ಅಡಕೆ ಬೆಳೆಗಾರರಿಗೆ ಗುಡ್ ನ್ಯೂಸ್

By Kannadaprabha NewsFirst Published May 19, 2021, 7:43 AM IST
Highlights
  • ಅಡಕೆ  ಬೆಳೆಗಾರರಿಗೆ ಸಂತಸ ತರುವ ಸುದ್ದಿ 
  • ಆರ್ಥಿಕತೆಯ ಜೀವನಾಡಿ ಬೆಳೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ
  •  ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳು ವೈಜ್ಞಾನಿಕವಾಗಿ ಕಂಡುಬಂದಿಲ್ಲ 

ವರದಿ :  ಆತ್ಮಭೂಷಣ್‌
 
ಮಂಗಳೂರು (ಮೇ.19):
 ಕರಾವಳಿಯ ಆರ್ಥಿಕತೆಯ ಜೀವನಾಡಿ ಬೆಳೆ ಅಡಕೆ ಕ್ಯಾನ್ಸರ್‌ಕಾರಕ, ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ಈಗ ಬೆಳೆಗಾರರಿಗೆ ಸಂತಸ ತರುವ ಸುದ್ದಿಯೊಂದು ಬಂದಿದೆ. 

ಅಮೆರಿಕದ ಪ್ರಸಿದ್ಧ ‘ಮೊಲೆಕ್ಯುಲರ್‌ ಸೆಲ್‌’ ಹೆಸರಿನ ಜರ್ನಲ್‌ನಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಲ್ಲಿ ಅಡಕೆಯ ಉಲ್ಲೇಖವನ್ನೇ ಕೈಬಿಡಲಾಗಿದೆ. ಇದರಿಂದ ಅಡಕೆಯನ್ನು ಕ್ಯಾನ್ಸರ್‌ಕಾರಕ, ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎನ್ನುವ ಅಡಕೆ ಬೆಳೆಗಾರರ ವಾದಕ್ಕೆ ಇನ್ನಷ್ಟುಪುಷ್ಟಿನೀಡಿದಂತಾಗಿದೆ.

ಸರ್ಕಾರಿ ವೆಬ್‌ಸೈಟ್‌ನಲ್ಲೇ ಅಡಕೆಗೆ ಡ್ರಗ್ಸ್‌ ಪಟ್ಟ! ...

ಇಮ್ರೋ ವಿಶ್ವವಿದ್ಯಾಲಯದ ಸಂಶೋಧನಾ ವರದಿ ‘ಮೊಲೆಕ್ಯುಲರ್‌ ಸೆಲ್‌’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಅಡಕೆಯಲ್ಲಿನ ಅರೆಕೋಲಿನ್‌ ಅಂಶವನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿದಾಗ ಅದರಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳು ವೈಜ್ಞಾನಿಕವಾಗಿ ಕಂಡುಬಂದಿಲ್ಲ ಎಂಬುದನ್ನು ಸಂಶೋಧಕರು ಕಂಡುಕೊಂಡಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

ಇದು ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಲು ಅಡಕೆ ಬೆಳೆಗಾರರ ಪರವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಾಗೂ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ನೆರವಾಗಲಿದೆ. 

click me!