ಕೆರೂರ ಗಲಭೆಯಲ್ಲಿ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನ ಖಂಡಿಸಿ ಇಂದು ಕರೆ ನೀಡಿದ್ದ ಬಾಗಲಕೋಟೆ ಬಂದ್ ಯಶಸ್ವಿಯಾಯಿತು. ಬೆಳಿಗ್ಗೆಯಿಂದಲೇ ಇಡೀ ಜಿಲ್ಲಾ ಕೇಂದ್ರವನ್ನೇ ಬಂದ್ ಮಾಡಲಾಗಿತ್ತು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜು.11): ಕೆರೂರ ಗಲಭೆಯಲ್ಲಿ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನ ಖಂಡಿಸಿ ಇಂದು ಕರೆ ನೀಡಿದ್ದ ಬಾಗಲಕೋಟೆ ಬಂದ್ ಯಶಸ್ವಿಯಾಯಿತು. ಬೆಳಿಗ್ಗೆಯಿಂದಲೇ ಇಡೀ ಜಿಲ್ಲಾ ಕೇಂದ್ರವನ್ನೇ ಬಂದ್ ಮಾಡಲಾಗಿತ್ತು. ವಿವಿಧ ಹಿಂದೂಪರ ಸಂಘಟನೆಗಳು ಬಂದ್ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಬ, ಹುತೇಕ ಎಲ್ಲ ಅಂಗಡಿಮುಂಗಟ್ಟುಗಳು ಬಂದ್ ಆಗಿ ವ್ಯಾಪಾರ ವಹಿವಾಟ ಬಂದ್ ಆಗಿತ್ತು. ಈ ಮಧ್ಯೆ ಬೃಹತ್ ಪ್ರತಿಭಟನಾ ಹೋರಾಟ ನಡೆಸಲಾಯಿತು.
ಒಂದೆಡೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಮತ್ತೊಂದೆಡೆ ಕೈಯಲ್ಲಿ ಕೇಸರಿ ಧ್ವಜ ಹಿಡಿದು ಹೊರಟ ಯುವಕರ ಪ್ರತಿಯೊಬ್ಬರ ಬಾಯಲ್ಲಿ ಜೈ ಶ್ರೀರಾಮ, ಜೈ ಜೈ ಶ್ರೀರಾಮ ಘೋಷಣೆ, ಇವುಗಳ ಮಧ್ಯೆ ಕೆರೂರು ಗಲಭೆಕೊರರ ಬಂಧಿಸಿ ಕಠಿಣ ಶಿಕ್ಷೆಗೆ ಆಗ್ರಹಿಸುತ್ತಾ ಹೋರಾಟ ನಡೆಸಿದ ಪ್ರತಿಭಟನಾನಿರತರು, ಸಾಲದ್ದಕ್ಕೆ ಗಲ್ಲಿಗಲ್ಲಿಗೂ ನಿಂತಿದ್ದ ಪೋಲಿಸ ಪಡೆ. ಅಂದಹಾಗೆ ಇಂತಹ ದೃಶ್ಯಗಳು ಇಂದು ಕಂಡುಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ಹೌದು! ವಿವಿಧ ಹಿಂದೂಪರ ಸಂಘಟನೆಗಳು ಇಂದು ಕರೆ ನೀಡಿದ್ದ ಬಾಗಲಕೋಟೆ ಬಂದ್ ಕರೆ ಹಿನ್ನೆಲೆಯಲ್ಲಿ ಪ್ರತಿಭಟನಾ ಹೋರಾಟ ನಡೆಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಎಲ್ಲೆಲ್ಲೂ ಹಿಂದೂ ಭಾವುಟಗಳು ರಾರಾಜಿಸುತ್ತಿದ್ದವು.
Bagalkot: ಕೆರೂರ ಪಟ್ಟಣ ಗಲಾಟೆಗೆ ಹಳೇ ದ್ವೇಷ ಹಾಗೂ ಯುವತಿಯರನ್ನು ಚುಡಾಯಿಸಿದ್ದೇ ಮೂಲ ಕಾರಣ!
ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ ಬೀದಿಗಿಳಿದ ವಿವಿಧ ಹಿಂದೂಪರ ಸಂಘಟನೆಗಳು: ಜುಲೈ 6ರಂದು ಕೆರೂರು ಪಟ್ಟಣದಲ್ಲಿ ನಡೆದಿದ್ದ ಗಲಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ ಕಟ್ಟಿಮನಿ ಹಾಗೂ ಆತನ ಸಹೋದರ ಲಕ್ಷ್ಮಣ ಕಟ್ಟಿಮನಿ, ಯಮನೂರು ಚುಂಗಿನ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹೀಗಾಗಿ ಕೆರೂರು ಗಲಭೆಯಲ್ಲಿ ಹಿಂದೂಗಳ ಮೇಲೆ ಹಲ್ಲೆಯಾಗಿರೋ ಕ್ರಮವನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಇಂದು ಬಾಗಲಕೋಟೆ ನಗರ ಬಂದ್ ಗೆ ಕರೆ ನೀಡಿದ್ವು. ಬಾಗಲಕೋಟೆ ನಗರ ಬಂದ್ ಪ್ರತಿಭಟನೆಯಲ್ಲಿ ಬಿಜೆಪಿ, ವಿವಿಧ ಹಿಂದುಪರ ಸಂಘಟನೆಗಳ ಮುಖಂಡರು ಸಹ ಭಾಗಿಯಾಗಿದ್ರು.
ಈ ವೇಳೆ ಬಹಿರಂಗ ಸಭೆಯಲ್ಲಿ ನಡೆದ ಭಾಷಣದಲ್ಲಿ ಮಾತನಾಡಿದ ಹಿರೆಹಡಗಲಿ ಸಂಸ್ಥಾನ ಮಠದ ಹಾಲು ಅಭಿನವ ಸ್ವಾಮೀಜಿ, ನಮ್ಮ ಹನಿ ಹನಿ ರಕ್ತದಿಂದ ಆರಿಸಿ ಬಂದವರು ಹಲ್ಲೆಕೋರರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳೋದಿಲ್ಲ. ಕೆರೂರು ಹಿಂದು ಕಾರ್ಯಕರ್ತರ ಮೇಲೆ ಹಲ್ಲೆಗೈದವರ ಮೇಲೆ ಕೇವಲ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳ್ತಾರೆ. ಕಠಿಣ ಕ್ರಮ ಅಂದರೆ ಸುಮ್ಮನೆ ಯಥಾಸ್ಥಿತಿಯಲ್ಲಿ ಬಿಡೋದು, ಹಿಂದುಗಳು ಸುಮ್ಮನೆ ಕೂರಬಾರದು. ಸರಕಾರ ಕ್ರಮ ಕೈಗೊಳ್ಳದಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಹೇಳಿದ್ರು.
ಬಾಗಲಕೋಟೆಯಲ್ಲಿ ಮುಚ್ಚಿದ ಅಂಗಡಿಗಳು: ಇನ್ನು ಬಂದ್ ಕರೆ ನೀಡಿದ್ದರಿಂದ ಬಾಗಲಕೋಟೆ ನಗರದಲ್ಲಿ ಬೆಳಗ್ಗೆಯಿಂದ ಯಾವುದೇ ಅಂಗಡಿ ಮುಂಗಟ್ಟುಗಳು ಓಪನ್ ಆಗಿರಲಿಲ್ಲ. ಹಳೇ ಬಾಗಲಕೋಟೆಯ ಬಹುತೇಕ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಹೀಗಾಗಿ ಇಂದು ವ್ಯಾಪಾರ ವಹಿವಾಟಗಳೆಲ್ಲಾ ಸ್ಥಗಿತಗೊಂಡಿದ್ದವು. ಬಾಗಲಕೋಟೆ ಬಂದ್ಗೆ ವ್ಯಾಪಾರಸ್ಥರ ಒಕ್ಕೂಟ, ಹೊಟೇಲ್ಗಳ ಒಕ್ಕೂಟ ಸೇರಿದಂತೆ ವಿವಿಧ ಒಕ್ಕೂಟಗಳು ಬೆಂಬಲ ನೀಡಿದ್ದವು. ಬೆಳಗಿನಿಂದ ಮಧ್ಯಾಹ್ನದವರೆಗೆ ಪ್ರತಿಭಟನಾ ಕಾವು ಜೋರಾಗಿತ್ತು. ಇನ್ನು ಇವುಗಳ ಮಧ್ಯೆ ಎಂದಿನಂತೆ ಅತ್ತ ಬಸ್, ಅಟೋ ಸಹಿತ ಖಾಸಗಿ ವಾಹನಗಳ ಓಡಾಟ ಕಂಡು ಬಂತು. ಈ ಮಧ್ಯೆ ಎಂದಿನಂತೆ ಶಾಲಾ ಕಾಲೇಜುಗಳು ಸಹ ಆರಂಭವಾಗಿದ್ದು ಕಂಡು ಬಂತು.
