ್ನು 'ಸಿ 'ಕೆಟಗೇರಿ ಮಾಡಿದ್ರು ಆಗ ನಮ್ಮ‌ ಅದಿರನ್ನ ಹರಾಜು ಹಾಕಿದ್ರು. ಅದನ್ನೆ ಇದೀಗ ಜಿಂದಾಲ್ ನವರು ಖರೀಧಿ ಮಾಡಿದ್ದಾರೆ ಇದೀಗ ಅದು ಎ ಗ್ರೇಡ್ ಆಗಿದೆ ಅದು ಹೇಗೆ ಆಗುತ್ತೆ..? ಎಂದು ಲಾಡ್ ಪ್ರಶ್ನೆಸುತ್ತಿದ್ದಾರೆ.

Karnataka Coastal Districts Rain; ಮಹಾಮಳೆಗೆ ಬೆಚ್ಚಿಬಿದ್ದ ಕರಾವಳಿ, ರೈಲು ಸಂಚಾರ ಬಂದ್!
 
ಜನಾರ್ದನ ರೆಡ್ಡಿ ನನ್ನ ಕಾರು ಸುಟ್ಟಿದ್ರು ಬೆದರಲಿಲ್ಲ:
ಇನ್ನೂ ಯಾವ ಆಧಾರದಲ್ಲಿ ಜರ್ನಾದನ ರೆಡ್ಡಿ ಒಂದು ದಿನ ಸಿಎಂ ಆಗ್ತನೆ ಅನ್ನುತ್ತಾರೆ. ಏನು ಸಿಎಂ ಹುದ್ದೇ ಇವರೇ ಸೃಷ್ಟಿ ಮಾಡ್ತಾರಾ..? ಇದಕ್ಕೆಲ್ಲ ಯಾರೋ ಬೆಂಬಲವಿದ್ರೇ ತಾನೇ ಹೀಗೆ ಮಾತನಾಡೋದು ಎನ್ನುವ ಮೂಲಕ ಬಿಜೆಪಿ ಹೈಕಮೆಂಡ್ ರೆಡ್ಡಿ ಬೆಂಬಲಿವಿದೆ ಎಂದರು.  ನಾನು ರೆಡ್ಡಿ ಮನೆ ಪಕ್ಕ ಮನೆ ಮಾಡಿದ್ದೇ ಆಗ  ನನ್ನ ಕಾರು ಸುಟ್ಟರು ಹೀಗಾಗಿ ಜೀವ ಬೆದರಿಕೆ ಅನುಭವಿಸಿದ್ದೇನೆ ಆದ್ರೇ ಇದ್ಯಾವುದಕ್ಕೂ ನಾನು ಜಗ್ಗೋದಿಲ್ಲವೆಂದ್ರು. ಅಲ್ಲದೇ
ಹಿಂದೆ ನಾವೂ ಪಾದಯಾತ್ರೆ ಮಾಡಿದಾಗ ಮಾಡಿದ ಭಾಷಣದ ತುಣುಕನ್ನು ಇಟ್ಟು ಕೊಂಡು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
 
ಯಾರಿಗೂ ಗೊತ್ತಿಲ್ಲ ಅಂತಾರೆ ಆದ್ರೇ ಮಾಡೋರಾರು?
ಇಡಿ ವಿಚಾರವಾಗಿ ಪ್ರಧಾನಿ ಮೋದಿ ಅಮಿತ್ ಶಾ ನಮ್ಮದೇನೂ ಪಾತ್ರ ಇಲ್ಲ ಅಂತಾರೆ ಅಂದ್ರೇ ಇದನ್ನೆಲ್ಲ ಮಾಡೋದು ಯಾರು..? ಅಜಿತ್ ದೋವಲ್ ಎಲ್ಲವನ್ನೂ ಮಾಡ್ತಾ ಇದ್ದಾರೆ ಎಂದು ಅನಿಲ್ ಲಾಡ್ ವ್ಯಂಗ್ಯವಾಗಿ ಪ್ರಶ್ನೆಸಿದ್ದಾರೆ. ನಾನು ಕಾಶ್ಮೀರ್ ಫೈಲ್ ಫಿಲ್ಮ್ ನೋಡಿದ್ದೇನೆ. ಅಜೀತ್ ದೋವಲ್ ಹಿಂಬಾಲಕರನ್ನ ಇಟ್ಟುಕೊಂಡು
ಎನೇನೊ ಮಾಡ್ತಾ ಇದಾರೆ. ಇದೆಲ್ಲವೂ ಬಹಳ ದಿನ ನಡೆಯೋದಿಲ್ಲವೆಂದು ಕೇಂದ್ರದ ನಾಯಕರು ವಿರುದ್ದವೂ ಲಾಡ್ ಗುಡುಗಿದ್ದಾರೆ.  

click me!