ಕೊಪ್ಪ(ಮೇ.19): ಏಷ್ಯಾ ಖಂಡದಲ್ಲಿಯೇ ಸಹಕಾರಿ ತತ್ವದಡಿ ಕಾರ್ಯಾಚರಿಸುತ್ತಿರುವ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೊಪ್ಪ ಕೆಸವೆ ರಸ್ತೆಯಲ್ಲಿರುವ ಸಹಕಾರ ಸಾರಿಗೆ ಸಂಸ್ಥೆ (ಟಿ.ಸಿ.ಎಸ್) ಹಣಕಾಸು ಸಂಸ್ಥೆಯೊಂದಕ್ಕೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಸೋಮವಾರ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.
ಸಂಸ್ಥೆ ಆಡಳಿತ ಮಂಡಳಿ ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ಕೆಸವೆ ರಸ್ತೆಯಲ್ಲಿರುವ ಸಹಕಾರ ಸಾರಿಗೆ ಸಂಸ್ಥೆಯ ಆಸ್ತಿಯನ್ನು ಆಧಾರವಾಗಿ ನೀಡಿ 1 ಕೋಟಿ 20 ಲಕ್ಷ ರು. ಸಾಲ ಪಡೆದಿ ದ್ದು ಬಡ್ಡಿಸಹಿತ 1,31,41,210 ಮೊತ್ತ ಮರುಪಾವತಿಸಲು ಬಾಕಿಯಿತ್ತು.
29 ವರ್ಷ ಇತಿಹಾಸವುಳ್ಳ ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ ಬಸ್ ಸ್ಥಗಿತ! .
ಈ ಹಿನ್ನೆಲೆಯಲ್ಲಿ ಫೈನಾನ್ಸ್ ಕಂಪನಿ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿತ್ತು. ಏತನ್ಮಧ್ಯೆ ಕೊಪ್ಪ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಕೂಡ ತಮಗೆ ಬರಬೇಕಾದ 2.90 ಕೋಟಿ ರು. ಸಾಲವನ್ನು ಮರುಪಾವತಿ ಮಾಡದಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ನೋಟಿಸ್ ಜಾರಿ ಮಾಡಿದೆ.