ಹಿಂದೂ ಸಂಸ್ಕೃತಿ ಪ್ರಕಾರ ಯುಗಾದಿ ನಮಗೆ ಹೊಸ ವರ್ಷ. ಪಾಶ್ಚತ್ಯ ಸಂಸ್ಕೃತಿ ಹೆಸರಲ್ಲಿ ಮುಗ್ಧ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಹೆಸರಲ್ಲಿ ಲವ್ ಜಿಹಾದ್ ಹೆಚ್ಚಾಗುತ್ತಿದೆ. ಇಂತಹಾ ಕಾರ್ಯಕ್ರಮಗಳ ಮೂಲಕ ಹೆಣ್ಣು ಮಕ್ಕಳ ದುರ್ಬಳಕೆಯನ್ನ ಬಜರಂಗದಳ ಖಂಡಿಸುತ್ತೆ ಎಂದು ಎಸ್ಪಿಗೆ ಮನವಿ ಸಲ್ಲಿಸಿದ ಚಿಕ್ಕಮಗಳೂರು ಬಜರಂಗಳದಳ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಡಿ.30): ಹೊಸ ವರ್ಷದ ಆಚರಣೆಗೆ ಜಗತ್ತೇ ಪ್ಲಾನ್ ಮಾಡಿಕೊಳ್ಳುತ್ತಿದೆ. ನ್ಯೂ ಇಯರ್‌ಗೆ ಟೂರಿಸ್ಟ್ ಸ್ಪಾಟ್‌ಗಳಲ್ಲಿ ವೆಲ್ಕಂ ಹೇಳೋದಕ್ಕೆ ಪ್ರವಾಸಿ ಪ್ರಿಯರು ಪ್ರವಾಸಿ ತಾಣಗಳಲ್ಲಿ ಸೆಟ್ಲ್ ಆಗಿದ್ದಾರೆ. ಕಾಫಿನಾಡಲ್ಲೂ ಕೂಡ ಈಗಾಗ್ಲೇ ಪ್ರವಾಸಿಗರ ಸಂತೆ ಏರ್ಪಟ್ಟಿದೆ. ಆದ್ರೆ, ಬಜರಂಗದಳ ಮಾತ್ರ ಹೊಸ ವರ್ಷದ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಆಚರಣೆಗೆ ನಮ್ಮ ವಿರೋಧವಿಲ್ಲ. ಆದ್ರೆ, ಆಚರಣೆ ಹೆಸರಲ್ಲಿ ನಡೆಯುವ ಚಟುವಟಿಕೆಗೆ ನಮ್ಮ ವಿರೋಧ ಅಂತಿದೆ.
undefined
ಎಸ್ಪಿ ಗೆ ಮನವಿ ಸಲ್ಲಿಸಿದ ಬಜರಂಗದಳ ಮುಖಂಡರು:
ಹೊಸ ವರ್ಷದ ಆಚರಣೆ ಅಂದ್ಮೇಲೆ ಗುಂಡು-ತುಂಡು-ಡಿಸ್ಕೋ-ಡಿಜೆ ಇದ್ದೇ ಇರುತ್ತೆ. ಅದಿದ್ರೇನೆ ಆಚರಣೆಗೆ ಒಂದು ಅರ್ಥ. ಆದ್ರೆ, ಆ ಆಚರಣೆಗೆ ಬಜರಂಗದಳ ವಿರೋಧ ವ್ಯಕ್ತವಾಗುತ್ತಿದೆ. ಹಿಂದೂಗಳಿಗೆ ಯುಗಾದಿ ಹೊಸ ವರ್ಷ. ಆದ್ರೆ, ಪಾಶ್ಚಿಮಾತ್ಯ ಸಂಸ್ಕೃತಿ ಯಿಂದ ನಮ್ಮ ಸಂಸ್ಕೃತಿ ನಾಶವಾಗ್ತಿರೋದ್ರ ಜೊತೆ ಹೆಣ್ಣು ಮಕ್ಕಳು ಕೂಡ ತಮ್ಮ ಬದುಕು ಕಳೆದುಕೊಳ್ಳುತ್ತಿದೆ ಎಂದು ಬಜರಂಗದ ಹೊಸ ವರ್ಷದ ಆಚರಣೆಗೆ ವಿರೋಧ ತೋರಿದೆ.