ಪ್ರಮುಖ ಬೀದಿಗಳಲ್ಲಿ ಹಿಂದೂಗಳ ಪ್ರತಿಭಟನಾ ಮೆರವಣಿಗೆ: ಬಾಗಲಕೋಟೆ ಬಂದ್ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆ ನಗರದ ಕಿಲ್ಲಾ ಗಲ್ಲಿಯ ಅಂಭಾ ಭವಾನಿ ಮಂದಿರದಿಂದ ಪ್ರತಿಭಟನೆ ಆರಂಭಿಸಲಾಯ್ತು. ಪಂಕಾ ಮಸೀದಿ ಬಳಿ ಜಿಲ್ಲಾ ಪೊಲೀಸ್ ಕಣ್ಗಾವಲು ಇರಿಸಿತ್ತು. ಇನ್ನು ಪ್ರತಿಭಟನಾ ಮೆರವಣಿಗೆ ಪಂಕಾ ಮಸೀದಿಯಿಂದ ಹೂವಿನ ಬಜಾರ್, ತರಕಾರಿ ಮಾರ್ಕೆಟ್, ವಲ್ಲಭಬಾಯಿ ಚೌಕ್ ಮೂಲಕ ಬಸವೇಶ್ವರ ಸರ್ಕಲ್‌ಗೆ ಬಂದು ನಂತರ ಬಹಿರಂಗ ವೇದಿಕೆಯಾಗಿ ಸಮಾವೇಶಗೊಂಡಿತು. ಇನ್ನು ಪ್ರತಿಭಟನೆ ಬಸವೇಶ್ವರ ಸರ್ಕಲ್ ಬಳಿ ಬರ್ತಿದ್ದಂತೆ ಪ್ರತಿಭಟನಾಕಾರರು ಟೈರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಟೈರ್‌ಗೆ ಬೆಂಕಿ ಹಚ್ಚದಂತೆ ತಡೆದರು. ಈ ವೇಳೆ ಕೈ ಮುಗಿತೀವಿ ಬೆಂಕಿ ಹಚ್ಚಲು ಅವಕಾಶ ಕೊಡಿ ಅಂದ ಕಾರ್ಯಕರ್ತರಿಗೆ ಮರಳಿ ಕೈ ಮುಗಿದ ಡಿವೈಎಸ್ಪಿ ಮುನ್ನೊಳ್ಳಿ ಟೈರ್‌ಗೆ ಬೆಂಕಿ ಹಚ್ಚದೇ ಇರೋವಂತೆ ನೋಡಿಕೊಂಡರು. ಇನ್ನು ಬಹಿರಂಗ ಭಾಷಣದಲ್ಲಿ ಪ್ರಚೋದನಕಾರಿ ಭಾಷಣಗಳು ಕೇಳಿ ಬಂದವು.
ಬಾಗಲಕೋಟೆ: ಎರಡು ಅನ್ಯಕೋಮಿನ ಗುಂಪುಗಳ ಮಧ್ಯೆ ಗಲಾಟೆ, ಅಂಗಡಿಗಳಿಗೆ ಬೆಂಕಿ , ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ
ಪ್ರತಿಭಟನಾ ಹೋರಾಟದಲ್ಲಿ ಮಹಿಳೆಯರು ಸಹ ಭಾಗಿ: ಇನ್ನು ವಿವಿಧ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಮಹಿಳೆಯರು ಸಹ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಮಹಿಳೆಯರು ಘೋಷಣೆಗಳನ್ನ ಕೂಗುತ್ತಾ ಮುನ್ನಡೆದರು. ಬಿಜೆಪಿ ನಗರಸಭಾ ಸದಸ್ಯರು, ಬಿಜೆಪಿ ಮಹಿಳಾ ಮುಖಂಡರು ಪ್ರತಿಭಟನಾ ಮೆರವಣಿಗೆ ಆರಂಭದಿಂದ ಕೊನೆಯವರೆಗೂ ಸಹ ಭಾಗವಹಿಸಿದ್ದು ಕಂಡು ಬಂತು. ಒಟ್ಟಿನಲ್ಲಿ ಕೆರೂರು ಪಟ್ಟಣದ ಗಲಭೆ ಎಫೆಕ್ಟ್ ಇದೀಗ ಮೆಲ್ಲಗೆ ಜಿಲ್ಲೆಯ ಬೇರೆ ಬೇರೆ ಕಡೆಗಳಿಗೆ ವ್ಯಾಪಿಸುತ್ತಿದ್ದು, . ಮೊನ್ನೆ ಕೆರೂರು ಪಟ್ಟಣದ ತಾಲ್ಲೂಕ ಕೇಂದ್ರ ಬಾದಾಮಿ ಬಂದ್ ಮಾಡಿ ಪ್ರತಿಭಟಿಸಲಾಗಿತ್ತು. ಇವತ್ತು ಬಾಗಲಕೋಟೆ ಬಂದ್ಗೆ ಕರೆ ನೀಡಲಾಗಿತ್ತು. ಒಟ್ಟಿನಲ್ಲಿ ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನಾ ಹೋರಾಟಗಳು ಮುಂದುವರೆದಿವೆ.