ಕೊರೋನಾ ತೊಲಗಿದ ನಂತರ ವೈಯಕ್ತಿಕ ಕೆಲಸಕ್ಕೆ ರಜೆ: DySpಗೆ SP

By Suvarna News  |  First Published Apr 10, 2020, 2:15 PM IST

ಕೊರೋನಾ ವೈರಸ್‌ ಬಳ್ಳಾರಿ ಜಿಲ್ಲೆಯಿಂದ ತೊಲಗಿದ ನಂತರ ನಿಮ್ಮ ವೈಯಕ್ತಿಕ ಕೆಲಸಕ್ಕೆ ರಜೆ| ವೈಯಕ್ತಿಕ ಕೆಲಸಕ್ಕೆ ರಜೆ ನೀಡುವಂತೆ ಮನವಿ ಮಾಡಿದ್ದ ಹಡಗಲಿ ಡಿವೈಎಸ್‌ಪಿ ಮಲ್ಲನಗೌಡ.ಎಸ್.ಹೊಸಮನಿ|ದೇಶಾದ್ಯಂತ ಕೊರೋನಾ ವೈರಸ್‌ ಹೊಡೆದೋಡಿಸಲು ಲಾಕ್‌ಡೌನ್|


ಬಳ್ಳಾರಿ(ಏ.10): ಮಹಾಮಾರಿ ಕೊರೋನಾ ವೈರಸ್‌ ಬಳ್ಳಾರಿ ಜಿಲ್ಲೆಯಿಂದ ತೊಲಗಿದ ನಂತರ ನಿಮ್ಮ ವೈಯಕ್ತಿಕ ಕೆಲಸಕ್ಕೆ ರಜೆ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ ಕೆ ಬಾಬಾ ಎಂದು ಜಿಲ್ಲೆಯ ಹಡಗಲಿ ಡಿವೈಎಸ್‌ಪಿ ಮಲ್ಲನಗೌಡ.ಎಸ್.ಹೊಸಮನಿ ಅವರಿಗೆ ಹೇಳಿದ್ದಾರೆ.

ಹಡಗಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಿವೈಎಸ್‌ಪಿ ಮಲ್ಲನಗೌಡ.ಎಸ್.ಹೊಸಮನಿ ಅವರು ತಮ್ಮ ವೈಯಕ್ತಿಕ ಕಾರಣಕ್ಕೆ ಐದು ದಿನ ರಜೆ ಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ ಕೆ ಬಾಬಾ ಅವರಿಗೆ ಮನವಿ ಪತ್ರವೊಂದನ್ನು ಕಳುಹಿಸಿದ್ದರು. 

Tap to resize

Latest Videos

undefined

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ ಕೆ ಬಾಬಾ ಮಹಾಮಾರಿ ಕೊರೋನಾ ವೈರಸ್‌ ಬಳ್ಳಾರಿ ಜಿಲ್ಲೆಯಿಂದ ತೊಲಗಿದ ನಂತರ ನಿಮ್ಮ ವೈಯಕ್ತಿಕ ಕೆಲಸಕ್ಕೆ ರಜೆ ನೀಡಲಾಗುವುದು ಎಂದು ಉತ್ತರ ನೀಡಿದ್ದಾರೆ.

ಕೊರೋನಾ ವಾರ್ಡ್‌ನಲ್ಲಿ ಸಿಕ್ಕಿದ್ದ ಐದು ಬೆಕ್ಕುಗಳು ಸಾವು

ದೇಶಾದ್ಯಂತ ಕೊರೋನಾ ವೈರಸ್‌ ಹೊಡೆದೋಡಿಸಲು ಲಾಕ್‌ಡೌನ್ ಮಾಡಲಾಗಿದೆ.ಈ ಸಂದರ್ಭದಲ್ಲಿ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಒಂದು ದಿನ ರಜೆ ಪಡೆಯದೆ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿದ್ದಾರೆ. 
 

click me!