ಹೊಸ ವರ್ಷದ ಆಚರಣೆ ನೆಪದಲ್ಲಿ ಲವ್‌ಜಿಹಾದ್ ಕೂಡ ಹೆಚ್ಚಾಗುತ್ತೆ, ಗುಂಡು-ತುಂಡಿ ಪಾರ್ಟಿಯಲ್ಲಿ ಹೆಣ್ಣು ಮಕ್ಕಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ಬಜರಂಗದಳ ನಗರ ಸಂಚಾಲಕ್ ಶ್ಯಾಮ್ ವಿ ಗೌಡ ಜಿಲ್ಲೆಯಲ್ಲಿ ನೂರಾರು ಅಕ್ರಮ ಹೋಂಸ್ಟೇ, ರೆಸಾರ್ಟ್ಗಳಿವೆ. ಕಾಫಿತೋಟಗಳ ಮಧ್ಯೆ ಇರುವ ಹೋಂಸ್ಟೇ, ರೆಸಾರ್ಟ್ಗಳಲ್ಲಿ ಏನೇ ನಡೆದರೂ ಯಾರಿಗೂ ಗೊತ್ತಾಗಲ್ಲ. ಹೊಸ ವರ್ಷದ ಪಾರ್ಟಿ ಹೆಸರಲ್ಲಿ ಹೆಣ್ಣು ಮಕ್ಕಳು ಕೂಡ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಜರಂಗದಳ ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್ಗೆ ಮನವಿ ಕೂಡ ಮಾಡಿದೆ.
New Year party: ಹೊಸ ವರ್ಷಾಚರಣೆ ಮೇಲೆ ಉಗ್ರರ ಕಣ್ಣು: ಹದ್ದಿನ ಕಣ್ಣಿಟ್ಟ ಖಾಕಿ ಪಡೆ
ಮನವಿಯಲ್ಲಿ ಏನಿದೆ ?
ಜಿಲ್ಲಾದ್ಯಂತ ಹೋಂಸ್ಟೇ, ರೆಸಾರ್ಟ್ ಮೇಲೆ ಹದ್ದಿನ ಕಣ್ಣಿಟ್ಟಿರೋ ಬಜರಂಗದಳ ಈಗಾಗಳೇ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರ ಜೊತೆಯೂ ಮಾತುಕತೆ ನಡೆಸಿದೆ. ನೀವು ಎಷ್ಟೆ ಅಷ್ಟೇ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಿ. ನಮ್ಮ ವಿರೋಧವಿಲ್ಲ. ಆದರೆ, ಮುಗ್ಧ ಹೆಣ್ಣು ಮಕ್ಕಳ ಜೀವನ ಹಾಳಾಗಲು ನೀವು ಕಾರಣಕರ್ತರಾಗಬೇಡಿ ಎಂದು ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರಿಗೆ ಮನವಿ ಮಾಡಿದ್ದಾರೆ.
Love Astrology 2023: ಹೊಸ ವರ್ಷದಲ್ಲಿ ಯಾವ ರಾಶಿಯ ಲವ್ ಲೈಫ್ ಹೇಗಿರುತ್ತೆ?
ಹೋಂಸ್ಟೇ, ರೆಸಾರ್ಟ್ಗಳಲ್ಲಿ ಕೇವಲ ಎಣ್ಣೆ ಪಾರ್ಟಿ ಮಾತ್ರ ನಡೆಯಲ್ಲ. ಡ್ರಗ್ ಪಾರ್ಟಿಯೂ ಇರುತ್ತೆ. ಹೆಣ್ಣು ಮಕ್ಕಳ ಭವಿಷ್ಯದ ಜೊತೆ ಡ್ರಗ್ ಹಾಗೂ ಸೆಕ್ಸ್ ಮಾಫಿಯಾ ಕೂಡ ಕೆಲಸ ಮಾಡ್ತಿರೋದ್ರಿಂದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ, 18 ವರ್ಷದೊಳಗಿನ ಹೆಣ್ಣು ಮಕ್ಕಳು ಬರುತ್ತಾರೆ. ಹೇಳೋರಿಲ್ಲ-ಕೇಳೋರಿಲ್ಲ. ಡಾಟಾಗಳನ್ನೂ ಸರಿಯಾಗಿ ನೀಡಲ್ಲ. ಕೆಲವರು ಹಣಕ್ಕಾಗಿ ಕೇಳಿದ ಕೂಡಲೇ ರೂಂಗಳನ್ನೂ ಕೊಡುತ್ತಾರೆ. ಇಂತಹಾ ಆಚರಣೆ, ಸಮಯ, ಸಂದರ್ಭದ ಬಳಸಿಕೊಂಡು ಹೆಣ್ಣು ಮಕ್ಕಳ ದುರುಪಯೋಗಕ್ಕೆ ನಮ್ಮ ವಿರೋಧ ಅಂತಾ ಬಜರಂಗದಳದ ಮುಖಂಡರು ಎಸ್ಪಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.