ಲವ್ ಜಿಹಾದ್ ದೇಶಕ್ಕೆ ಅಂಟಿದ ಪಿಡುಗು: ಚೈತ್ರಾ ಕುಂದಾಪುರ

By Gowthami KFirst Published Dec 30, 2022, 7:00 PM IST
Highlights

ಈ ದೇಶಕ್ಕೆ ಅಂಟಿರುವ ದೊಡ್ಡ ಪಿಡುಗು ಲವ್ ಜಿಹಾದ್,  ಹಿಂದೂ ಹೆಣ್ಣು ಮಗಳನ್ನು ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಏಕೈಕ ಪರ್ಯಾಯವೆಂದರೆ ನಮ್ಮ ಮನೆಯ ಹೆಣ್ಣು ಮಕ್ಕಳು ಜಾಗೃತರಾಗುವುದು ಎಂದು ಹಿಂದೂ ವಾಗ್ಮಿ ಚೈತ್ರ ಕುಂದಾಪುರ  ಕರೆ ನೀಡಿದರು.

ಉಡುಪಿ (ಡಿ.30): ಈ ದೇಶಕ್ಕೆ ಅಂಟಿರುವ ದೊಡ್ಡ ಪಿಡುಗು ಲವ್ ಜಿಹಾದ್, ವಂಶ ವಂಶದವರು ನೆನಪಿಟ್ಟುಕೊಳ್ಳುವ ಸಮಸ್ಯೆಯಾಗಿದೆ, ಹಿಂದೂ ಹೆಣ್ಣು ಮಗಳನ್ನು ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಏಕೈಕ ಪರ್ಯಾಯವೆಂದರೆ ನಮ್ಮ ಮನೆಯ ಹೆಣ್ಣು ಮಕ್ಕಳು ಜಾಗೃತರಾಗುವುದು. ಅದಕ್ಕಾಗಿ ಪ್ರತಿಯೊಬ್ಬ ಹೆಣ್ಣು ಮಗಳು ಧರ್ಮಶಿಕ್ಷಣ ಪಡೆದು ಜಾಗೃತಳಾಗಬೇಕಿದೆ ಎಂದು ಹಿಂದೂ ವಾಗ್ಮಿ ಚೈತ್ರ ಕುಂದಾಪುರ  ಕರೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿ ಉಡುಪಿಯಲ್ಲಿ ಆಯೋಜಿಸಿದ್ದ ಎರಡು ದಿನದ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀ. ಗಣೇಶ್ ಕಿಣಿ ಇವರು ಸಮಾಜದಲ್ಲಿ ಸಾತ್ತ್ವಿಕತೆಯು ಹೆಚ್ಚಾದರೆ ಹಿಂದೂ ರಾಷ್ಟ್ರ ಖಂಡಿತ ಸ್ಥಾಪನೆಯಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು. 

ನಟರಾಜ್ ಪರ್ಕಳ ಇವರು ಮಾತನಾಡಿ ನಾವು ಸಂಸ್ಕಾರಯುತರಾಗಿ ನಮ್ಮ ಮಕ್ಕಳನ್ನು ಸಂಸ್ಕಾರವಂತರಾಗಿ ಮಾಡಿದರೆ ಹಿಂದೂ ರಾಷ್ಟ್ರದ ನಿರ್ಮಾಣ ಮಾಡಬಹುದಾಗಿದೆ. ನಮ್ಮ ಇಂದಿನ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಿದರೆ ಅವರು ಮುಂದೆ ಉತ್ತಮ ಪ್ರಜೆಯಾಗಬಹುದು ಎಂದು ತಿಳಿಸಿದರು. 

ಉದ್ಯಮಿಗಳಾದ  ಸುಧೀಶ್ ನಾಯಕ್ ಮಾತನಾಡಿ ಹಿಂದೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಉದ್ಯಮಿಗಳ ಪಾತ್ರ ಹೇಗಿರಬೇಕು, ಧರ್ಮಕಾರ್ಯಕ್ಕಾಗಿ ಯೋಗದಾನ ಮಾಡುವುದರಿಂದಾಗುವ ಲಾಭಗಳ ಬಗ್ಗೆ ತಿಳಿಸಿದರು.

Love Jihad: ಇನ್‌ಸ್ಟಾಗ್ರಾಂ ಮೂಲಕ ಮುಸ್ಲಿಂ ಯುವಕನ ಮದುವೆಯಾದ ಯುವತಿ: ಲವ್ ಜಿಹಾದ್ ಆರೋಪ

ತ್ರಿಷಾ ಸಂಸ್ಥೆಯ ಸಂಸ್ಥಾಪಕರಾದ ಗೋಪಾಲ್ ಕೃಷ್ಣ ಭಟ್ ಮಾತನಾಡಿ ನಮ್ಮ ಮಕ್ಕಳಿಗೆ ಇಂದಿನ ಶಿಕ್ಷಣದ ಜೊತೆಗೆ ಹಿಂದಿನ ಜನರ ಜೀವನಶೈಲಿ ತಿಳಿಸಿಕೊಟ್ಟು ಮಕ್ಕಳ ಮನಸ್ಸನ್ನು ತಯಾರಿ ಮಾಡಬೇಕಾಗಿದೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೈತಿಕತೆ ಹೇಗೆ ಕುಸಿದಿದೆ ಅದನ್ನು ಸರಿಪಡಿಸಲು ಯಾವ ರೀತಿ ಪ್ರಯತ್ನ ಮಾಡಬಹುದು ಎಂಬುದರ ಬಗ್ಗೆ ತಿಳಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗೇರ್ ಹಿಂದೂ ರಾಷ್ಟ್ರಕ್ಕಾಗಿ ಸಂಘಟನೆಗಳ ಭೇದ ಭಾವವನ್ನು ತೊರೆದು ‘ಹಿಂದೂ ಎಂಬ ಭಾವನೆಯಲ್ಲಿ ಒಟ್ಟಾಗುವ ಬಗ್ಗೆ ಎಲ್ಲ ಸಂಘಟನೆಗಳ ಕಾರ್ಯಕರ್ತರಿಗೆ ಕರೆ ನೀಡಿದರು.

Love Jihad: ನಿವೇದಿತಾ ಪ್ರತಿಷ್ಠಾನದಿಂದ ಲವ್‌ ಜಿಹಾದ್‌ ಬಗ್ಗೆ ಜಾಗೃತಿ

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸೌ. ಮಂಜುಳಾ ಗೌಡ ಮಾತನಾಡಿ ಹಿಂದೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಆಧ್ಯಾತ್ಮಿಕ ಬಲ ಮಹತ್ವದ್ದಾಗಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಸಾಧನೆಯನ್ನು ಮಾಡಬೇಕು ಮತ್ತು ಧರ್ಮಶಿಕ್ಷಣ ಪಡೆಯುವುದರಿಂದ ನಾವು ಸಾತ್ತ್ವಿಕರಾಗಬಹುದು ಎಂದರು. ಅನೇಕ ಸಂತರ ಭವಿಷ್ಯವಾಣಿಯ ಉದಾಹರಣೆಗಳನ್ನು ನೀಡುತ್ತಾ ಮುಂಬರುವ ಕಾಲವು ಅತ್ಯಂತ ಭೀಕರವಾಗಿರಲಿದ್ದು ಆ ಸಮಯದಲ್ಲಿ ನಮ್ಮ ರಕ್ಷಣೆಯಾಗಲು ಆಧ್ಯಾತ್ಮಿಕ ಬಲವೇ ಅತ್ಯಾವಶ್ಯಕ ಎಂದರು.

click me!